ತೆರೆಯಲ್ಪಟ್ಟ ಸಂತ ಮೇರಿ ಮೇಜರ್ ಮಹಾದೇವಾಲಯದ ಪವಿತ್ರ ದ್ವಾರ
ವರದಿ: ಫ್ರಾಂಚೆಸ್ಕಾ ಮೆರ್ಲೋ
ರೋಮ್ ನಗರದ ಸೇಂಟ್ ಮೇರಿ ಮೇಜರ್ ಮಹಾದೇವಾಲಯದ ಪವಿತ್ರ ದ್ವಾರ ಅಧಿಕೃತವಾಗಿ ತೆರೆಯಲ್ಪಡುವುದರ ಮೂಲಕ ಪವಿತ್ರ ವರ್ಷ 2025 ಆರಂಭಗೊಂಡಿದೆ. ಮಾತೆ ಮರಿಯಮ್ಮನವರ ಮಾರ್ಗದರ್ಶನದಲ್ಲಿ ವಿಶ್ವಾಸದಲ್ಲಿ ಪಯಣಿಸಲು ಕಾರ್ಡಿನಲ್ ರೊಲಾಂದಸ್ ಮಾಕ್ರಿಕಾಸ್ ಅವರು ಭಕ್ತಾಧಿಗಳಿಗೆ ಕರೆ ನೀಡಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ಪ್ರಸ್ತುತ ಸೇಂಟ್ ಮೇರಿ ಮೇಜರ್ ಮಹಾದೇವಾಲಯದ ಸಹ ಪ್ರಧಾನ ಗುರುಗಳಾಗಿರುವ ಪೂಜ್ಯ ರೊಲಾಂದಸ್ ಮಾಕ್ರಿಕಾಸ್ ಅವರನ್ನು ಕಳೆದ ಡಿಸೆಂಬರ್ 2024 ರಲ್ಲಿ ಕಾರ್ಡಿನಲ್ ಪದವಿಗೇರಿಸಿದರು.
ಈ ವೇಳೆ ಬಲಿಪೂಜೆಯನ್ನು ಅರ್ಪಿಸಿ ಮಾತನಾಡಿದ ಕಾರ್ಡಿನಲ್ ಮಾಕ್ರಿಕಾಸ್ ಅವರು ಪವಿತ್ರ ದ್ವಾರದ ಪ್ರಾಮುಖ್ಯತೆ ಹಾಗೂ ಮಾತೆ ಮರಿಯಮ್ಮನವರ ಮೂಲಕ ಭಕ್ತಿಯಲ್ಲಿ ಹಾಗೂ ಅವರ ಮಧ್ಯಸ್ಥಿಕೆಯಲ್ಲಿ ಮುಂದುವರೆಯುವ ಪ್ರಾಮುಖ್ಯತೆಯ ಕುರಿತು ಭಕ್ತಾಧಿಗಳಿಗೆ ಹೇಳಿದರು. "ಇಂದು ನಮ್ಮ ಪಯಣ ಆರಂಭವಾಗುತ್ತದೆ. ಈ ನಮ್ಮ ಪಯಣದಲ್ಲಿ ಮಾತೆ ಮರಿಯಮ್ಮನವರ ನಮ್ಮ ಮಾರ್ಗದರ್ಶಕಿಯಾಗಿ ಹಾಗೂ ಬೆಳಕಾಗಿರುತ್ತಾರೆ ಎಂದು ಹೇಳಿದ್ದಾರೆ.
ಜ್ಯೂಬಿಲಿ ವರ್ಷವು ವಿಶೇಷ ವರದಾನಗಳ ಸಮಯವಾಗಿದ್ದು, ಈ ಸಂದರ್ಭದಲ್ಲಿ ನಾವು ಧರ್ಮಸಭೆಯ ಸದಸ್ಯರಾಗಿ ಹಾಗೂ ಭರವಸೆಯ ಯಾತ್ರಿಕರಾಗಿ ಮುಂದುವರೆಯಬೇಕು ಎಂದು ಅವರು ಹೇಳಿದ್ದಾರೆ.