ಅಪೊಸ್ಟಾಲಿಕ್ ಪೆನಿಟೆನ್ಷಿಯರಿ ರೀಜೆಂಟ್: ಪಾಪನಿವೇದನೆ ಆತ್ಮಕ್ಕೆ ಪವಿತ್ರ ದ್ವಾರವಾಗಿದೆ
ವರದಿ: ಡೊರೊಟಾ ಅಬ್ದೊಲ್ಮೌಲ ವಿಯೆತ್, ಕ್ರಿಸ್ಟೋಫ್ ಬ್ರಾಂಕ್
ಅಪೊಸ್ಟಾಲಿಕ್ ಪೆನಿಟೆನ್ಷಿಯರಿ (ಪ್ರೇಷಿತ ಪಾಪವಿಖ್ಯಾಪನಾ ಪೀಠ) ಯ ರೀಜೆಂಟ್ ಆಗಿರುವ ಬಿಷಪ್ ಕ್ರಿಸ್ಟಾಫ್ ಜೋಸೆಫ್ ನಿಕಿಯೆಲ್ ಅವರು ಜ್ಯೂಬಿಲಿ ಸಂದರ್ಭದಲ್ಲಿ ಪಶ್ಚಾತಾಪ, ಪ್ರಾಯಶ್ಚಿತ್ತ ಹಾಗೂ ಆಧ್ಯಾತ್ಮಿಕತೆಯ ಮಹತ್ವದ ಕುರಿತು ಮಾತನಾಡಿದ್ದಾರೆ. ಈ ಕುರಿತು ಹೇಳಿರುವ ಅವರು ಪವಿತ್ರ ದ್ವಾರಗಳಂತೆ ಪಾಪನಿವೇದನೆ ಆತ್ಮಕ್ಕೆ ಪವಿತ್ರ ದ್ವಾರವಾಗಿದೆ ಎಂದು ಹೇಳಿದ್ದಾರೆ.
ಈ ಕುರಿತು ವ್ಯಾಟಿಕನ್ ಮಾಧ್ಯಮಕ್ಕೆ ಮಾತನಾಡಿರುವ ಬಿಷಪ್ ಕ್ರಿಸ್ಟಾಫ್ ಜೋಸೆಫ್ ನಿಕಿಯೆಲ್ ಅವರು ಈ ಕುರಿತು ನಾವು ಸಾಕಷ್ಟು ಧರ್ಮಸಭೆಯ ಪುಸ್ತಕಗಳಲ್ಲಿ ನೋಡುತ್ತೇವೆ. ಅದಲ್ಲದೆ ಪಾಪನಿವೇದನೆಯ ಮಹತ್ವವನ್ನು ನಾವು ಸಂತರುಗಳ ಜೀವನದಲ್ಲಿ ನೋಡ ಬಹುದಾಗಿದೆ. ನಮ್ಮೆಲ್ಲಾ ಬಲಹೀನತೆಗಳ ನಡುವೆಯೂ ಸಹ ದೇವರು ನಮಗೆ ಅವರ ವರದಾನಗಳನ್ನು ನೀಡುತ್ತಾರೆ ಹಾಗೂ ನಮ್ಮನ್ನು ಹರಸುತ್ತಾರೆ" ಎಂದು ಹೇಳಿದ್ದಾರೆ.
ಜ್ಯೂಬಿಲಿ ಸಂದರ್ಭದಲ್ಲಿ ಆಧ್ಯಾತ್ಮಿಕವಾಗಿ ಸಿದ್ಧತೆಗೊಂಡು, ಪಾಪನಿವೇದನೆಯನ್ನು ಮಾಡಿ, ಬಲಿಪೂಜೆಯಲ್ಲಿ ಭಾಗವಹಿಸುವುದರಿಂದ ಪಾಪಗಳ ಪರಿಹಾರವನ್ನು ಪಡೆದುಕೊಳ್ಳ ಬಹುದು ಎಂದು ಅಪೊಸ್ಟಾಲಿಕ್ ಪೆನಿಟೆನ್ಷಿಯರಿ (ಪ್ರೇಷಿತ ಪಾಪವಿಖ್ಯಾಪನಾ ಪೀಠ) ಯ ರೀಜೆಂಟ್ ಆಗಿರುವ ಬಿಷಪ್ ಕ್ರಿಸ್ಟಾಫ್ ಜೋಸೆಫ್ ನಿಕಿಯೆಲ್ ಅವರು ಹೇಳಿದ್ದಾರೆ.