ಸದಾ ಕಾಲದ ಸಂಕೇತಗಳನ್ನು ಗಮನಿಸುವಂತೆ ಧಾರ್ಮಿಕರಿಗೆ ಕರೆ ನೀಡಿದ ಪೋಪ್
ತಮ್ಮ ಮಹಾಸಮ್ಮೇಳನಗಳಿಗೆ ರೋಮ್ ನಗರಕ್ಕೆ ಆಗಮಿಸಿದ್ದ ನಾಲ್ಕು ವಿವಿಧ ಧಾರ್ಮಿಕ ಸಭೆಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಲಿಯೋ ಅವರು ಸದಾ ಕಾಲದ ಸಂಕೇತಗಳನ್ನು ಗಮನಿಸುವಂತೆ ಅವರಿಗೆ ಪ್ರೋತ್ಸಾಹವನ್ನು ನೀಡಿದ್ದಾರೆ.
ವರದಿ: ವ್ಯಾಟಿಕನ್ ನ್ಯೂಸ್
ತಮ್ಮ ಮಹಾಸಮ್ಮೇಳನಗಳಿಗೆ ರೋಮ್ ನಗರಕ್ಕೆ ಆಗಮಿಸಿದ್ದ ನಾಲ್ಕು ವಿವಿಧ ಧಾರ್ಮಿಕ ಸಭೆಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಲಿಯೋ ಅವರು ಸದಾ ಕಾಲದ ಸಂಕೇತಗಳನ್ನು ಗಮನಿಸುವಂತೆ ಅವರಿಗೆ ಪ್ರೋತ್ಸಾಹವನ್ನು ನೀಡಿದ್ದಾರೆ.
ಧಾರ್ಮಿಕ ಜೀವನದಲ್ಲಿ ನಾವೆಲ್ಲರೂ ಪವಿತ್ರವಾಗಿರಬೇಕು ಎಂದು ಹೇಳಿದ ಪೋಪ್ ಲಿಯೋ ಅವರು ಸಾಮುದಾಯಿಕ ಜೀವನವನ್ನು ನಡೆಸಬೇಕು. ನಮ್ರತೆ ಅಥವಾ ವಿಧೇಯತೆ ಎಂಬುದು ಧಾರ್ಮಿಕ ಜೀವನದ ಬಹುಮುಖ್ಯ ಅಂಗವಾಗಿದ್ದು, ನಾವು ಎಲ್ಲಾ ಸಮಯದಲ್ಲಿಯೂ ವಿಧೇಯರಾಗಿರಬೇಕು ಎಂದು ಪೋಪ್ ಲಿಯೋ ನಾಲ್ಕು ವಿವಿಧ ಧಾರ್ಮಿಕ ಸಭೆಗಳ ಸದಸ್ಯರನ್ನು ಉದ್ದೇಶಿಸಿ ಹೇಳಿದರು.
ಎಲ್ಲಾದಕ್ಕೂ ನಾವು ಸದಾ ಮುಕ್ತರಾಗಿರಬೇಕು ಎಂದು ಹೇಳಿದ ಪೋಪ್ ಲಿಯೋ ಅವರು ಸದಾ ಕಾಲದ ಸಂಕೇತಗಳನ್ನು ಗಮನಿಸುವಂತೆ ಈ ಧಾರ್ಮಿಕ ಸಭೆಗಳ ಸದಸ್ಯರಿಗೆ ಕರೆಯನ್ನು ನೀಡಿದರು ಹಾಗೂ ಅವರನ್ನು ಪ್ರೋತ್ಸಾಹಿಸಿದರು.
ಧಾರ್ಮಿಕ ಜೀವನಕ್ಕೆ ಪ್ರತಿದಿನವೂ ಸಾಕ್ಷಿಗಳಾಗುತ್ತಿರುವ ಅವರಿಗೆ ಅಂತಿಮವಾಗಿ ಪೋಪ್ ಲಿಯೋ ಧನ್ಯವಾದಗಳನ್ನು ತಿಳಿಸಿದರು.
18 ಸೆಪ್ಟೆಂಬರ್ 2025, 14:58