ಸಂತ ಮದರ್ ತೆರೇಸಾ ಅವರ ಹಬ್ಬದ ದಿನವನ್ನು ರೋಮನ್ ಕ್ಯಾಲೆಂಡರ್'ನಲ್ಲಿ ಸೇರಿಸಲಾಯಿತು
ದೈವಿಕ ಆರಾಧನೆ ಹಾಗೂ ಸಂಸ್ಕಾರಗಳ ಶಿಸ್ತುಪಾಲನಾ ಆಯೋಗವು ವ್ಯಾಟಿಕನ್ ನಗರದಲ್ಲಿ ಸಂತ ಮದರ್ ತೆರೇಸಾ ಅವರ ಹಬ್ಬದ ದಿನವನ್ನು ರೋಮನ್ ಕ್ಯಾಲೆಂಡರ್'ಗೆ ಸೇರಿಸಿತು. ಸೆಪ್ಟೆಂಬರ್ 5 ರಂದು ಅವರ ಹಬ್ಬವನ್ನು ಕೊಂಡಾಡುವಂತೆ ಈ ಮೂಲಕ ಸೂಚಿಸಲಾಗಿದೆ.
ವರದಿ: ವ್ಯಾಟಿಕನ್ ನ್ಯೂಸ್
ದೈವಿಕ ಆರಾಧನೆ ಹಾಗೂ ಸಂಸ್ಕಾರಗಳ ಶಿಸ್ತುಪಾಲನಾ ಆಯೋಗವು ವ್ಯಾಟಿಕನ್ ನಗರದಲ್ಲಿ ಸಂತ ಮದರ್ ತೆರೇಸಾ ಅವರ ಹಬ್ಬದ ದಿನವನ್ನು ರೋಮನ್ ಕ್ಯಾಲೆಂಡರ್'ಗೆ ಸೇರಿಸಿತು. ಸೆಪ್ಟೆಂಬರ್ 5 ರಂದು ಅವರ ಹಬ್ಬವನ್ನು ಕೊಂಡಾಡುವಂತೆ ಈ ಮೂಲಕ ಸೂಚಿಸಲಾಗಿದೆ.
ದೈವಿಕ ಆರಾಧನೆ ಹಾಗೂ ಸಂಸ್ಕಾರಗಳ ಶಿಸ್ತುಪಾಲನಾ ಆಯೋಗದ ಪ್ರಿಫೆಕ್ಟ್ ಆಗಿರುವ ಕಾರ್ಡಿನಲ್ ಆರ್ಥುರ್ ರೋಚೆ ಅವರು ಸಂತ ಮದರ್ ತೆರೇಸಾ ಅವರ ಹೆಸರನ್ನು ಈ ಕ್ಯಾಲೆಂಡರಿಗೆ ಸೇರಿಸಿದರು. ಇದೇ ವೇಳೆ ಅವರು ಸಂತ ಮದರ್ ತೆರೇಸಾ ಅವರ ಕುರಿತು ಹಲವು ವಾಕ್ಯಗಳ ಪುಸ್ತಿಕೆಯನ್ನು ಬಿಡುಗಡೆ ಮಾಡಿದರು.
ಇದೇ ವೇಳೆ ಅವರು ಈ ಹಬ್ಬದಂದು ಬಲಿಪೂಜೆಯಲ್ಲಿ ಪಠಿಸಲಾಗುವ ಪಠ್ಯ ಹಾಗೂ ಪ್ರಾರ್ಥನೆಗಳನ್ನೂ ಸಹ ಬಿಡುಗಡೆ ಮಾಡಿದರು.
ಸಂತ ಮದರ್ ತೆರೇಸಾ ಅವರ ಸ್ಮರಣೆಯನ್ನು ಸೆಪ್ಟೆಂಬರ್ 5 ರಂದು ಆಕೆಯ ನಿಧನದ ದಿನದಂದು ಆಚರಿಸಲಾಗುತ್ತದೆ.
13 ಫೆಬ್ರವರಿ 2025, 15:34