MAP

ವಲೆನ್ಸಿಯಾದ ಬಿರುಗಾಳಿ ಸಂತ್ರಸ್ಥ ಜನರಿಗೆ ಪೋಪರ ಐಕ್ಯತೆಯನ್ನು ಪಸರಿಸಲು ಸ್ಪೇನ್ ದೇಶಕ್ಕೆ ಭೇಟಿ ನೀಡಿದ ಕಾರ್ಡಿನಲ್ ಮೈಕಲ್ ಸೆಸರ್ನಿ

ಇಲ್ಲಿ ಕಾರ್ಡಿನಲ್ ಮೈಕಲ್ ಸೆಸರ್ನಿ ಅವರು ಸರ್ಕಾರದ ಅಧಿಕಾರಿಗಳು, ಧರ್ಮಾಧ್ಯಕ್ಷರು, ಗುರುಗಳು, ಧಾರ್ಮಿಕ ಸಹೋದರ-ಸಹೋದರಿಯರು, ಶ್ರೀಸಾಮಾನ್ಯ ಜನರು ಸೇರಿದಂತೆ ಸಂತ್ರಸ್ಥ ಕುಟುಂಬಗಳನ್ನು ಭೇಟಿ ಮಾಡಿ, ಅವರಿಗೆ ಪೋಪ್ ಫ್ರಾನ್ಸಿಸ್ ಅವರ ಐಕ್ಯತೆಯನ್ನು ತಿಳಿಸಿದ್ದಾರೆ. ಮುಂದುವರೆದು, ಇಲ್ಲಿನ ಸಂತ್ರಸ್ಥ ಕುಟುಂಬಗಳು "ಈ ವಿನಾಶದ ಹಾಗೂ ವಿಷಮ ಪರಿಸ್ಥಿತಿಯ ಸಂದರ್ಭದಲ್ಲಿ ನಮಗೆ ಮೊದಲು ನೆರವು ನೀಡಿದ್ದು ಧರ್ಮಸಭೆ" ಎಂದು ಹೇಳಿದ್ದಾರೆ.

ವರದಿ: ಸಾಲ್ವತೋರೆ ಚೆರ್ನೂಝಿಯೋ, ಅಜಯ್ ಕುಮಾರ್

ವ್ಯಾಟಿಕನ್ ಪೀಠದ ಮಾನವ ಸಮಗ್ರತೆ ಪೀಠದ ಪ್ರೀಫೆಕ್ಟ್ ಆಗಿರುವ ಕಾರ್ಡಿನಲ್ ಮೈಕಲ್ ಸೆಸರ್ನಿ ಅವರು ಡಾನಾ ಬಿರುಗಾಳಿಯಿಂದ ಅಸ್ತವ್ಯಸ್ತವಾಗಿರುವ ಸ್ಪೇನ್ ದೇಶದ ವಲೆನ್ಸಿಯಾ ಪ್ರಾಂತ್ಯಕ್ಕೆ ಭೇಟಿಯನ್ನು ನೀಡಿದ್ದಾರೆ. ಇಲ್ಲಿ ಅವರು ಬಿರುಗಾಳಿಯ ನಂತರ ಉಂಟಾಗಿರುವ ವಿನಾಶವನ್ನು ಅವಲೋಕಿಸಿದ್ದು, ಈ ಬಿರುಗಾಳಿಯಿಂದ ಬಾಧಿತರಾದ ಸಂತ್ರಸ್ಥರಿಗೆ ಪೋಪ್ ಫ್ರಾನ್ಸಿಸ್ ಅವರ ಐಕ್ಯತೆಯನ್ನು ತಿಳಿಸಿದ್ದಾರೆ.

