MAP

ಲೆಬನಾನ್ ದೇಶಕ್ಕೆ ಭೇಟಿ ನೀಡಲಿರುವ ಕಾರ್ಡಿನಲ್ ಸೆಝರ್ನಿ

ಪೋಪ್ ಫ್ರಾನ್ಸಿಸ್ ಅವರ ಐಕ್ಯತೆಯನ್ನು ವ್ಯಕ್ತಪಡಿಸಲು ವ್ಯಾಟಿಕನ್ನಿನ ಸಮಗ್ರ ಮಾನವ ಅಭಿವೃದ್ಧಿ ಉತ್ತೇಜನ ಪೀಠದ ಉಸ್ತುವಾರಿಗಳಾಗಿರುವ ಕಾರ್ಡಿನಲ್ ಮೈಕೆಲ್ ಸೆಝರ್ನಿ ಅವರು ಲೆಬಾನನ್ ದೇಶಕ್ಕೆ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಫ್ರಾನ್ಸಿಸ್ ಅವರ ಐಕ್ಯತೆಯನ್ನು ವ್ಯಕ್ತಪಡಿಸಲು ವ್ಯಾಟಿಕನ್ನಿನ ಸಮಗ್ರ ಮಾನವ ಅಭಿವೃದ್ಧಿ ಉತ್ತೇಜನ ಪೀಠದ ಉಸ್ತುವಾರಿಗಳಾಗಿರುವ ಕಾರ್ಡಿನಲ್ ಮೈಕೆಲ್ ಸೆಝರ್ನಿ ಅವರು ಲೆಬಾನನ್ ದೇಶಕ್ಕೆ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ. 

ಪ್ರಸ್ತುತ ಯುದ್ಧದಿಂದ ಬಳಲಿರುವ ಈ ದೇಶಕ್ಕೆ ಕಾರ್ಡಿನಲ್ ಸೆಜರ್ನಿ ಅವರು ಪೋಪ್ ಫ್ರಾನ್ಸಿಸ್ ಅವರ ಪ್ರತಿನಿಧಿಯಾಗಿ ತೆರಳುತ್ತಿದ್ದಾರೆ. ತಮ್ಮ ಈ ಭೇಟಿಯ ವೇಳೆ ಕಾರ್ಡಿನಲ್ ಸೆಜರ್ನಿ ಅವರು ಇಲ್ಲಿನ ಜನತೆಗೆ ಪೋಪ್ ಫ್ರಾನ್ಸಿಸ್ ಅವರು ಆಧ್ಯಾತ್ಮಿಕ ಐಕ್ಯತೆಯನ್ನು, ಪ್ರಾರ್ಥನೆಗಳನ್ನು, ಹಾಗೂ ಪ್ರೇಷಿತ ಆಶೀರ್ವಾದಗಳನ್ನು ವ್ಯಕ್ತಪಡಿಸಲಿದ್ದಾರೆ. ಕಾರ್ಡಿನಲ್ ಸೆರ್ಜನಿ ಅವರು ಮಾನವ ಅಭಿವೃದ್ಧಿ ಉತ್ತೇಜನದ ಭಾಗವಾಗಿ ಈ ಭೇಟಿಯನ್ನು ಕೈಗೊಂಡಿದ್ದಾರೆ.

ಪ್ರಸ್ತುತ ಲೆಬನಾನ್ ದೇಶವು ಕೇವಲ ಯುದ್ಧದಿಂದ ಮಾತ್ರವಲ್ಲದೆ, ಯುದ್ಧದ ಕಾರಣದಿಂದ ಉಂಟಾಗಿರುವ ಆರ್ಥಿಕ ಹಿಂಜರಿತ, ಅಸುರಕ್ಷತೆ ಹಾಗೂ ವಿವಿಧ ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಮಾನವ ಸ್ಥಿತಿಗತಿಗಳನ್ನು ಅರಿತು, ವಿಶ್ಲೇಷಿಸಲು ಕಾರ್ಡಿನಲ್ ಸೆಝರ್ನಿ ಅವರು ಇಲ್ಲಿಗೆ ಆಗಮಿಸಿದ್ಧಾರೆ ಎಂದು ವರದಿಯಾಗಿದೆ. ಕಾರ್ಡಿನಲ್ ಸೆಜರ್ನಿ ಅವರು ತಮ್ಮ ಭೇಟಿಯ ವೇಳೆ ಇಲ್ಲಿನ ಧರ್ಮಾ‌ಧ್ಯಕ್ಷ ಮಂಡಳಿಯ ಧರ್ಮಾಧ್ಯಕ್ಷರುಗಳು, ಗುರುಗಳು, ಧಾರ್ಮಿಕ ಸಹೋದರ ಸಹೋದರಿಯರು ಹಾಗೂ ಶ್ರೀಸಾಮಾನ್ಯರನ್ನೂ ಸಹ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ.

ತಮ್ಮ ಈ ಭೇಟಿಯ ವೇಳೆ ಕಾರ್ಡಿನಲ್ ಸೆಜರ್ನಿ ಅವರು ಇಲ್ಲಿನ ಹಲವು ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿದ್ದು, ಎಲ್ಲವೂ ಒಳ್ಳೆಯದಾಗುತ್ತದೆ. ಈ ಸಂಕಷ್ಟದ ಸಮಯದಲ್ಲಿಯೇ ನಾವು ಎದೆಗುಂದದೆ ಮುಂದುವರೆಯಬೇಕು ಎಂದು ಹೇಳಿದ್ದಾರೆ. 

ಈ ಕುರಿತು ಮಾತನಾಡಿರುವ ಕಾರ್ಡಿನಲ್ ಸೆಜರ್ನಿ ಅವರು "ನಾನು ಈ ಹಿಂದೆ ಈ ಅಂಗವಸ್ತ್ರವನ್ನು ಯಾರಿಗೂ ಕೊಡುತ್ತಿರಿಲಿಲ್ಲ, ಈಗ ಇದರ ಅಗತ್ಯ ನನಗಿಲ್ಲ" ಎಂದು ಖಂಡಿತವಾಗಿಯೂ ಹೇಳುವುದು ಸುಳ್ಳಿನ ಪರಮಾವಧಿಯಾಗುತ್ತದೆ.     

19 ಫೆಬ್ರವರಿ 2025, 17:07