ಪವಿತ್ರ ಪೀಠಕ್ಕೆ ಆಫ್ರಿಕಾದ ರಾಯಭಾರಿಗಳು ಪೋಪ್ ಆರೋಗ್ಯಕ್ಕಾಗಿ ಬಲಿಪೂಜೆ
ವರದಿ: ವ್ಯಾಟಿಕನ್ ನ್ಯೂಸ್
ಪವಿತ್ರ ಪೀಠಕ್ಕೆ ಆಫ್ರಿಕಾದ ರಾಯಭಾರಿಗಳು ಪೋಪ್ ಫ್ರಾನ್ಸಿಸ್ ಅವರ ಆರೋಗ್ಯಕ್ಕಾಗಿ ಬಲಿಪೂಜೆಯನ್ನು ಅರ್ಪಿಸಿದ್ದಾರೆ. ವ್ಯಾಟಿಕನ್ ಗ್ರೊಟ್ಟೋಗಳಲ್ಲಿರುವ ಹಂಗೇರಿಯನ್ ಪ್ರಾರ್ಥನಾಲಯದಲ್ಲಿ ವ್ಯಾಟಿಕನ್ನಿನ ವಿಜ್ಞಾನಗಳ ಆಯೋಗದ ಉಸ್ತುವಾರಿಗಳಾಗಿರುವ ಕಾರ್ಡಿನಲ್ ಪೀಟರ್ ಟರ್ಕಸನ್ ಅವರು ಬಲಿಪೂಜೆಯನ್ನು ಅರ್ಪಿಸಿದ್ದಾರೆ.
ವ್ಯಾಟಿಕನ್ನಿನಲ್ಲಿ ಆಫ್ರಿಕಾ ಖಂಡದ ವಿವಿಧ ದೇಶಗಳಿಂದ ರಾಯಭಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ರಾಯಭಾರಿಗಳು ಪೋಪ್ ಫ್ರಾನ್ಸಿಸ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಬಲಿಪೂಜೆಯನ್ನು ಅರ್ಪಿಸಿ, ಪೋಪ್ ಫ್ರಾನ್ಸಿಸ್ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರಿಗೆ ವೆಂಟಿಲೇಟರ್ ಅಗತ್ಯವಿಲ್ಲ
ವ್ಯಾಟಿಕನ್ನಿನ ಮಾಧ್ಯಮ ಕಚೇರಿಯು ಪೋಪ್ ಫ್ರಾನ್ಸಿಸ್ ಅವರಿಗೆ ಈಗ ಯಾವುದೇ ರೀತಿಯ ಮೆಕಾನಿಕಲ್ ವೆಂಟಿಲೇಟರ್ ಅಗತ್ಯವಿಲ್ಲ ಎಂದು ಹೇಳಿದೆ. ಆ ಮೂಲಕ ಪೋಪ್ ಫ್ರಾನ್ಸಿಸ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದೆ.
ಪೋಪ್ ಫ್ರಾನ್ಸಿಸ್ ಅವರು ಆಸ್ಪತ್ರೆಯಲ್ಲಿ ಮತ್ತೊಮ್ಮೆ ವಿಶ್ರಾಂತಿಯ ರಾತ್ರಿಯನ್ನು ಕಳೆದಿದ್ದಾರೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವ್ಯಾಟಿಕನ್ ಮಾಧ್ಯಮ ಪೀಠದ ಪತ್ರಿಕಾ ಹೇಳಿಕೆಯು ವರದಿ ಮಾಡಿದೆ. ಅದೇ ರೀತಿ, ಇನ್ನೂ ಸಹ ಪೋಪ್ ಫ್ರಾನ್ಸಿಸ್ ಅವರಿಗೆ ಚಿಕಿತ್ಸೆಯನ್ನು ಮುಂದುವರೆಸಲಾಗಿದೆ ಎಂದು ಹೇಳಲಾಗಿದೆ.
ಪೋಪ್ ಅವರ ಕ್ಲಿನಿಕಲ್ ಚಿತ್ರದ ಸಂಕೀರ್ಣತೆ ಮತ್ತು ಆಸ್ಪತ್ರೆಗೆ ದಾಖಲಾಗುವ ಸಮಯದಲ್ಲಿ ಇದ್ದ ತೀವ್ರವಾದ ಸೋಂಕನ್ನು ಗಮನಿಸಿದರೆ, "ಆಸ್ಪತ್ರೆಯಲ್ಲಿ ಸ್ವಲ್ಪ ಸಮಯದವರೆಗೆ ಔಷಧೀಯ ಚಿಕಿತ್ಸೆಯನ್ನು ಮುಂದುವರಿಸುವುದು ಇನ್ನೂ ಅಗತ್ಯವಾಗಿರುತ್ತದೆ" ಎಂದು ವ್ಯಾಟಿಕನ್ ಮಾಧ್ಯಮ ವರದಿಯು ವಿವರಿಸಿದೆ.