MAP

ಸಿರಿಯಾ ಮೇಲೆ ಇಸ್ರೇಲ್ ದಾಳಿ; ಮೃತರ ಸಂಖ್ಯೆ 71 ಕ್ಕೆ ಏರಿಕೆ

ಮಧ್ಯ ಸಿರಿಯಾದ ಪ್ರಾಚೀನ ನಗರ ಪಾಲ್ಮಿರಾದ ಮೇಲೆ ಬುಧವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮೃತರ ಸಂಖ್ಯೆ 71ಕ್ಕೆ ಏರಿಕೆಯಾಗಿದೆ. ಮೃತರು ಇರಾನ್ ಪರ ಸಶಸ್ತ್ರ ಹೋರಾಟಗಾರರ ಗುಂಪಿನ ಸದಸ್ಯರು ಎಂದು ಸಿರಿಯಾದ ರಕ್ಷಣಾ ಇಲಾಖೆ ಹೇಳಿದೆ.

ವರದಿ: ಸಾಲ್ವತೋರೆ ಚೆರ್ನೂಝಿಯೋ, ಅಜಯ್ ಕುಮಾರ್

ಮಧ್ಯ ಸಿರಿಯಾದ ಪ್ರಾಚೀನ ನಗರ ಪಾಲ್ಮಿರಾದ ಮೇಲೆ ಬುಧವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮೃತರ ಸಂಖ್ಯೆ 71ಕ್ಕೆ ಏರಿಕೆಯಾಗಿದೆ. ಮೃತರು ಇರಾನ್ ಪರ ಸಶಸ್ತ್ರ ಹೋರಾಟಗಾರರ ಗುಂಪಿನ ಸದಸ್ಯರು ಎಂದು ಸಿರಿಯಾದ ರಕ್ಷಣಾ ಇಲಾಖೆ ಹೇಳಿದೆ.

ಇಸ್ರೇಲ್ ಪಡೆ ಪಾಲ್ಮಿರಾದ ಹಲವಾರು ಕಟ್ಟಡಗಳನ್ನು ಗುರಿಯಾಗಿಸಿಕೊಂಡು ಅಲ್-ಟಾನ್ಫ್ ಪ್ರದೇಶದಿಂದ ಆಕ್ರಮಣವನ್ನು ಪ್ರಾರಂಭಿಸಿತು. ದಾಳಿಯಲ್ಲಿ ಸಿರಿಯಾದಲ್ಲಿರುವ ಇರಾನ್ ಪರ ಹೋರಾಟಗಾರರ ಗುಂಪಿನ 45, ಇರಾಕ್‍ನ ಅಲ್-ನುಜಾಬ ಸಶಸ್ತ್ರ ಹೋರಾಟಗಾರರ ಗುಂಪಿನ 22 ಮತ್ತು ಲೆಬನಾನ್‍ನ ಹಿಜ್ಬುಲ್ಲಾ  ಗುಂಪಿನ 4 ಹೋರಾಟಗಾರರು ಸಾವನ್ನಪ್ಪಿದ್ದಾರೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.

ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಪಾಲ್ಮಿರಾದ ಮೂರು ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆದಿರುವುದಾಗಿ ವರದಿಯಾಗಿದೆ.

22 ನವೆಂಬರ್ 2024, 17:21