MAP

ಶುಭಸಂದೇಶಗಳ ವ್ಯಕ್ತಿ ಚಿತ್ರಣಗಳು: ಜಕ್ಕಾಯ

ಪೋಪ್ ಫ್ರಾನ್ಸಿಸ್ ಅವರು ವ್ಯಾಖ್ಯಾನಿಸಿದಂತೆ ಶುಭ ಸಂದೇಶದ ವ್ಯಕ್ತಿಗಳ ಚಿತ್ರಣಗಳು

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಫ್ರಾನ್ಸಿಸ್ ಅವರು ಯೇಸು ಕ್ರಿಸ್ತರ ಬದುಕಿನಲ್ಲಿ ಬಂದು ಹೋದ ವಿವಿಧ ವ್ಯಕ್ತಿಗಳ ವ್ಯಕ್ತಿ ಚಿತ್ರಣಗಳನ್ನು ವ್ಯಾಖ್ಯಾನಿಸಿದ್ದಾರೆ. ಪೋಪ್ ಫ್ರಾನ್ಸಿಸ್ ಅವರ ಈ ವ್ಯಾಖ್ಯಾನಗಳನ್ನು ವಿಡಿಯೋ ಸರಣಿಗಳಾಗಿ ಈಸ್ಟರ್ ಹಬ್ಬಕ್ಕೆ ಪ್ರಸಾರ ಮಾಡಲು ವ್ಯಾಟಿಕನ್ನಿನ ಮಾಧ್ಯಮ ಸಂವಹನ ಪೀಠ, ವ್ಯಾಟಿಕನ್ ಗ್ರಂಥಾಲಯ ಹಾಗೂ ರೋಮ್ ನಗರದ ಸಾರ್ವಜನಿಕ ಪ್ರಸರಣ ಸಂಸ್ಥೆ ರಾಯ್ ಕುಲ್ಚುರಾ ನಿರ್ಧರಿಸಿದೆ. ಹದಿನೆಂಟು ಎಪಿಸೋಡುಗಳ ಈ ಸರಣಿಯನ್ನು ಪೋಪ್ ಫ್ರಾನ್ಸಿಸ್ ಅವರು ವ್ಯಾಖ್ಯಾನಿಸಿ ನಿರೂಪಿಸಿದ್ದಾರೆ ಎಂದು ಹೇಳಲಾಗಿದೆ.

ಅಂದ್ರೇಯ ತೊರ್ನಿಯೆಲ್ಲಿ ಹಾಗೂ ಲುಚಿಯೋ ಬ್ರುನೆಲ್ಲಿ ಅವರು ಈ ಸರಣಿಯನ್ನು ಸೃಷ್ಟಿಸಿದ್ದು, ರೆನಾಟೋ ಸರಿಸೋಲಾ ಅವರು ಇದನ್ನು ನಿರ್ದೇಶಿಸಿ, ಚಿತ್ರೀಕರಿಸಿದ್ದಾರೆ. ಮಿಖಿಲೆಂಜಲೋ ಪಾರ್ಮಕ್ಕಿ ಅವರು ಇದಕ್ಕೆ ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ.

ಈ ವಿಡಿಯೋ ಸರಣಿಗಳ ಇಂಗ್ಲೀಷ್ ಅನುವಾದಕ್ಕಾಗಿ ನೀವು ಕ್ಲೋಸ್ಡ್ ಕ್ಯಾಪ್ಷನ್ ಅನ್ನು ಉಪಯೋಗಿಸಬಹುದು.

ವ್ಯಾಟಿಕನ್ನಿನ ಸಂಪಾದಕೀಯ ನಿರ್ದೇಶಕರಾಗಿರುವಂತಹ ಅಂದ್ರೇಯ ತೊರ್ನಿಯೆಲ್ಲಿ ಅವರು ಈ ಕುರಿತು ಮಾತನಾಡಿ "ಪೋಪ್ ಫ್ರಾನ್ಸಿಸ್ ಅವರು ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರ ಧ್ವನಿಯನ್ನು ನಾವು ಹೆಚ್ಚು ಕೇಳಲಾಗುತ್ತಿಲ್ಲ. ಈ ಸಂದರ್ಭದಲ್ಲಿ ಈ ವಿಡಿಯೋ ಸರಣಿಗಳು ಪೋಪ್ ಫ್ರಾನ್ಸಿಸ್ ಅವರ ಧ್ವನಿಯನ್ನು ನಾವು ಹೆಚ್ಚು ಕೇಳಲು ಅವಕಾಶ ಮಾಡಿಕೊಡುತ್ತವೆ" ಎಂದು ಹೇಳಿದ್ದಾರೆ.

09 ಏಪ್ರಿಲ್ 2025, 13:27