MAP

ಕಾರ್ಡಿನಲ್ ಸಿಪ್ರಿಯಾನಿ ವಿರುದ್ಧ ಶಿಸ್ತುಕ್ರಮದ ಕುರಿತು ಧೃಡೀಕರಿಸಿದ ವ್ಯಾಟಿಕನ್

ಪೆರು ದೇಶದ ಲಿಮಾ ಮಹಾಧರ್ಮಕ್ಷೇತ್ರದ ಮಾಜಿ ಮಹಾಧರ್ಮಾಧ್ಯಕ್ಷ ಕಾರ್ಡಿನಲ್ ಹುವಾನ್ ಲೂಯಿಸ್ ಸಿಪ್ರಿಯಾನಿ ಥೊರ್ನ್ ಅವರ ವಿರುದ್ಧ ವ್ಯಾಟಿಕನ್ ಶಿಸ್ತುಕ್ರಮವನ್ನು ಜರುಗಿಸಿದೆ ಎಂದು ವ್ಯಾಟಿಕನ್ನಿನ ಮಾಧ್ಯಮ ಸಂವಹನ ಆಯೋಗದ ನಿರ್ದೇಶಕ ಮತ್ತಿಯೋ ಬ್ರೂನೋ ಅವರು ಧೃಡಪಡಿಸಿದ್ದಾರೆ.

ವರದಿ: ಸಾಲ್ವತೋರೆ ಚೆರ್ನೂಝಿಯೋ

ಪೆರು ದೇಶದ ಲಿಮಾ ಮಹಾಧರ್ಮಕ್ಷೇತ್ರದ ಮಾಜಿ ಮಹಾಧರ್ಮಾಧ್ಯಕ್ಷ ಕಾರ್ಡಿನಲ್ ಹುವಾನ್ ಲೂಯಿಸ್ ಸಿಪ್ರಿಯಾನಿ ಥೊರ್ನ್ ಅವರ ವಿರುದ್ಧ ವ್ಯಾಟಿಕನ್ ಶಿಸ್ತುಕ್ರಮವನ್ನು ಜರುಗಿಸಿದೆ ಎಂದು ವ್ಯಾಟಿಕನ್ನಿನ ಮಾಧ್ಯಮ ಸಂವಹನ ಆಯೋಗದ ನಿರ್ದೇಶಕ ಮತ್ತಿಯೋ ಬ್ರೂನಿ ಅವರು ಧೃಡಪಡಿಸಿದ್ದಾರೆ.   

ಓಪುಸ್ ದೇಯಿ ಸಂಸ್ಥೆಯ ಭಾಗವಾಗಿರುವ ಕಾರ್ಡಿನಲ್ ಸಿಪ್ರಿಯಾನಿ ಥೊರ್ನ್ ಅವರ ವಿರುದ್ಧ 2018 ರಲ್ಲಿ ವ್ಯಾಟಿಕನ್ನಿಗೆ ಹಲವು ದೂರುಗಳನ್ನು ನೀಡಲಾಗಿತ್ತು. 

ವ್ಯಾಟಿಕನ್ನಿನ ವ್ಯಾಟಿಕನ್ನಿನ ಮಾಧ್ಯಮ ಸಂವಹನ ಆಯೋಗದ ನಿರ್ದೇಶಕ ಮತ್ತಿಯೋ ಬ್ರೂನಿ ಅವರು ಹೇಳುವಂತೆ ಅವರು ಲಿಮಾ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಹುದ್ದೆಗೆ ರಾಜೀನಾಮೆಯನ್ನು ನೀಡಿದ ನಂತರ ಅವರ ಮೇಲೆ ಹಲವು ಅಂಶಗಳ ಶಿಸ್ತುಕ್ರಮವನ್ನು ಜರುಗಿಸಲಾಗುತ್ತು. ಈ ಶಿಸ್ತುಕ್ರಮಗಳಿಗೆ ಅವರು ಒಪ್ಪಿಗೆಯನ್ನು ನೀಡಿ, ಸಹಿ ಮಾಡಿದ್ದರು ಎಂದೂ ಸಹ ಮತ್ತಿಯೋ ಬ್ರೂನಿ ಅವರು ಹೇಳಿದ್ದಾರೆ.

2018 ಮತ್ತು 2019 ರಲ್ಲಿ ಇವರ ಮೇಲೆ 1983 ರಲ್ಲಿ ಹಲವು ಬಾರಿ ಲೈಂಗಿಕ ದೌರ್ಜನ್ಯವನ್ನು ಎಸಗಿದ್ದಾರೆ ಎಂಬ ಕುರಿತು ದೂರುಗಳು ಕೇಳಿಬಂದಿದ್ದವು. ಈ ದೂರನ್ನು ಅಧಿಕೃತವಾಗಿ ವ್ಯಾಟಿಕನ್ನಿಗೆ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಮೇಲೆ ಶಿಸ್ತುಕ್ರಮವನ್ನು ಜರುಗಿಸಲಾಗಿದೆ.

ಸದ್ಯ ಸ್ಪೇನ್ ದೇಶದ ಮ್ಯಾಡ್ರಿಡ್ ನಗರದಲ್ಲಿ ವಾಸಿಸುತ್ತಿರುವ ಕಾರ್ಡಿನಲ್ ಸಿಪ್ರಿಯಾನಿ ಅವರು ತಮ್ಮ ಮೇಲಿನ ಎಲ್ಲಾ ಆರೋಪಗಳು ಸುಳ್ಳು ಹಾಗೂ ಆಧಾರರಹಿತ ಎಂದು ಹೇಳಿದ್ದಾರೆ. "ನಾನು 1983 ರಲ್ಲಿ, ಅದಕ್ಕೂ ಮುಂಚಿತವಾಗಿ ಅಥವಾ ಅದರ ನಂತರವೂ ಸಹ ಯಾವುದೇ ರೀತಿಯ ದೌರ್ಜನ್ಯವನ್ನು ಎಸಗಿಲ್ಲ. ನಾನು ನಿರಪರಾಧಿಯಾಗಿದ್ದೇನೆ. ನನ್ನ ಮೇಲಿನ ಆರೋಪಗಳು ಎಲ್ಲವೂ ಸುಳ್ಳು ಹಾಗೂ ಅಧಾರರಹಿತ" ಎಂದು ನುಡಿದಿದ್ದಾರೆ. 

ಮುಂದುವರೆದು ಮಾತನಾಡಿರುವ ಅವರು "ನನ್ನ ಮೇಲೆ ದೂರು ನೀಡಿದವರ ಮೇಲೆ ನನಗೆ ಯಾವುದೇ ದ್ವೇಷವಿಲ್ಲ. ಆದರೆ ನಾನು ಯಾವುದೇ ತಪ್ಪನ್ನು ಮಾಡಿಲ್ಲ ಎಂಬುದು ಸತ್ಯ" ಎಂದು ಅವರು ಹೇಳಿದ್ದಾರೆ.    

27 ಜನವರಿ 2025, 15:02