MAP

ಜಗತ್ತನ್ನು ರೂಪಿಸಲು ನಮಗೆ ಸಮಯ ಬಂದಿದೆ: ವ್ಯಾಟಿಕನ್ನಿನ ಸಂವಹನ ಪೀಠದ ಪ್ರಿಫೆಕ್ಟ್ ಮಾತು

ಪ್ರಸ್ತುತ ಕಾಲಘಟ್ಟದಲ್ಲಿ ಸತ್ಯವನ್ನು ಪರಿಣಾಮಕಾರಿಯಾಗಿ ಸಂವಹಿಸಲು ಹಾಗೂ ಅದನ್ನು ಇತರರೊಂದಿಗೆ ಹಂಚಿಕೊಂಡು, ನಮ್ಮ ಜಗತ್ತನ್ನು ಬದಲಾಯಿಸಲು ನಮಗೆ ಸಮಯ ಬಂದಿದೆ ಎಂದು ಪೌಲೊ ರೂಫಿನಿ ಅವರು ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಭಾರತದಲ್ಲಿ ರಾಷ್ಟ್ರೀಯ ಕಥೋಲಿಕ ಮಾಧ್ಯಮ ಸಮಾವೇಶವನ್ನು ಉದ್ಘಾಟಿಸುತ್ತಾ ಮಾತನಾಡಿದ ವ್ಯಾಟ್ಕನ್ನಿನ ಸಂವಹನ ಪೀಠದ ಪರ್ಫೆಕ್ಟ್ ಪೌಲೋ ರಫಿನಿ ಅವರು ಜಗತ್ತನ್ನು ರೂಪಿಸಲು ಕಥೋಲಿಕರಾದ ನಮಗೆ ಸಮಯ ಬಂದಿದೆ ಎಂದು ಹೇಳಿದ್ದಾರೆ. ಈ ರಾಷ್ಟ್ರೀಯ ಕಥೋಲಿಕ ಮಾಧ್ಯಮ ಸಮಾವೇಶವನ್ನು ಬೆಂಗಳೂರಿನಲ್ಲಿ ಸಲೇಶಿಯನ್ ಧಾರ್ಮಿಕ ಸಭೆಯವರು ಆಯೋಜಿಸಿದ್ದಾರೆ.

ಪ್ರಸ್ತುತ ಕಾಲಘಟ್ಟದಲ್ಲಿ ಸತ್ಯವನ್ನು ಪರಿಣಾಮಕಾರಿಯಾಗಿ ಸಂವಹಿಸಲು ಹಾಗೂ ಅದನ್ನು ಇತರರೊಂದಿಗೆ ಹಂಚಿಕೊಂಡು, ನಮ್ಮ ಜಗತ್ತನ್ನು ಬದಲಾಯಿಸಲು ನಮಗೆ ಸಮಯ ಬಂದಿದೆ ಎಂದು ಪೌಲೊ ರೂಫಿನಿ ಅವರು ಹೇಳಿದ್ದಾರೆ.

ಮುಂದುವರಿತು ಮಾತನಾಡಿರುವ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಅಭ್ಯರ್ಥಿಗಳಿಗೆ ಕೃತಕ ಬುದ್ಧಿಮತ್ತೆಯನ್ನು ಜವಾಬ್ದಾರಿಯಿಂದ ಹಾಗೂ ಧರ್ಮಸಭೆಯ ಒಳಿತಿಗಾಗಿ ಬಳಸುವಂತೆ ಕರೆ ನೀಡಿದ್ದಾರೆ. ಇದೇ ಹೊತ್ತಿನಲ್ಲಿ ಕೃತಕ ಬುದ್ಧಿಮತ್ತೆ ಎಂಬುದು ನಮ್ಮನ್ನು ಭಾವಹೀನರನ್ನಾಗಿಸಬಾರದು. ಸಂವಹನದ ಮೂಲಕ ನಾವು ಉತ್ತಮ ಸಂಬಂಧಗಳನ್ನು ಹಾಗೂ ಸಮಾಜವನ್ನು ನಿರ್ಮಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ವಿಶ್ವಗುರು ಫ್ರಾನ್ಸಿಸ್ ಅವರ ಮಾತುಗಳನ್ನು ಉದಾಹರಣೆಯಾಗಿ ಬಳಸಿಕೊಂಡವರು ನಾವು ಎಂತದ್ದೇ ಸಂದರ್ಭದಲ್ಲಿ ಸ್ಪೂರ್ತಿಯನ್ನು ಕಳೆದುಕೊಳ್ಳಬಾರದು. ನಾವೆಲ್ಲರೂ ಭಾನುವಾರ ಆಗಿದ್ದು ನಮ್ಮ ಮಾನವತೆಯ ವಿವಿಧ ಸ್ಥರಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ವಿಶ್ವದ ಒಳಿತಿಗಾಗಿ ಬಳಸಿಕೊಳ್ಳಬೇಕು. ವಿವಿಧತೆಯಲ್ಲಿ ಏಕತೆಯನ್ನು ನಾವು ಮನುಷ್ಯರಾಗಿ ಕಾಣಬೇಕು ಎಂದು ಸಮಾವೇಶದಲ್ಲಿ ನೆರೆದಿದ್ದವರಿಗೆ ಕಿವಿ ಮಾತನ್ನು ಹೇಳಿದರು.

ಡಿಜಿಟಲ್ ಸಂವಹನ ಎಂಬುದು ನಾವು ಹಿಂದೆ ಎಂದು ಕೇಳಿರದ ರೀತಿಯಲ್ಲಿ ನಾವೆಲ್ಲರೂ ಸಂಪರ್ಕವನ್ನು ಹೊಂದುವಂತೆ ಮಾಡಿದೆ. ಈ ಸಂಪರ್ಕಗಳನ್ನು ಸಮುದಾಯಗಳನ್ನು ಸೃಷ್ಟಿಸಲು, ವೇದಿಕೆಗಳನ್ನು ನಿರ್ಮಾಣ ಮಾಡಲು, ಹಾಗೂ ಸಹಯೋಗದೊಂದಿಗೆ ಮಾನವೀಯ ರೀತಿಯಲ್ಲಿ ಮುನ್ನಡೆಯಲು ನಾವು ಉಪಯೋಗಿಸಿಕೊಳ್ಳಬೇಕಿದೆ ಎಂದು ಅವರು ಹೇಳಿದರು.

23 ನವೆಂಬರ್ 2024, 15:58