MAP

ಕಾರ್ಡಿನಲ್ ಗುಗೆರೊಟ್ಟಿ: ಕ್ರೈಸ್ತರು ಸಿರಿಯಾದಲ್ಲಿ ಪ್ರಧಾನ ಪಾತ್ರವನ್ನು ವಹಿಸಬೇಕು

ಕಾರ್ಡಿನಲ್ ಕ್ಲಾಡಿಯೋ ಗುಗೆರೊಟ್ಟಿ ಅವರು ಕಾಂಗ್ರಿಗೇಷನ್ ಆಫ್ ದಿ ಈಸ್ಟರ್ನ್ ಚರ್ಚಸ್ ಪೀಠದ ಉಸ್ತುವಾರಿಯಾಗಿದ್ದು, ಅವರು ಸಿರಿಯಾದ ಅಲೆಪ್ಪೋ ನಗರಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿರುವ ಅವರು ಕ್ರೈಸ್ತರು ಸಿರಿಯಾದಲ್ಲಿ ಪ್ರಧಾನ ಪಾತ್ರವನ್ನು ವಹಿಸಬೇಕು ಎಂದು ಹೇಳಿದ್ದಾರೆ.

ವರದಿ: ಸ್ಟೆಫಾನೋ ಲೆಜೈಂಸ್ಕಿ

ಕಾರ್ಡಿನಲ್ ಕ್ಲಾಡಿಯೋ ಗುಗೆರೊಟ್ಟಿ ಅವರು ಕಾಂಗ್ರಿಗೇಷನ್ ಆಫ್ ದಿ ಈಸ್ಟರ್ನ್ ಚರ್ಚಸ್ ಪೀಠದ ಉಸ್ತುವಾರಿಯಾಗಿದ್ದು, ಅವರು ಸಿರಿಯಾದ ಅಲೆಪ್ಪೋ ನಗರಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿರುವ ಅವರು ಕ್ರೈಸ್ತರು ಸಿರಿಯಾದಲ್ಲಿ ಪ್ರಧಾನ ಪಾತ್ರವನ್ನು ವಹಿಸಬೇಕು ಎಂದು ಹೇಳಿದ್ದಾರೆ.

"ಸಿರಿಯಾ ದೇಶವು ಈಗ ಗರ್ಭಾವಸ್ಥೆಯಲ್ಲಿದೆ. ಒಮ್ಮೆ ಹೊಸ ಸಿರಿಯಾ ಹುಟ್ಟಿದ ನಂತರ ಅದರ ಕಾಳಜಿ ವಹಿಸಬೇಕಾಗಿರುವುದು ಕ್ರೈಸ್ತರೇ" ಎಂದು ಕಾರ್ಡಿಬಲ್ ಗುಗೆರೊಟ್ಟಿ ಅವರು ಹೇಳಿದ್ದಾರೆ.

ಸಿರಿಯಾ ದೇಶದಲ್ಲಿ ಎಲ್ಲಾ ಪಂಗಡಗಳ ಕ್ರೈಸ್ತರು ಅನುಭವಿಸುತ್ತಿರುವ ಸಂಕಷ್ಟಗಳ ಕುರಿತು ಮಾತನಾಡಿದ ಕಾರ್ಡಿನಲ್ ಗುಗೆರೊಟ್ಟಿ ಅವರು ಇಲ್ಲಿ ಕ್ರೈಸ್ತರು ಭಯಪಡಬಾರದು. ಪೋಪ್ ಫ್ರಾನ್ಸಿಸ್ ಅವರು ಹೇಳುವಂತೆ ಭರವಸೆಯನ್ನು ಕಳೆದುಕೊಳ್ಳದೆ ಧೈರ್ಯದಿಂದ ಎಲ್ಲವನ್ನೂ ಎದುರಿಸಬೇಕು. ಸಿರಿಯಾ ದೇಶವು ನೂತನ ಸಂವತ್ಸರಕ್ಕೆ ಸಿದ್ದವಾಗುತ್ತಿದ್ದು, ಹೊಸ ಸಿರಿಯಾ ಉದಯವಾದಾಗ ಅದನ್ನು ಕ್ರೈಸ್ತರೇ ಬೆಳೆಸಬೇಕು ಎಂದು ಹೇಳಿದ್ದಾರೆ.

ಈ ವೇಳೆ ಕಾರ್ಡಿನಲ್ ಗುಗೆರೋಟ್ಟಿ ಅವರು ವಲಸೆ ಸಮಸ್ಯೆ, ಆತಂಕವಾದಿಗಳ ಸಮಸ್ಯೆ ಸೇರಿದಂತೆ ಇಲ್ಲಿನ ಸ್ಥಳೀಯ ಧರ್ಮಸಭೆಯನ್ನು ಭಾಧಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಮಾತನಾಡಿದರು. ಇದೇ ವೇಳೆ ಇಲ್ಲಿ ಬಲಿಪೂಜೆಯನ್ನು ಅರ್ಪಿಸಿ, ಕ್ರೈಸ್ತರು ಎದೆಗುಂದದಂತೆ ಕರೆ ನೀಡಿದರು.

28 ಜನವರಿ 2025, 17:42