ಭರವಸೆ ಮತ್ತು ಶಾಂತಿಯ ಬೀಜಗಳು: ಸೃಷ್ಟಿಯ ಕಾಳಜಿಗಾಗಿ ವಿಶ್ವ ಪ್ರಾರ್ಥನಾ ವರ್ಷದ ಶೀರ್ಷಿಕೆ
ವರದಿ: ವ್ಯಾಟಿಕನ್ ನ್ಯೂಸ್
ವ್ಯಾಟಿಕನ್ನಿನ ಸಮಗ್ರ ಮಾನವ ಅಭಿವೃದ್ಧಿ ಪೀಠವು ಸೃಷ್ಟಿಯ ಕಾಳಜಿಗಾಗಿ ವಿಶ್ವ ಪ್ರಾರ್ಥನಾ ವರ್ಷಕ್ಕೆ ಪೋಪ್ ಫ್ರಾನ್ಸಿಸ್ ಅವರು ಆಯ್ಕೆ ಮಾಡಿರುವ ಶೀರ್ಷಿಕೆಯನ್ನು ಪ್ರಕಟಿಸಿದೆ. ಭರವಸೆ ಮತ್ತು ಶಾಂತಿಯ ಬೀಜಗಳು ಎಂಬುದು ಶೀರ್ಷಿಕೆಯಾಗಿದೆ.
2025 ರ ಸೃಷ್ಟಿಯ ಕಾಳಜಿಗಾಗಿ ವಿಶ್ವ ಪ್ರಾರ್ಥನಾ ವರ್ಷವು ಜ್ಯೂಬಿಲಿ ವರ್ಷದ ಸಂದರ್ಭದಲ್ಲಿ ನಡೆಯುತ್ತದೆ ಹಾಗೂ ಪೋಪ್ ಫ್ರಾನ್ಸಿಸ್ ಅವರ ನಿಸರ್ಗದ ಕುರಿತ "ಲೌದಾತೋ ಸೀ" ಪ್ರೇಷಿತ ಪತ್ರಕ್ಕೆ ಇದೇ ವರ್ಷ ಹತ್ತು ವರ್ಷಗಳಾಗಲಿವೆ ಎಂಬುದು ಇದರ ವಿಶೇಷವಾಗಿದೆ.
ಭರವಸೆ ಮತ್ತು ಶಾಂತಿಯ ಬೀಜಗಳು ಎಂಬುದು ಪೋಪ್ ಫ್ರಾನ್ಸಿಸ್ ಅವರು ಆರಿಸಿರುವ ಶೀರ್ಷಿಕೆಯಾಗಿದೆ. ಈ ಕುರಿತು ವ್ಯಾಟಿಕನ್ನಿನ ಸಮಗ್ರ ಮಾನವ ಅಭಿವೃದ್ಧಿ ಪೀಠವು ಪ್ರಕಟಣೆಯನ್ನು ನೀಡಿದ್ದು, ಇದು ಸೃಷ್ಟಿಯ ಕಾಳಜಿಯ ಕುರಿತ ಉಪಕ್ರಮವಾಗಿದೆ.
ಅದೇ ರೀತಿ, ಯುದ್ಧ ಮತ್ತು ನಮ್ಮ ಗ್ರಹದ ಅವನತಿಯ ನಡುವೆ ಬಲವಾದ ಸಂಬಂಧವಿದೆ, ಇದು ವಿನಾಶ ಮತ್ತು ಶಸ್ತ್ರಾಸ್ತ್ರಗಳ ಮೂಲಕ ಸಂಪನ್ಮೂಲಗಳ ವ್ಯರ್ಥದಲ್ಲಿ ಕಂಡುಬರುತ್ತದೆ.
ಶಾಂತಿಗೆ ಅನುಕೂಲಕರವಾದ ಪರಿಸ್ಥಿತಿಗಳನ್ನು ಸೃಷ್ಟಿಸಲು - ಭರವಸೆಯನ್ನು ಹುಟ್ಟುಹಾಕುವ ಶಾಶ್ವತ, ಹಂಚಿಕೆಯ ಶಾಂತಿ - ಒಟ್ಟಾಗಿ ಪ್ರಾರ್ಥಿಸಲು ವ್ಯಾಟಿಕನ್ನಿನ ಸಮಗ್ರ ಮಾನವ ಅಭಿವೃದ್ಧಿ ಪೀಠದ ಹೇಳಿಕೆಯು ಕ್ರೈಸ್ತರನ್ನು ಆಹ್ವಾನಿಸಿತು.