ಸಾರ್ವಜನಿಕ ಭೇಟಿಯಲ್ಲಿ ಪೋಪ್: ದೇವರ ಸಮಯ ಹಾಗೂ ವರದಾನದಲ್ಲಿ ನಂಬಿಕೆಯಿಡಿ
ವರದಿ: ವ್ಯಾಟಿಕನ್ ನ್ಯೂಸ್
ತಮ್ಮ ಸಾರ್ವಜನಿಕ ಭೇಟಿಯಲ್ಲಿ ಪೋಪ್ ಲಿಯೋ ಅವರು ಜನತೆಯನ್ನುದ್ದೇಶಿಸಿ ಮಾತನಾಡಿದ್ದು, ಪವಿತ್ರ ಶನಿವಾರದ ಪ್ರಾಮುಖ್ಯತೆಯ ಕುರಿತಿ ಹೇಳಿದ್ದಾರೆ. ಎಲ್ಲರೂ ಸಹ ಎದೆಗುಂದದೆ ದೇವರ ಸಮಯ ಹಾಗೂ ವರದಾನದಲ್ಲಿ ನಂಬಿಕೆಯಿಡಬೇಕು ಎಂದು ಹೇಳಿದ್ದಾರೆ.
ಯಾವುದೇ ಸಮಯವು ನಾವು ಅದನ್ನು ದೇವರಿಗೆ ಅರ್ಪಿಸಿದರೆ ಅದು ವರದಾನದ ಸಮಯವಾಗುತ್ತದೆ ಎಂದು ಪೋಪ್ ಹದಿನಾಲ್ಕನೇ ಲಿಯೋ ಅವರು ಇಂದು ತಮ್ಮ ಸಾರ್ವಜನಿಕ ಭೇಟಿಯಲ್ಲಿ ನೆರೆದಿದ್ದ ಭಕ್ತಾಧಿಗಳಿಗೆ ಹೇಳಿದ್ದಾರೆ. ಯೇಸುಕ್ರಿಸ್ತರೇ ನಮ್ಮ ಭರವಸೆ ಎಂಬ ಶೀರ್ಷಕೆಯ ಮೇಲೆ ಪೋಪ್ ಅವರು ತಮ್ಮ ಧರ್ಮೋಪದೇಶವನ್ನು ಮುಂದುವರೆಸಿದರು.
"ಶನಿವಾರವೂ ಸಹ ವಿಶ್ರಾಂತಿಯ ದಿನವಾಗಿದೆ. ಆದರೆ ನಾವು ವಿಶ್ರಾಂತಿಯನ್ನು ತೆಗೆದುಕೊಳ್ಳಲೂ ಸಹ ಹೆಣಗುತ್ತೇವೆ ಎಂದು ಅವರು ಹೇಳಿದ್ದಾರೆ. ಇದೊಂದು ಮಹಾಮೌನ ಹಾಗೂ ಸಂತೋಷಭರಿತ ನಿರೀಕ್ಷೆಯ ಕಾಲವಾಗಿದೆ ಎಂದೂ ಸಹ ಅವರು ಹೇಳಿದ್ದಾರೆ.
ದೇವರು ಸೃಷ್ಟಿಯನ್ನು ಮಾಡಿದ ನಂತರ ವಿಶ್ರಮಿಸಿದಂತೆ ಕ್ರಿಸ್ತರೂ ಸಹ ರಕ್ಷಣೆಯ ಕಾರ್ಯವನ್ನು ಮುಗಿಸಿದ ನಂತರ ವಿಶ್ರಮಿಸಿದರು ಎಂದು ಪೋಪ್ ಹದಿನಾಲ್ಕನೇ ಲಿಯೋ ಅವರು ಭಕ್ತಾಧಿಗಳಿಗೆ ತಿಳಿಸಿದರು.
"ನಾವು ನಮ್ಮ ಜೀವನವನ್ನು ಬಹಳ ಗೊಂದಲ ಹಾಗೂ ವೇಗದಿಂದ ಜೀವಿಸುತ್ತೇವೆ. ಆದರೆ, ನಮಗೆ ಎಲ್ಲಿ ನಿಲ್ಲಿಸಬೇಕು ಎಂಬುದನ್ನು ತಿಳಿದುಕೊಳ್ಳುವ ಅಗತ್ಯವಿದೆ. ಹೀಗೆ ತಿಳಿದುಕೊಂಡಾಗ ಮಾತ್ರ ನಾವು ಎಲ್ಲಿ ಹೋಗುತ್ತಿದ್ದೇವೆ ಎಂಬುದನ್ನು ಕುರಿತು ನಾವು ಆಲೋಚಿಸಿದಂತಾಗುತ್ತದೆ ಎಂದು ಪೋಪ್ ಹೇಳಿದರು.
ದೇವರಲ್ಲಿನ ನಂಬಿಕೆ ಅಂತಿಮವಾಗಿದೆ ಎಂದು ಹೇಳುವ ಮೂಲಕ, ಮೌನದಿಂದ ನಾವು ಅವರ ಚಿತ್ತವನ್ನು ಆಲಿಸಬೇಕು ಎಂದು ಪೋಪ್ ಹೇಳಿದರು.