MAP

ಪೋಪ್ ಫ್ರಾನ್ಸಿಸ್ ಅವರ ಆರೋಗ್ಯಕ್ಕಾಗಿ ಸಂತ ಪೇತ್ರರ ಚೌಕದಲ್ಲಿ ಜಪಸರ ಮುನ್ನಡೆಸಲಿರುವ ಕಾರ್ಡಿನಲ್ ಪರೋಲಿನ್

ಪೋಪ್ ಫ್ರಾನ್ಸಿಸ್ ಅವರ ಆರೋಗ್ಯಕ್ಕಾಗಿ ಸಂತ ಪೇತ್ರರ ಚೌಕದಲ್ಲಿ ಕಾರ್ಡಿನಲ್ ಪರೋಲಿನ್ ಅವರು ಜಪಸರವನ್ನು ಮುನ್ನಡೆಸಲಿದ್ದಾರೆ. ಈ ಪ್ರಾರ್ಥನೆಯಲ್ಲಿ ರೋಮ್ ನಗರದಲ್ಲಿ ವಾಸಿಸುತ್ತಿರುವ ಎಲ್ಲಾ ಕಾರ್ಡಿನಲ್'ಗಳು, ಧರ್ಮಾಧ್ಯಕ್ಷರುಗಳು ಹಾಗೂ ರೋಮನ್ ಕೂರಿಯಾದ ಸದಸ್ಯರುಗಳು ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಫ್ರಾನ್ಸಿಸ್ ಅವರ ಚೇತರಿಕೆಗಾಗಿ ಪ್ರಪಂಚದಾದ್ಯಂತ ಅಪಾರ ಪ್ರಮಾಣದ ಪ್ರಾರ್ಥನೆಗಳು ಹರಿದು ಬಂದಿವೆ ಮತ್ತು ಭಾನುವಾರ ಪ್ರಕಟಿಸಲು ಮತ್ತು ವಿತರಿಸಲು ಅವರು ಆಯ್ಕೆ ಮಾಡಿಕೊಂಡ ಪವಿತ್ರ ತಂದೆಯ ತ್ರಿಕಾಲ ಪ್ರಾರ್ಥನೆಯ ಭಾಷಣದಲ್ಲಿ, ತಮಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.

ಭಾನುವಾರ ಮಧ್ಯಾಹ್ನ, ರೋಮ್‌ನ ವಿಕಾರ್ ಜನರಲ್ ಕಾರ್ಡಿನಲ್ ಬಾಲ್ದಾಸರೆ ರೀನಾ ಅವರು ರೋಮ್‌ನ ಸೇಂಟ್ ಜಾನ್ ಲ್ಯಾಟೆರನ್‌ನ ಪಾಪಲ್ ಬೆಸಿಲಿಕಾದಲ್ಲಿ ಪೋಪ್ ಅವರ ಚೇತರಿಕೆಗಾಗಿ ವಿಶೇಷ ಬಲಿಪೂಜೆಯನ್ನು ಅರ್ಪಿಸಿದರು ಮತ್ತು ಆ ಸಂಜೆ ಇಟಲಿಯ ಧರ್ಮಾಧ್ಯಕ್ಷ ಮಂಡಳಿಯ  ಅಧ್ಯಕ್ಷ ಕಾರ್ಡಿನಲ್ ಮ್ಯಾಟಿಯೊ ಮಾರಿಯಾ ಜುಪ್ಪಿ ಅವರು ಅದೇ ಉದ್ದೇಶಕ್ಕಾಗಿ ಬೊಲೊಗ್ನಾದ ಸ್ಯಾನ್ ಡೊಮೆನಿಕೊದ ಬೆಸಿಲಿಕಾದಲ್ಲಿ ಜಪಮಾಲೆಯನ್ನು ನಡೆಸಿದರು.

24 ಫೆಬ್ರವರಿ 2025, 16:56