ಉಕ್ರೇನಿನಲ್ಲಿ ಕಾರ್ಡಿನಲ್ ಕ್ರಜೇವ್ಸ್ಕಿ: ಇದೇ ಯುದ್ಧ ಕಾಲದ ಕೊನೆಯ ಕ್ರಿಸ್ಮಸ್ ಆಗಿರಲಿ
ವರದಿ: ಕೀಲ್ಚೆ ಗುಸ್ಸೀ, ಅಜಯ್ ಕುಮಾರ್
ಉಕ್ರೇನ್ ದೇಶಕ್ಕೆ ಭೇಟಿ ನೀಡಿರುವ ಪೇಪಲ್ ಅಲ್ಮೊನೆರ್ ಆಗಿರುವ ಕಾರ್ಡಿನಲ್ ಕ್ರಜೇವ್ಸ್ಕಿ ಅವರು ಇಲ್ಲಿನ ಫಾಸ್ಟಿವ್ ನಗರದಲ್ಲಿ ಸೂಪ್ ಕಿಚನ್ ಅನ್ನು ಉದ್ಘಾಟಿಸಿದ್ದಾರೆ. ತದ ನಂತರ ಇಲ್ಲಿನ ಜನತೆಗೆ ಬಲಿಪೂಜೆಯನ್ನು ಅರ್ಪಿಸಿದ್ದಾರೆ.
ಪ್ರಸ್ತುತ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿಯೂ ಸಹ ಕಾರ್ಡಿನಲ್ ಕೊನ್ರಾಡ್ ಕ್ರಜೇವ್ಸ್ಕಿ ಅವರು ಉಕ್ರೇನ್ ದೇಶದ ಯುದ್ಧ ಭಾದಿತ ವಿವಿಧ ದೇಶಗಳಿಗೆ ಭೇಟಿ ನೀಡಿ, ಜನತೆಯೊಂದಿಗೆ ಬಲಿಪೂಜೆಯನ್ನು ಅರ್ಪಿಸಿದ್ದಾರೆ.
ಈ ದೇಶಕ್ಕೆ ಕಾರ್ಡಿನಲ್ ಕ್ರಜೇವ್ಸ್ಕಿ ಅವರು ಪೋಪ್ ಫ್ರಾನ್ಸಿಸ್ ಅವರ ವಿಶೇಷ ಪ್ರತಿನಿಧಿಯಾಗಿದ್ದು, ಇಲ್ಲಿ ನಡೆಯುತ್ತಿರುವ ವಿವಿಧ ಸನ್ನಿವೇಷಗಳ ಕುರಿತು ಅವರು ಪೋಪ್ ಫ್ರಾನ್ಸಿಸ್ ಅವರಿಗೆ ಮಾಹಿತಿಯನ್ನು ನೀಡುತ್ತಾರೆ. ಇತ್ತೀಚೆಗೆ ಉಕ್ರೇನ್ ದೇಶದಲ್ಲಿ ಪರಿಸ್ಥಿತಿ ಹೇಗಿದೆ ಎಂಬುದರ ಕುರಿತು ಮಾಹಿತಿಯನ್ನು ಪಡೆಯಲು ಪೋಪ್ ಫ್ರಾನ್ಸಿಸ್ ಅವರು ಕಾರ್ಡಿನಲ್ ಕ್ರಜೇವ್ಸ್ಕಿ ಅವರಿಗೆ ಕರೆ ಮಾಡಿದ್ದರು. ಈ ವೇಳೆ "ಇಲ್ಲಿ ಪರಿಸ್ಥಿತಿ ಅಪಾಯಕಾರಿಯಾಗಿದೆ" ಎಂದು ಕಾರ್ಡಿನಲ್ ಕ್ರಜೇವ್ಸ್ಕಿ ಅವರು ಪೋಪ್ ಫ್ರಾನ್ಸಿಸ್ ಅವರಿಗೆ ಮಾಹಿತಿಯನ್ನು ನೀಡಿದ್ದರು.
ಕಾರ್ಡಿನಲ್ ಕೊನ್ರಾಡ್ ಕ್ರಜೇವ್ಸ್ಕಿ ಅವರು ಉಕ್ರೇನ್ ದೇಶದ ಪ್ರೇಷಿತ ರಾಯಭಾರಿ ಆರ್ಚ್'ಬಿಷಪ್ ವಿಸ್ವೊಲ್ದಾಸ್ ಕುಲ್ಬೋಕಾಸ್ ಅವರೊಡನೆ ಸೇರಿ, ಇಲ್ಲಿನ ಮಕ್ಕಳೊಂದಿಗೆ ಕ್ರಿಸ್ಮಸ್ ಹಬ್ಬವನ್ನು ಆಚರಿಸಿದರು ಎಂದು ವರದಿಯಾಗಿದೆ.