MAP

ಮಾತೆ ಮರಿಯಳಂತೆ, ಪ್ರಭುವಿಗಾಗಿ ಭರವಸೆಯಿಂದ ಹುಡುಕೋಣ

ಪೋಪ್ ಫ್ರಾನ್ಸಿಸ್ ಅವರು ರೋಮ್ ನಗರದ ಜೆಮೆಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿರುವ ಕಾರಣ ಅವರು ಇಂದು ಸಾರ್ವಜನಿಕ ಭೇಟಿಯಲ್ಲಿ ಭಾಗವಹಿಸಲು ಆಗಲಿಲ್ಲ. ಆದರೆ, ಅವರ ಸಂದೇಶವನ್ನು ಜನತೆಗೆ ತಿಳಿಸಲಾಗಿದ್ದು, ತಮ್ಮ ಸಂದೇಶದಲ್ಲಿ ಪೋಪ್ ಫ್ರಾನ್ಸಿಸ್ ಅವರು ಮಾತೆ ಮರಿಯಮ್ಮನವರಂತೆ ಪ್ರಭುವಿಗಾಗಿ ಭರವಸೆಯಿಂದ ಹುಡುಕಬೇಕು ಎಂದು ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ವಿಶ್ವದ ಎಲ್ಲಾ ಕ್ರೈಸ್ತರು ಮಂಗಳವಾರ್ತೆಯ ಸಂದರ್ಭದಂದು ಮಾತೆ ಮರಿಯಮ್ಮನವರು ಹಾಗೂ ಎಲಿಜಬೇತಳು ನಡೆದುಕೊಂಡ ರೀತಿಯಲ್ಲಿಯೇ ನಡೆದುಕೊಳ್ಳಬೇಕು. ದೇವರ ಯೋಜನೆಗಳನ್ನು ನಮ್ಮ ಬದುಕಿನಲ್ಲಿ ಆಳವಡಿಸಿಕೊಳ್ಳುವ ಅವರ ಮಾದರಿಯನ್ನು ಅನುಸರಿಸಬೇಕು ಎಂದು ಪೋಪ್ ಫ್ರಾನ್ಸಿಸ್ ಅವರು ನೆರೆದಿದ್ದ ಭಕ್ತಾಧಿಗಳಿಗೆ ಉದ್ದೇಶಿಸಿ ಹೇಳಿದರು.

ಜ್ಯೂಬಿಲಿ ವರ್ಷದ ಶೀರ್ಷಿಕೆಯಾದ "ಯೇಸುಕ್ರಿಸ್ತರೇ ನಮ್ಮ ಭರವಸೆ" ಎಂಬ ಕುರಿತೂ ಸಹ ಪೋಪ್ ಫ್ರಾನ್ಸಿಸ್ ಚಿಂತನೆಯನ್ನು ವ್ಯಕ್ತಪಡಿಸಿದರು.

"ಮಾತೆ ಮರಿಯಮ್ಮನವರು ದೇವರ ಯೋಜನೆಗಳನ್ನು ಸ್ವಾಗತಿಸಿಕೊಳ್ಳುವಲ್ಲಿ ಯಾವುದೇ ರಾಜಿಯನ್ನು ಮಾಡಿಕೊಳ್ಳುವುದಿಲ್ಲ. ಅವರು ಧೈರ್ಯದಿಂದ ಮುನ್ನುಗ್ಗುತ್ತಾರೆ. ಇದೇ ರೀತಿಯ ಧೈರ್ಯವನ್ನು ನಾವು ನಮ್ಮ ಬದುಕಿನಲ್ಲಿ ಆಳವಡಿಸಿಕೊಳ್ಳಬೇಕು. ಇದನ್ನು ನಮ್ಮ ಬದುಕಿನಲ್ಲಿ ಆಳವಡಿಸಿಕೊಳ್ಳಬೇಕೆಂದರೆ ನಾವು ಮಾತೆ ಮರಿಯಮ್ಮನವರ ಮಧ್ಯಸ್ಥಿಕೆಯನ್ನು ನಮ್ಮ ಬದುಕಿನಲ್ಲಿ ಆಳವಡಿಸಿಕೊಳ್ಳಬೇಕು" ಎಂದು ಪೋಪ್ ಫ್ರಾನ್ಸಿಸ್ ತಮ್ಮ ಸಂದೇಶದಲ್ಲಿ ಹೇಳಿದರು.      

05 ಮಾರ್ಚ್ 2025, 17:05