ಪವಿತ್ರ ಪೀಠ ಮತ್ತು ರಷ್ಯಾ ಉಕ್ರೇನ್ ಯುದ್ಧ ನಿಲ್ಲಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿವೆ
ವರದಿ: ವ್ಯಾಟಿಕನ್ ನ್ಯೂಸ್
ವ್ಯಾಟಿಕನ್ನಿನ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿಯಾದ ಆರ್ಚ್'ಬಿಷಪ್ ಪೌಲ್ ರಿಚರ್ಡ್ ಗ್ಯಾಲಘರ್ ಅವರು ರಷ್ಯಾದ ಪ್ರತಿನಿಧಿಯೊಂದಿಗೆ ಫೋನ್ ಮೂಲಕ ಮಾತನಾಡಿ, ಉಕ್ರೇನ್ ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಯುದ್ಧಧ ಸನ್ನಿವೇಷ ಹಾಗೂ ಯುದ್ಧವನ್ನು ನಿಲ್ಲಿಸುವ ಸಾಧ್ಯತೆಗಳ ಕುರಿತು ಚರ್ಚಿಸಿದ್ದಾರೆ ಎಂದು ವರದಿಯಾಗಿದೆ.
ಈ ಮಾತುಕತೆಯ ವೇಳೆ ಯುದ್ಧಗ್ರಸ್ಥ ಪ್ರದೇಶಗಳಿಗೆ ಮಾನವೀಯ ನೆರವನ್ನು ಕಳುಹಿಸುವುದು, ಯುದ್ಧಖೈದಿಗಳನ್ನು ಬಿಡುಗಡೆ ಮಾಡುವುದು ಮುಂತಾದಂತೆ ವಿವಿಧ ವಿಷಯಗಳ ಕುರಿತು ಚರ್ಚೆಯನ್ನು ನಡೆಸಲಾಗಿದೆ.
ವ್ಯಾಟಿಕನ್ನಿನ ಮಾಧ್ಯಮ ಕಚೇರಿಯ ಪ್ರಕಟಣೆಯ ಪ್ರಕಾರ ವ್ಯಾಟಿಕನ್ನಿನಿಂದ ಆರ್ಚ್'ಬಿಷಪ್ ಪೌಲ್ ರಿಚರ್ಡ್ ಗ್ಯಾಲಘರ್ ಹಾಗೂ ರಷ್ಯಾದ ವಿದೇಶಾಂಗ ಸಚಿವ ಸರ್ಜೀ ಲಾವ್ರೋವ್ ಅವರು ಉಕ್ರೇನ್ ಭಿಕ್ಕಟ್ಟು ಹಾಗೂ ಆ ಕುರಿತು ವಿವಿಧ ಅಂಶಗಳ ಕುರಿತು ಚರ್ಚಿಸಿದ್ದಾರೆ.
ಮೂರು ವರ್ಷಗಳ ಹಿಂದೆ ಉಕ್ರೇನ್‌ನ ಮೇಲೆ ರಷ್ಯಾದ ಪೂರ್ಣ ಪ್ರಮಾಣದ ಆಕ್ರಮಣ ಪ್ರಾರಂಭವಾದ ನಂತರದ ಅತಿದೊಡ್ಡ ವಿನಿಮಯಗಳಲ್ಲಿ ಒಂದರಲ್ಲಿ, ಮಾರ್ಚ್‌ನಲ್ಲಿ ರಷ್ಯಾ ಮತ್ತು ಉಕ್ರೇನ್ ತಲಾ 175 ಕೈದಿಗಳನ್ನು ವಿನಿಮಯ ಮಾಡಿಕೊಂಡಿವೆ ಎಂದು ಹೇಳಿವೆ.
ಉಕ್ರೇನ್‌ನೊಂದಿಗಿನ ಇತ್ತೀಚಿನ ಎರಡು ಕೈದಿಗಳ ವಿನಿಮಯಗಳಲ್ಲಿ ಒಂದು ಡಜನ್‌ಗಿಂತಲೂ ಹೆಚ್ಚು ರಷ್ಯಾದ ಸೈನಿಕರ ಮರಳುವಿಕೆಗೆ ಮಧ್ಯಸ್ಥಿಕೆ ವಹಿಸುವಲ್ಲಿ ವ್ಯಾಟಿಕನ್ ಪಾತ್ರವನ್ನು ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರರು ಒಪ್ಪಿಕೊಂಡಿದ್ದಾರೆ.
ಜನವರಿಯಲ್ಲಿ, ರಷ್ಯಾದ ವಿದೇಶಾಂಗ ಸಚಿವಾಲಯದ ಪತ್ರಿಕಾ ನಿರ್ದೇಶಕಿ ಮಾರಿಯಾ ಜಖರೋವಾ ಅವರು ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಪೋಪ್ ಫ್ರಾನ್ಸಿಸ್ ಅವರ ನಿಲುವನ್ನು ಮತ್ತು ರಷ್ಯಾ ಮತ್ತು ಹೋಲಿ ಸೀ ನಡುವಿನ ಸಹಕಾರದ ಕಾಂಕ್ರೀಟ್ ಮಾನವೀಯ ಫಲಿತಾಂಶಗಳನ್ನು ಶ್ಲಾಘಿಸಿದರು.