ಫಾದರ್ ಪಸೋಲಿನಿ ಅವರಿಂದ ತಪಸ್ಸುಕಾಲದ ಮೂರನೇ ಪ್ರಬೋಧನೆ
ವರದಿ: ವ್ಯಾಟಿಕನ್ ನ್ಯೂಸ್
ಪೋಪರ ನಿವಾಸದ ಅಧಿಕೃತ ಪ್ರಬೋಧಕರಾಗಿರುವ ಕಪುಚಿನ್ ಸಭೆಯ ಫಾದರ್ ರೊಬೆರ್ತೋ ಪಸೋಲಿನಿ ಅವರು ತಪಸ್ಸು ಕಾಲದ ಮೂರನೇಯ ಪ್ರಬೋಧನೆಯನ್ನು ಆರಂಭಿಸಿದ್ದಾರೆ.
ಈ ಪ್ರಬೋಧನೆಯ ಶೀರ್ಷಿಕೆ "ಮತ್ತೆ ಏಳುವುದು ಹೇಗೆ?" ಎಂಬುದಾಗಿದೆ ಎಂದು ವರದಿಯಾಗಿದೆ. ಫಾದರ್ ಪಸೋಲಿನಿ ಅವರು ಈ ಪ್ರಬೋಧನಾ ಸರಣಿಯಲ್ಲಿ ಯೇಸುಕ್ರಿಸ್ತರ ಪುನರುತ್ಥಾನದ ಕುರಿತು ಗಮನವನ್ನು ಕೇಂದ್ರೀಕರಿಸಿದ್ದಾರೆ.
ಅವರ ಹಿಂದಿನ ಪ್ರಬೋಧನೆಗಳು ಯೇಸುಕ್ರಿಸ್ತರ ಬಾಲ್ಯ ಹಾಗೂ ಅವರ ದೀಕ್ಷಾಸ್ನಾನದ ಕುರಿತಾಗಿದ್ದವು ಎಂಬುದನ್ನು ನಾವಿಲ್ಲಿ ಸ್ಮರಿಸಬಹುದು.
ನಾವು ಪುನರುತ್ಥಾನದ ಕಡೆಗೆ ತಿರುಗಿದಾಗ, ನಾವು "ಸಂಕಟ ಮತ್ತು ಸಾವಿನ ಭಯದಿಂದ ಮುಳುಗಿಹೋಗದಿರಲು" ಕಲಿಯುತ್ತೇವೆ, ಬದಲಿಗೆ ಕ್ರಿಸ್ತನ ಪ್ರೀತಿ ನಮಗೆ ಮಾರ್ಗದರ್ಶನ ನೀಡುವ ಗುರಿಯ ಮೇಲೆ ನಮ್ಮ ದೃಷ್ಟಿಯನ್ನು ಕೇಂದ್ರೀಕರಿಸಲು ಕಲಿಯುತ್ತೇವೆ.
ವೈಫಲ್ಯದಿಂದ ಮೇಲೇರಲು ಸಾಧ್ಯವಿಲ್ಲ ಎಂಬ ಕಲ್ಪನೆಯನ್ನು ತ್ಯಜಿಸಿ, ಬದಲಾಗಿ ನಾವು ಹೊಸದಾಗಿ ಪ್ರಾರಂಭಿಸಬಹುದು ಮತ್ತು ಇತರರಿಗೆ ಮತ್ತೊಮ್ಮೆ ನಮ್ಮನ್ನು ತೆರೆದುಕೊಳ್ಳಬಹುದು ಎಂದು ನಂಬುವುದು "ಅಮೂಲ್ಯವಾದ ತ್ಯಾಗ"ವನ್ನು ಬಯಸುತ್ತದೆ ಎಂದು ಫಾದರ್ ಪಸೋಲಿನಿ ಹೇಳಿದರು.