ಕಳೆದ ಅಕ್ಟೋಬರ್ ತಿಂಗಳಲ್ಲಿ ವಲೆನ್ಸಿಯಾ ಪ್ರಾಂತ್ಯಕ್ಕೆ ಬಂದು ಅಪ್ಪಳಿಸಿದ ಡಾನಾ ಬಿರುಗಾಳಿಯು ಸುಮಾರು ಇನ್ನೂರು ಜನರನ್ನು ಬಲಿಪಡೆದುಕೊಂಡಿದ್ದು, ನೂರಾರು ಜನರು ಕಾಣೆಯಾಗಿದ್ದಾರೆ ಮಾತ್ರವಲ್ಲದೆ ಸಾವಿರಾರು ಜನರು ತಮ್ಮ ಮನೆ, ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡು ಸಂತ್ರಸ್ಥರಾಗಿದ್ದಾರೆ. ಕಳೆದ ಒಂದು ವಾರದಿಂದ ವಲೆನ್ಸಿಯಾ ನಗರಕ್ಕೆ ಭೇಟಿ ನೀಡಿರುವ ಕಾರ್ಡಿನಲ್ ಸೆಸರ್ನಿಯವರು ಇಲ್ಲಿನ ಪರಿಸ್ಥಿತಿಯ ಕುರಿತಾಗಿ ಕೂಲಂಕುಷವಾಗಿ ಅವಲೋಕಿಸುತ್ತಿದ್ದಾರೆ.

ಇಲ್ಲಿ ಕಾರ್ಡಿನಲ್ ಮೈಕಲ್ ಸೆಸರ್ನಿ ಅವರು ಸರ್ಕಾರದ ಅಧಿಕಾರಿಗಳು, ಧರ್ಮಾಧ್ಯಕ್ಷರು, ಗುರುಗಳು, ಧಾರ್ಮಿಕ ಸಹೋದರ-ಸಹೋದರಿಯರು, ಶ್ರೀಸಾಮಾನ್ಯ ಜನರು ಸೇರಿದಂತೆ ಸಂತ್ರಸ್ಥ ಕುಟುಂಬಗಳನ್ನು ಭೇಟಿ ಮಾಡಿ, ಅವರಿಗೆ ಪೋಪ್ ಫ್ರಾನ್ಸಿಸ್ ಅವರ ಐಕ್ಯತೆಯನ್ನು ತಿಳಿಸಿದ್ದಾರೆ. ಮುಂದುವರೆದು, ಇಲ್ಲಿನ ಸಂತ್ರಸ್ಥ ಕುಟುಂಬಗಳು "ಈ ವಿನಾಶದ ಹಾಗೂ ವಿಷಮ ಪರಿಸ್ಥಿತಿಯ ಸಂದರ್ಭದಲ್ಲಿ ನಮಗೆ ಮೊದಲು ನೆರವು ನೀಡಿದ್ದು ಧರ್ಮಸಭೆ" ಎಂದು ಹೇಳಿದ್ಧಾರೆ.

ಇಲ್ಲಿನ ಸ್ಥಳೀಯ ಧರ್ಮಸಭೆಯು ಡಾನಾ ಬಿರುಗಾಳಿಯಿಂದ ಸಂತ್ರಸ್ಥರಾದವರಿಗೆ ಎಲ್ಲಾ ರೀತಿಯ ನೆರವನ್ನು ನೀಡಿದ್ದು, ಮಾನವೀಯತೆ ಮೆರೆದಿದೆ. ಇಲ್ಲಿನ ಮಹಾಧರ್ಮಾಧ್ಯಕ್ಚರು ವಲೆನ್ಸಿಯಾದ ಪ್ರತಿ ಧರ್ಮಕೇಂದ್ರಕ್ಕೂ ಭೇಟಿಯನ್ನು ನೀಡಿದ್ದು, ಪರಿಸ್ಥಿತಿಯನ್ನು ಬಹಳ ಮಾನವೀಯತೆಯಿಂದ ನಿರ್ವಹಿಸಿದ್ದಾರೆ. ಈ ವಿಷಯ ಸಂದರ್ಭದಲ್ಲಿ ಇಲ್ಲಿನ ಚರ್ಚುಗಳು ಪರಿಹಾರ ಕೇಂದ್ರಗಳು ಹಾಗೂ ಆಸ್ಪತ್ರೆಗಳಾಗಿ ಕಾರ್ಯನಿರ್ವಹಿಸಿದವು ಎಂಬುದನ್ನು ನಾವು ಇಲ್ಲಿ ಸ್ಮರಿಸಿಕೊಳ್ಳಬೇಕಿದೆ.

26 ನವೆಂಬರ್ 2024, 13:57