MAP

ಬೈರೂತ್ ನಗರಕ್ಕೆ ಭೇಟಿ ನೀಡಿದ ಕಾರ್ಡಿನಲ್ ಸೆಝರ್ನಿ

ಲೆಬನಾನ್‌ಗೆ ಭೇಟಿ ನೀಡಿದ ಕೊನೆಯ ದಿನದಂದು, ಕಾರ್ಡಿನಲ್ ಮೈಕೆಲ್ ಸೆಝರ್ನಿ ಅವರು 2020 ರ ಬೈರುತ್ ಸ್ಫೋಟದ ಸ್ಥಳಕ್ಕೆ ಭೇಟಿ ನೀಡಿ, ಸಂತ್ರಸ್ಥರ ಕುಟುಂಬಗಳೊಂದಿಗೆ ಒಗ್ಗಟ್ಟಿನಿಂದ ನಿಂತು, ಜೆಸ್ಯೂಟ್ ನಿರಾಶ್ರಿತರ ಸೇವಾ ಕೇಂದ್ರದಲ್ಲಿ ವಲಸಿಗರನ್ನು ಭೇಟಿಯಾದರು.

ವರದಿ: ವ್ಯಾಟಿಕನ್ ನ್ಯೂಸ್

ಲೆಬನಾನ್‌ಗೆ ಭೇಟಿ ನೀಡಿದ ಕೊನೆಯ ದಿನದಂದು, ಕಾರ್ಡಿನಲ್ ಮೈಕೆಲ್ ಸೆಝರ್ನಿ ಅವರು 2020 ರ ಬೈರುತ್ ಸ್ಫೋಟದ ಸ್ಥಳಕ್ಕೆ ಭೇಟಿ ನೀಡಿ, ಸಂತ್ರಸ್ಥರ ಕುಟುಂಬಗಳೊಂದಿಗೆ ಒಗ್ಗಟ್ಟಿನಿಂದ ನಿಂತು, ಜೆಸ್ಯೂಟ್ ನಿರಾಶ್ರಿತರ ಸೇವಾ ಕೇಂದ್ರದಲ್ಲಿ ವಲಸಿಗರನ್ನು ಭೇಟಿಯಾದರು.

ಈ ವೇಳೆ ಕಾರ್ಡಿನಲ್ ಸೆಝರ್ನಿ ಆವರು ಯಾವುದೇ ರೀತಿಯ ಭಾಷಣವನ್ನು ಮಾಡಲಿಲ್ಲ. ಬದಲಿಗೆ ಅವರು ಪೋಪ್ ಫ್ರಾನ್ಸಿಸ್ ಅವರು ಪದೇ ಪದೇ ಹೇಳುವ ಕರುಣೆ, ಪ್ರೀತಿ ಹಾಗೂ ಸೋದರತ್ವದ ಕುರಿತು ಮಾತನಾಡಿದರು. ಯುದ್ಧಗ್ರಸ್ಥ ಪ್ರದೇಶಗಳನ್ನು ಭೇಟಿ ಮಾಡುವಾಗ, ಅಲ್ಲಿನ ಜನತೆಯೊಂದಿಗೆ ಅವರು ಮಾತನಾಡುವಾಗ ಅವರ ನೋವುಗಳನ್ನು ಅವರು ಅರಿತುಕೊಂಡರು.

ಈ ವೇಳೆ ಕಾರ್ಡಿನಲ್ ಸೆಝರ್ನಿ ಅವರೊಂದಿಗೆ ಸ್ಥಳೀಯ ಧರ್ಮಾಧ್ಯಕ್ಷರುಗಳು, ಗುರುಗಳು ಹಾಗೂ ವಿವಿಧ ಶ್ರೀಸಾಮಾನ್ಯರು ಇದ್ದರು ಎಂದು ವರದಿಯಾಗಿದೆ. ಇದೇ ಸಂದರ್ಭದಲ್ಲಿ ಕಾರ್ಡಿನಲ್ ಸೆಝರ್ನಿ ಅವರು ಇಲ್ಲಿನ ಜನತೆಯೊಂದಿಗೆ ಧರ್ಮಸಭೆಯ ಐಕ್ಯತೆಯನ್ನು ವ್ಯಕ್ತಪಡಿಸಿದರು. 

24 ಫೆಬ್ರವರಿ 2025, 16:42