MAP

ವ್ಯಾಟಿಕನ್ ನ್ಯಾಯಾಧೀಕರಣದ ನೂತನ ಅಧ್ಯಕ್ಷರಾಗಿ ವೆನೆರಾಂಡೊ ಮರಾನೋ ನೇಮಕ

ಪ್ರೊಫೆಸರ್ ವೆನೆರಾಂಡೊ ಮರಾನೋ ಅವರನ್ನು ವ್ಯಾಟಿಕನ್ ನ್ಯಾಯಾಧೀಕರಣ (ಟ್ರಿಬ್ಯುನಲ್) ದ ನೂತನ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಅವರ ಅವಧಿ ಜನವರಿ 01, 2025 ರಿಂದ ಅಧಿಕೃತವಾಗಿ ಆರಂಭಗೊಳ್ಳಲಿದೆ. ಕಳೆದ ತಿಂಗಳು ವ್ಯಾಟಿಕನ್ ನ್ಯಾಯಾಧೀಕರಣ ಅಧ್ಯಕ್ಷರಾಗಿದ್ದ ಜೆಸಿಪ್ಪೆ ಪಿಗ್ನಟೋನೆ ಅವರು ನಿವೃತ್ತಿಯಾದ ಪರಿಣಾಮ, ಈ ಸ್ಥಾನಕ್ಕೆ ನೂತನ ಅಧ್ಯಕ್ಷರನ್ನು ನೇಮಿಸಲಾಗಿದೆ ಎಂದು ವ್ಯಾಟಿಕನ್ ಪ್ರಕಟಣೆಯು ಹೇಳಿದೆ.

ವರದಿ: ವ್ಯಾಟಿಕನ್ ನ್ಯೂಸ್

ಪ್ರೊಫೆಸರ್ ಮರಾನೋ ಅವರು ಈವರೆಗೂ ಇದೇ ಟ್ರಿಬ್ಯುನಲ್'ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

ಪ್ರೊಫೆಸರ್ ಮರಾನೋ ಕ್ಯಾನನ್ ಲಾ ಹಾಗೂ ಎಕ್ಲಿಸಿಯಾಸ್ಟಿಕಲ್ ಲಾ ವಿಷಯಗಳಲ್ಲಿನ ಪ್ರಾಧ್ಯಾಪಕರಾಗಿದ್ದು, ಪ್ರಸ್ತುತ ಅವರು ತೊರ್ ವರ್ಗಾಟ ವಿಶ್ವವಿದ್ಯಾನಿಲಯದಲ್ಲಿ ಕಾನೂನು ವಿಭಾಗದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇದರ ಜೊತೆಗೆ ಪ್ರೊಫೆಸರ್ ಮರಾನೋ ಅವರು ಧರ್ಮಸಭೆಯ ವಿವಿಧ ಆಯೋಗಗಳ ಸದಸ್ಯರು ಹಾಗೂ ಕಾರ್ಯಕಾರಿ ಸಮಿತಿಗಳ ಸಂಚಾಲಕರಾಗಿಯೂ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಕಳೆದ ತಿಂಗಳು ವ್ಯಾಟಿಕನ್ ನ್ಯಾಯಾಧೀಕರಣ ಅಧ್ಯಕ್ಷರಾಗಿದ್ದ ಜೆಸಿಪ್ಪೆ ಪಿಗ್ನಟೋನೆ ಅವರು ನಿವೃತ್ತಿಯಾದ ಪರಿಣಾಮ, ಈ ಸ್ಥಾನಕ್ಕೆ ನೂತನ ಅಧ್ಯಕ್ಷರನ್ನು ನೇಮಿಸಲಾಗಿದೆ ಎಂದು ವ್ಯಾಟಿಕನ್ ಪ್ರಕಟಣೆಯು ಹೇಳಿದೆ. 

28 ಡಿಸೆಂಬರ್ 2024, 16:17