ವ್ಯಾಟಿಕನ್‌ನಲ್ಲಿ ನಡೆದ ಕಾರ್ಡಿನಲ್‌ಗಳ ಎರಡನೇ ಸಾರ್ವತ್ರಿಕ ಸಭೆ
ಕಾರ್ಡಿನಲ್‌ಗಳ ಎರಡನೇ ಸಾಮಾನ್ಯ ಸಭೆಯು ಬುಧವಾರ ಮಧ್ಯಾಹ್ನ ಸಿನೊಡ್ ಹಾಲ್‌ನಲ್ಲಿ ಸಂಜೆ ಸುಮಾರು 5:00 ಗಂಟೆಗೆ ಪ್ರಾರಂಭವಾಯಿತು ಮತ್ತು ಸಂಜೆ 6:30 ಕ್ಕೆ ಕೊನೆಗೊಂಡಿತು.
ಜಗದ್ಗುರುಗಳ ಪತ್ರಿಕಾ ಕಚೇರಿಯ ಪ್ರಕಾರ, 103 ಕಾರ್ಡಿನಲ್‌ಗಳು ಹಾಜರಿದ್ದರು. 'ವೆನೀ, ಸ್ಯಾಂಕ್ತೇ ಸ್ಪಿರಿತುಸ್' ಮತ್ತು ನಂತರ ಪೋಪ್ ಫ್ರಾನ್ಸಿಸ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿದರು. ಮಂಗಳವಾರದ ಸಾಮಾನ್ಯ ಸಭೆಯಲ್ಲಿ ಹಾಜರಿರದ ಕಾರ್ಡಿನಲ್‌ಗಳು ಪ್ರಮಾಣವಚನ ಸ್ವೀಕರಿಸಿದರು.
ಪೋಪ್‌ಗಾಗಿ ಪ್ರಾಚೀನ ಒಂಬತ್ತು ದಿನಗಳ ಶೋಕಾಚರಣೆಯ ಅವಧಿಯಾದ ನೊವೆಮ್ಡಿಯಲ್ಸ್ ಕಾರ್ಯಕ್ರಮವನ್ನು ಅನುಮೋದಿಸಲಾಯಿತು. ಮುಂದಿನ ಸಾಮಾನ್ಯ ಸಭೆಯು ಗುರುವಾರ ಬೆಳಿಗ್ಗೆ 9:00 ಗಂಟೆಗೆ ನಡೆಯಲಿದೆ.
ಮಂಗಳವಾರ ಬೆಳಿಗ್ಗೆ ನಡೆದ ಮೊದಲ ಸಾಮಾನ್ಯ ಸಭೆಯಲ್ಲಿ, ನವ ಜಗದ್ಗುರುಗಳು ಅನುಮೋದಿಸುವವರೆಗೆ ಎಲ್ಲಾ ನಿಗದಿತ ಪುನೀತ ಪದಪ್ರಧಾನಗಳನ್ನು ಸ್ಥಗಿತಗೊಳಿಸಲು ಕಾರ್ಡಿನಲ್ಸ್ ನಿರ್ಧರಿಸಿದರು.
ಇದಲ್ಲದೆ, ಯೂನಿವರ್ಸಿ ಡೊಮಿನಿಸಿ ಗ್ರೆಗಿಸ್‌ನ ಕಾನೂನುಗಳಿಗೆ ಅನುಗುಣವಾಗಿ, 'ಸೇದೆ ವೆಕಾಂತೆಯ' (ಖಾಲಿ ಸ್ಥಾನ) ಸಮಯದಲ್ಲಿ ಧರ್ಮಸಭೆಯ ಆಡಳಿತದಲ್ಲಿ ಕ್ಯಾಮರ್ಲೆಂಗೊಗೆ ಸಹಾಯ ಮಾಡಲು ಮೂವರು ಕಾರ್ಡಿನಲ್‌ಗಳ ಆಯೋಗವನ್ನು ಚೀಟು ಹಾಕುವುದರ ಮೂಲಕ ಆಯ್ಕೆ ಮಾಡಲಾಯಿತು.
ಈ ಮೂವರು ಕಾರ್ಡಿನಲ್ಸ್ ಕಾಲೇಜಿನ ಮೂರು ಆದೇಶಗಳನ್ನು ಪ್ರತಿನಿಧಿಸುತ್ತಾರೆ ಮತ್ತು ಪ್ರತಿ ಮೂರು ದಿನಗಳಿಗೊಮ್ಮೆ ಬದಲಾಯಿಸಲ್ಪಡುತ್ತಾರೆ. ಆಯ್ಕೆಯಾದ ಮೂವರು ಕಾರ್ಡಿನಲ್‌ಗಳ ಮೊದಲ ಗುಂಪು ಪಿಯೆಟ್ರೊ ಪರೋಲಿನ್ (ಧರ್ಮಾಧ್ಯಕ್ಷಿಯ ಆದೇಶ), ಸ್ಟಾನಿಸ್ಲಾವ್ ರೈಲ್ಕೊ (ಯಾಜಕೀಯ ಆದೇಶ) ಮತ್ತು ಫ್ಯಾಬಿಯೊ ಬ್ಯಾಗಿಯೊ (ಸೇವಾದರ್ಶಿಯ ಆದೇಶ).
ಬುಧವಾರ ಸಂಜೆ 7:30 ರ ಹೊತ್ತಿಗೆ ಸುಮಾರು 20,000 ಜನರು ದಿವಂಗತ ಪೋಪ್ ಫ್ರಾನ್ಸಿಸ್‌ರವರಿಗೆ ತಮ್ಮ ಗೌರವವನ್ನು ಸಲ್ಲಿಸಿದ್ದಾರೆ ಎಂದು ಜಗದ್ಗುರುಗಳ ಪತ್ರಿಕಾ ಕಚೇರಿಯು ವರದಿ ಮಾಡಿದೆ.