MAP

ಜಪಸರ ಪ್ರಾರ್ಥನೆಯಲ್ಲಿ ಕಾರ್ಡಿನಲ್ ಪ್ರಿವೊಸ್ಟ್: ಪೋಪ್ ಫ್ರಾನ್ಸಿಸರನ್ನು ಮಾತೆ ಮರಿಯಳಿಗೆ ಸಮರ್ಪಿಸೋಣ

ಸತತ ಎಂಟನೇ ರಾತ್ರಿ ವ್ಯಾಟಿಕನ್ ನಗರದ ಸಂತ ಪೀಟರ್ಸ್ ಚೌಕದಲ್ಲಿ ಪೋಪ್ ಫ್ರಾನ್ಸಿಸ್ ಅವರ ಆರೋಗ್ಯಕ್ಕಾಗಿ ಏರ್ಪಡಿಸಲಾಗಿರುವ ಜಪಸರ ಪ್ರಾರ್ಥನೆಯಲ್ಲಿ ಸಾವಿರಾರು ಜನರು ಪಾಲ್ಗೊಂಡರು. ಪೋಪ್ ಫ್ರಾನ್ಸಿಸ್ ಅವರು ರೋಮ್ ನಗರದ ಜೆಮೆಲ್ಲಿ ಆಸ್ಪತ್ರೆಯಲ್ಲಿ ಬ್ರಾಂಕೈಟಿಸ್ (ಉಸಿರಾಟದ ತೊಂದರೆಗೆ) ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

"ಧರ್ಮಸಭೆಯ ಮಾತೆಯಾಗಿರುವ ತಾಯಿ ಮರಿಯಳ ಮಮತೆ ಹಾಗೂ ಮಧ್ಯಸ್ಥಿಕೆಗೆ ಪೋಪ್ ಫ್ರಾನ್ಸಿಸ್ ಅವರನ್ನು ಅರ್ಪಿಸೋಣ ಎಂದು ಧರ್ಮಾಧ್ಯಕ್ಷರುಗಳ ಆಯೋಗದ ಕಾರ್ಯದರ್ಶಿಯಾಗಿರುವ ರಾಬರ್ಟ್ ಪ್ರಿವೋಸ್ಟ್ ಅವರು ಹೇಳಿದ್ದಾರೆ. "ಮಾತೆ ಮರಿಯಮ್ಮನವರ ಮಧ್ಯಸ್ಥಿಕೆಯ ಮೂಲಕ ಅವರು ಬೇಗ ಗುಣಮುಖರಾಗಲಿ" ಎಂದು ಪ್ರಾರ್ಥಿಸಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರು ಶ್ವಾಸಕೋಶ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಅವರು ಕಳೆದ ತಿಂಗಳ ಮಧ್ಯ ಬಾಗದಿಂದಲೂ ರೋಮ್ ನಗರದ ಜೆಮೆಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಪೋಪ್ ಫ್ರಾನ್ಸಿಸ್ ಅವರ ಉತ್ತಮ ಆರೋಗ್ಯಕ್ಕಾಗಿ ಪ್ರತಿ ದಿನ ಕಾರ್ಡಿನಲ್ಲುಗಳು ವ್ಯಾಟಿಕನ್ನಿನ ಧರ್ಮಾಧ್ಯಕ್ಷರುಗಳು, ಗುರುಗಳು, ಸೇವಾದರ್ಶಿಗಳು ಹಾಗೂ ಧಾರ್ಮಿಕ ಸಹೋದರ ಸಹೋದರಿಯರೊಂದಿಗೆ ಹಾಗೂ ಶ್ರೀಸಾಮಾನ್ಯರೊಂದಿಗೆ ಜಪಸರ ಪ್ರಾರ್ಥನೆಯನ್ನು ಪ್ರಾರ್ಥಿಸುತ್ತಿದ್ದಾರೆ.

04 ಮಾರ್ಚ್ 2025, 16:34