MAP

ಭಾರತದ 4 ಧರ್ಮಕ್ಷೇತ್ರಗಳಿಗೆ ಮಹಾಧರ್ಮಾಧ್ಯಕ್ಷ, ಧರ್ಮಾಧ್ಯಕ್ಷರುಗಳನ್ನು ನೇಮಿಸಿದ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ಇಂದು ಮಧ್ಯಾಹ್ನ ಭಾರತೀಯ ಕಾಲಮಾನ ಸುಮಾರು 4 ಗಂಟೆಯಷ್ಟರಲ್ಲಿ ಆಂಧ್ರ ಪ್ರದೇಶದ ವಿಶಾಕಪಟ್ಟಣಂ ಮಹಾಧರ್ಮಕ್ಷೇತ್ರಕ್ಕೆ ನೂತನ ಮಹಾಧರ್ಮಾಧ್ಯಕ್ಷರನ್ನು, ಕೇರಳದ ನೆಯ್ಯಟ್ಟಿಂಕರಾ ಲ್ಯಾಟಿನ್ ಧರ್ಮಕ್ಷೇತ್ರದಕ್ಕೆ ಸಹ-ಧರ್ಮಾಧ್ಯಕ್ಷರನ್ನು, ಶಿಲ್ಲಾಂಗ್ ಮಹಾಧರ್ಮಕ್ಷೇತ್ರಕ್ಕೆ ಸಹಾಯಕ ಧರ್ಮಾಧ್ಯಕ್ಷರನ್ನು ಹಾಗೂ ಜಲ್ಪಾಯ್ಗುರಿ ಧರ್ಮಕ್ಷೇತ್ರಕ್ಕೆ ಧರ್ಮಾಧ್ಯಕ್ಷರನ್ನು ನೇಮಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಈವರೆಗೂ ಆಂಧ್ರಪ್ರದೇಶದ ವಾರಂಗಲ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾಗಿದ್ದ ಬಿಷಪ್ ಉದುಮಲ ಬಾಲ ಅವರನ್ನು ಅಲ್ಲಿಂದ ವರ್ಗಾವಣೆಗೊಳಿಸಿ, ವಿಶಾಕಪಟ್ಟಣ ಮಹಾಧರ್ಮಕ್ಷೇತ್ರಕ್ಕೆ ನೂತನ ಮಹಾಧರ್ಮಾಧ್ಯಕ್ಷರನ್ನಾಗಿ ನೇಮಿಸಿದ್ದಾರೆ.

ಈವರೆಗೂ ನೆಯ್ಯಟ್ಟಿಂಕರಾ ಧರ್ಮಕ್ಷೇತ್ರದಲ್ಲಿ ಅಲ್ಲಿನ ಜುಡಿಶಿಯಲ್ ವಿಕಾರ್ ಮತ್ತು ತಿರುಪುರಂನ ಸಂತ ಫ್ರಾನ್ಸಿಸ್ ಕ್ಸೇವಿಯರ್ ಧರ್ಮಕೇಂದ್ರದ ಗುರುವಾಗಿ ಸೇವೆ ಸಲ್ಲಿಸುತ್ತಿದ್ದ ಫಾದರ್ ಡಿ. ಸೆಲ್ವರಾಜನ್ ಅವರನ್ನು ಇದೇ ಧರ್ಮಕ್ಷೇತ್ರದ ಸಹ-ಧರ್ಮಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಮೇಘಾಲಯದ ಶಿಲ್ಲಾಂಗ್ ಮಹಾಧರ್ಮಕ್ಷೇತ್ರದ ಗುರುವಾಗಿ ಅಲ್ಲಿ ಪ್ರಸ್ತುತ ಚಾನ್ಸಲರ್ ಆಗಿ ಸೇವೆ ಸಲ್ಲಿಸುತ್ತಿರುವ ಫಾದರ್ ಬರ್ನಾಡ್ ಲಾಲೂ ಅವರನ್ನು ಪೋಪ್ ಫ್ರಾನ್ಸಿಸ್ ಅವರು ಇದೇ ಮಹಾಧರ್ಮಕ್ಷೇತ್ರಕ್ಕೆ ಸಹಾಯಕ ಧರ್ಮಾಧ್ಯಕ್ಷರನ್ನಾಗಿ ನೇಮಿಸಿದ್ದಾರೆ.

ಪ್ರಸ್ತುತ ಕಲ್ಕತ್ತಾದ ಮಾರ್ನಿಂಗ್ ಸ್ಟಾರ್ ರೀಜೆನಲ್ ಸೆಮಿನರಿಯಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿರುವ ಫಾದರ್ ಫೇಬಿಯನ್ ಟೊಪ್ಪೋ ಅವರನ್ನು ಪಶ್ಚಿಮ ಬಂಗಾಳದ ಜಲ್ಪಾಯ್ಗುರಿ ಧರ್ಮಕ್ಷೇತ್ರದ ನೂತನ ಧರ್ಮಾಧ್ಯಕ್ಷರನ್ನಾಗಿ ಪೋಪ್ ಫ್ರಾನ್ಸಿಸ್ ಅವರು ನೇಮಿಸಿದ್ದಾರೆ.  

08 ಫೆಬ್ರವರಿ 2025, 16:25