MAP

Ukrainian President Volodymyr Zelenskiy meets with MAP Francis at the Vatican

ಕಾರ್ಡಿನಲ್ ಪರೋಲಿನ್ ಮತ್ತು ಉಕ್ರೇನ್ ಅಧ್ಯಕ್ಷರ ಸಂವಾದ ಮಾತುಕತೆ

ಮಾರ್ಚ್ 14 ರಂದು ವ್ಯಾಟಿಕನ್ನಿನ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಹಾಗೂ ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ ಅವರು ಫೋನ್ ಮೂಲಕ ಮಾತುಕತೆಯನ್ನು ನಡೆಸಿದ್ದಾರೆ ಎಂದು ವ್ಯಾಟಿಕನ್ ಮಾಧ್ಯಮ ಪೀಠವು ವರದಿ ಮಾಡಿದೆ. ಮುಂದುವರೆದು, ಈ ವೇಳೆ ಅವರು ಸಂವಾದ, ಯುದ್ಧ ಖೈದಿಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಿದ್ದಾರೆ ಎಂದು ವರದಿಯಾಗಿದೆ.

ವರದಿ: ವ್ಯಾಟಿಕನ್ ನ್ಯೂಸ್

ಹೆಚ್ಚಿನ ಅನಾಹುತವಾಗುವ ಮೊದಲು ಉಕ್ರೇನ್ ಯುದ್ಧ ಮುಂದುವರೆಯುವುದನ್ನು ತಡೆಗಟ್ಟಬೇಕು ಎಂದು ವ್ಯಾಟಿಕನ್ನಿನ ರಾಜ್ಯ ಕಾರ್ಯದರ್ಶಿಯಾಗಿರುವ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರು ಹೇಳಿದ್ದಾರೆ. ಕಾರ್ಡಿನಲ್ ಪರೋಲಿನ್ ಅವರು "ಹೇಗಾದರೂ ಮಾಡಿ ಉಕ್ರೇನ್ ಯುದ್ಧವನ್ನು ನಿಲ್ಲಿಸಬೇಕು" ಎಂದು ಹೇಳಿದ್ದಾರೆ. 

ಮುಂದುವರೆದು ಮಾತನಾಡಿರುವ ಕಾರ್ಡಿನಲ್ ಪರೋಲಿನ್ ಅವರು "ನಾನು ವಿಶ್ವಗುರು ಪೋಪ್ ಫ್ರಾನ್ಸಿಸ್ ಅವರ ಮಾತುಗಳನ್ನು ಮತ್ತೆ ಪುನರುಚ್ಛರಿಸುತ್ತೇನೆ. ಯಾವುದೇ ಯುದ್ಧ ಎಂಬುದು ಅದು ಮಾನವೀಯತೆಯ ಮೇಲೆ ಮಾಡುತ್ತಿರುವ ದಾಳಿಯಾಗಿದೆ. ಎಲ್ಲಾ ರೀತಿಯ ಯುದ್ಧಗಳನ್ನು ನಾವು ನಿಲ್ಲಿಸಬೇಕು. ಏಕೆಂದರೆ ಇದರಲ್ಲಿ ಮುಗ್ಧ ಜೀವಗಳು ಬಲಿಯಾಗುತ್ತಿವೆ ಎಂದು ಹೇಳಿದ್ದಾರೆ.

ಈ ಹಿಂದೆ ರಷ್ಯಾ ಭೇಟಿ ನೀಡಿದ್ದ ಕಾರ್ಡಿನಲ್ ಪರೋಲಿನ್

ಶಾಂತಿಯ ಪಯಣದ ಸಂಕೇತವಾಗಿ ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್ನಿನ ರಾಜ್ಯ ಕಾರ್ಯದರ್ಶಿಯಾಗಿರುವ  ಕಾರ್ಡಿನಲ್ ಪಿಯೆತ್ರೋ ಪರೋಲಿನ್ ಅವರನ್ನು ಉಕ್ರೇನ್ ದೇಶಕ್ಕೆ ಕಳುಹಿಸಿದ್ದರು. ಈ ಭೇಟಿಯ ಕುರಿತು ಹಾಗೂ ಪ್ರಸಕ್ತ ನಡೆಯುತ್ತಿರುವ ಯುದ್ಧದ ವಿದ್ಯಾಮಾನಗಳ ಕುರಿತು ಕಾರ್ಡಿನಲ್ ಪರೋಲಿನ್ ಅವರು ಮಾಧ್ಯಮದವರಿಗೆ ತಮ್ಮ ಅನಿಸಿಕೆಯನ್ನು ತಿಳಿಸಿದ್ದರು.

"ರಷ್ಯಾ ಹಾಗೂ ಉಕ್ರೇನ್ ನಡುವೆ ಹೆಚ್ಚುತ್ತಿರುವ ಸಂಘರ್ಷದ ಕುರಿತು ಕಳವಳವನ್ನು ವ್ಯಕ್ತಪಡಿಸಿದ್ದಾರೆ. ರಷ್ಯಾದಲ್ಲಿ ಸಿಲುಕಿಕೊಂಡಿರುವ ಉಕ್ರೇನ್ ಮಕ್ಕಳನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಪವಿತ್ರ ಪೀಠವು ಕಾರ್ಯನಿರ್ವಹಿಸುತ್ತಿದೆ ಹಾಗೂ ಎಲ್ಲಾ ರೀತಿಯ ಮಾನವೀಯ ನೆರವನ್ನು ನೀಡುತ್ತಿದೆ." ಎಂದು ಹೇಗೆ ವ್ಯಾಟಿಕನ್ ಪೀಠವು ಈ ಯುದ್ಧದ ಸಂದರ್ಭದಲ್ಲಿ ನೆರವಾಗಿದೆ ಎಂಬ ಕುರಿತು ಹೇಳಿದ್ದರು.  

17 ಮಾರ್ಚ್ 2025, 16:59