ಪ್ರಪಂಚದ ಎಲ್ಲಾ ಮಕ್ಕಳಿಗಾಗಿ ಒಂದುಗೂಡುವುದು
ವರದಿ: ವ್ಯಾಟಿಕನ್ ನ್ಯೂಸ್
ವ್ಯಾಟಿಕನ್ ನಗರದಲ್ಲಿ ನಡೆಯುತ್ತಿರುವ ಮಕ್ಕಳ ಹಕ್ಕುಗಳ ಮೊದಲ ಶೃಂಗಸಭೆಯಲ್ಲಿ ಭಾಗವಹಿಸಿದ ಪೋಪ್ ಫ್ರಾನ್ಸಿಸ್ ಅವರು ಯುದ್ಧ, ಬಡತನ, ವಲಸೆ ಹಾಗೂ ಮುಂತಾದ ಕಾರಣಗಳಿಂದಾಗಿ ನರಳುತ್ತಿರುವ ಮಕ್ಕಳ ಕುರಿತು ವಿಶ್ವದ ರಾಜಕೀಯ ನಾಯಕರುಗಳು ನೋಡಬೇಕು. ಈ ಕುರಿತು ಎಚ್ಚೆತ್ತುಕೊಂಡು ಈ ಜಗತ್ತು ಮಕ್ಕಳು ಸುರಕ್ಷತೆ ಹಾಗೂ ಸ್ವಚ್ಛಂದದಿಂದ ಬದುಕಲು ಅನುಕೂಲವಾಗುವಂತೆ ಮಾಡಬೇಕು ಎಂದು ಹೇಳಿದ್ದಾರೆ. ಮುಂದುವರೆದು ಮಾತನಾಡಿರುವ ಅವರು ಮಕ್ಕಳ ಜೀವಕ್ಕಿಂತ ಅಮೂಲ್ಯವಾದುದು ಯಾವುದೂ ಇಲ್ಲ ಎಂದು ಹೇಳಿದ್ದಾರೆ.
"ಹಿಂದಿನಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ, ಶಾಲೆಗಳು ಮತ್ತು ಆರೋಗ್ಯ ಸೇವೆಗಳು ಈಗಾಗಲೇ ಅನೇಕ ತೊಂದರೆಗಳಿಂದ ಪರೀಕ್ಷಿಸಲ್ಪಟ್ಟ ಮಕ್ಕಳೊಂದಿಗೆ ವ್ಯವಹರಿಸಬೇಕಾಗಿದೆ, ಆತಂಕ ಅಥವಾ ಖಿನ್ನತೆಗೆ ಒಳಗಾದ ಯುವಕರು ಮತ್ತು ಹದಿಹರೆಯದವರು ಆಕ್ರಮಣಶೀಲತೆ ಅಥವಾ ಸ್ವಯಂ-ಹಾನಿಕಾರಕ ಸ್ವರೂಪಗಳಿಗೆ ಎಳೆಯಲ್ಪಡುತ್ತಾರೆ. ಇದಲ್ಲದೆ, ದಕ್ಷತೆಯ ಸಂಸ್ಕೃತಿಯು ಬಾಲ್ಯದ ಮೇಲೆಯೇ, ವೃದ್ಧಾಪ್ಯದಂತೆ, ಅಸ್ತಿತ್ವದ 'ಪರಿಧಿ'ಯಾಗಿ ಕಾಣುತ್ತದೆ" ಎಂದು ಪೋಪ್ ಫ್ರಾನ್ಸಿಸ್ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಅವರು ಪ್ರಸ್ತಾಪಿಸಿದ ಅತ್ಯಂತ ಆತಂಕಕಾರಿ ವಿಷಯವೆಂದರೆ ಮಕ್ಕಳ ಮೇಲೆ ಯುದ್ಧದ ವಿನಾಶಕಾರಿ ಪರಿಣಾಮ. "ಇತ್ತೀಚಿನ ದಿನಗಳಲ್ಲಿ ನಾವು ಪ್ರತಿದಿನ ದುರಂತಗಳನ್ನು ನಾವು ನೋಡಿದ್ದೇವೆ, ಅಂದರೆ ಮಕ್ಕಳು ಬಾಂಬ್‌ಗಳ ಕೆಳಗೆ ಸಾಯುವುದನ್ನು, ಅಧಿಕಾರ, ಸಿದ್ಧಾಂತ ಮತ್ತು ರಾಷ್ಟ್ರೀಯತೆಯ ಹಿತಾಸಕ್ತಿಗಳ ವಿಗ್ರಹಗಳಿಗೆ ಬಲಿಯಾಗುವುದನ್ನು ನಾವು ಒಪ್ಪಿಕೊಳ್ಳಲಾಗುವುದಿಲ್ಲ" ಎಂದು ಅವರು ಹೇಳಿದರು.
ಅಂತಿಮವಾಗಿ ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್ ಆಯೋಜಿಸಿರುವ ಶೃಂಗಸಭೆಯು ಮಕ್ಕಳಿಗಾಗಿ ಉತ್ತಮ ಜಗತ್ತನ್ನು ನಿರ್ಮಿಸಲು ಕೊಡುಗೆ ನೀಡುತ್ತದೆ, ಮಕ್ಕಳನ್ನು, ಅವರ ಹಕ್ಕುಗಳು ಮತ್ತು ಅವರ ಕನಸುಗಳನ್ನು ಜಾಗತಿಕ ಕಾಳಜಿಯ ಕೇಂದ್ರದಲ್ಲಿ ಇರಿಸುವ ನೈತಿಕ ಕರ್ತವ್ಯವನ್ನು ಪುನರುಚ್ಚರಿಸುತ್ತದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.