ಕಾರ್ಡಿನಲ್ ಕ್ರಜೇವ್ಸ್ಕಿ: ಎರಡು ದಶಕಗಳ ಹಿಂದೆ ಜನರು ಈ ಬಿಕ್ಕಿ ಬಿಕ್ಕಿ ಅತ್ತರು, ಪ್ರಾರ್ಥಿಸಿದರು
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಸಂತ ದ್ವಿತೀಯ ಜಾನ್ ಪೌಲರು ಮರಣಿಸಿದ ದಶಕಗಳ ನಂತರ, ಕಾರ್ಡಿನಲ್ ಕೊನ್ರಾಡ್ ಕ್ರಜೇವ್ಸ್ಕಿ ಅವರು ಹಲವು ವರ್ಷಗಳ ಕಾಲ ಪೋಪ್ ದ್ವಿತೀಯ ಜಾನ್ ಪೌಲರ ಪೇಪಲ್ ಸೆರೆಮೊನಿಯಲಿಸ್ಟ್ (ಪೋಪರ ಕಾರ್ಯಕ್ರಮ ನಿರೂಪಕ) ರಾಗಿ ಕಾರ್ಯನಿರ್ವಹಿಸಿದರು. ಈ ಹಿನ್ನೆಲೆಯಲ್ಲಿ ಅಂದು ಪೋಪ್ ಜಾನ್ ಪೌಲ್ ಅವರು ಮರಣ ಹೊಂದಿದ ದಿನದ ಕುರಿತು ಕಾರ್ಡಿನಲ್ ಕ್ರಜೇವ್ಸ್ಕಿ ಅವರು ಮೆಲುಕಿ ಹಾಕಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರ ಕುರಿತು ಮಾತನಾಡಿರುವ ಕಾರ್ಡಿನಲ್ ಕ್ರಜೇವ್ಸ್ಕಿ ಅವರು "ಪೋಪ್ ದ್ವಿತೀಯ ಸಂತ ಜಾನ್ ಪೌಲರು ಜನರನ್ನು ಆರಾಧನಾ ವಿಧಿಯಲ್ಲಿ ಮುನ್ನಡೆಸಲು ಬರುವುದಕ್ಕೂ ಮುಂಚಿತವಾಗಿ ದೇವರೊಂದಿಗೆ ಸಂಭಾಷಣೆ ನಡೆಸುತ್ತಿದ್ದರು. ಅಂದರೆ ಅವರು ಯಾವುದೇ ಬಲಿಪೂಜೆಗೂ ಮುಂಚಿತವಾಗಿ ಘಾಡವಾಗಿ ಪ್ರಾರ್ಥನೆಯಲ್ಲಿ ತಲ್ಲೀನರಾಗುತ್ತಿದ್ದರು. ಅದರಿಂದಲೇ ಅವರು ಆಡುವ ಮಾತಿಗಳು ಜನರನ್ನು ಸ್ಪರ್ಶಿಸುತ್ತಿದ್ದವು. ಜನರ ಮನ ಪರಿವರ್ತನೆಗೆ ಕಾರಣವಾಗುತ್ತಿದ್ದವು. ಅವರು ಪ್ರಾರ್ಥನೆಯ ಮನುಷ್ಯರಾಗಿದ್ದರು" ಎಂದು ಅವರು ಹೇಳಿದ್ದಾರೆ.
ಪೋಪ್ ಸಂತ ದ್ವಿತೀಯ ಜಾನ್ ಪೌಲರು ಏಪ್ರಿಲ್ 2 ರಂದು ಮರಣ ಹೊಂದಿದಾಗ "ನಾನು ಈ ಜಗತ್ತನ್ನು ಗಮನಿಸಿದೆ. ಇಡೀ ಜಗತ್ತು ಸ್ತಭ್ದವಾಗಿತ್ತು. ಎಲ್ಲರೂ ಅಳುತ್ತಾ, ಮೊಣಕಾಲೂರಿ ಸಂತ ಪೇತ್ರರ ಚೌಕದಲ್ಲಿ ಶೋಕದಿಂದ ಪ್ರಾರ್ಥಿಸುತ್ತಿದ್ದರು" ಎಂದು ಕಾರ್ಡಿನಲ್ ಕ್ರಜೇವ್ಸ್ಕಿ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಪೋಪ್ ಸಂತ ದ್ವಿತೀಯ ಜಾನ್ ಪೌಲ್ ಅವರ ಸ್ಮರಣಾರ್ಥ ಅವರ ಸಮಾಧಿಯ ಬಳಿ ಪ್ರತಿ ಗುರುವಾರ ಬಲಿಪೂಜೆಯನ್ನು ಅರ್ಪಿಸಲಾಗುತ್ತಿದೆ. ಅವರನ್ನು ಸಂತ ಪದವಿಗೇರಿಸಿದ ನಂತರ ಈ ಬಲಿಪೂಜೆಯನ್ನು ಸಂತ ಪೇತ್ರರ ಮಹಾದೇವಾಲಯದ ಸಂತ ಸಬಾಸ್ಟಿಯನರ ಪ್ರಾರ್ಥನಾಲಯದಲ್ಲಿ ಅರ್ಪಿಸಿಕೊಂಡು ಬರಲಾಗುತ್ತಿದೆ. ಈ ಸಂಪ್ರದಾಯವು ಪ್ರತೀ ವರ್ಷ ಪ್ರತಿ ಗುರುವಾರ (ಪವಿತ್ರ ಗುರುವಾರವನ್ನು ಹೊರತು ಪಡಿಸಿ) ಪೋಪ್ ಜಾನ್ ಪೌಲರ ಹೆಸರಿನಲ್ಲಿ ನಡೆದುಕೊಂಡು ಬರುತ್ತಿದೆ.