ಸಾರ್ವಜನಿಕ ಭೇಟಿಯಲ್ಲಿ ಪೋಪ್: ಅತ್ಯಂತ ಕರಾಳ ಸಂದರ್ಭದಲ್ಲಿಯೂ ಪ್ರೀತಿಸುವುದು ತಡವಲ್ಲ
ವರದಿ: ವ್ಯಾಟಿಕನ್ ನ್ಯೂಸ್
ಇಂದಿನ ತಮ್ಮ ಸಾರ್ವಜನಿಕ ಭೇಟಿಯಲ್ಲಿ ಪೋಪ್ ಲಿಯೋ XIV ಅವರು ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದ್ದು, ಯೇಸುವಿನ ಪ್ರೀತಿಯ ಕುರಿತು ಮಾತನಾಡಿದ್ದಾರೆ. ಯೇಸುವಿನ ಪ್ರೀತಿ ಎಂಬುದು ಎಂತಹ ಕರಾಳ ಸಂದರ್ಭದಲ್ಲಿಯೂ ಸಹ ಪ್ರೀತಿಸುವುದನ್ನು ನಮಗೆ ಕಲಿಸುತ್ತದೆ ಎಂದು ಅವರು ಹೇಳಿದರು.
"ಇಂದು ನಾವು ಕ್ಷಮಿಸುವ ವರದಾನಕ್ಕಾಗಿ ಬೇಡೋಣ. ನಮಗೆ ಅರ್ಥವಾಗದಿದ್ದರೂ, ನಮ್ಮನ್ನು ಎಲ್ಲರೂ ಕೈಬಿಟ್ಟಿದ್ದಾರೆ ಎಂದು ನಮಗನಿಸಿದರೂ ಸಹ ಇದಕ್ಕಾಗಿ ನಾವು ಬೇಡೋಣ" ಎಂದು ಪೋಪ್ ಲಿಯೋ ಅವರು ಇಂದು ಸಂತ ಪೇತ್ರರ ಚೌಕದಲ್ಲಿ ನೆರೆದಿದ್ದ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದರು.
ರೋಮನ್ ನಗರದ ಬಿಸಿಲಿನ ಬೇಗೆಯ ಹಿನ್ನೆಲೆ ಇಂದಿನ ಸಾರ್ವಜನಿಕ ಭೇಟಿಯು ಪೋಪ್ ಆರನೇ ಪೌಲರ ಸಭಾಂಗಣದಲ್ಲಿ ನೆರವೇರಿತು. ಸಾವಿರಾರು ಭಕ್ತಾಧಿಗಳನ್ನು ಪೋಪ್ ಅವರನ್ನು ನೋಡಲು ಉತ್ಸುಕತೆಯಿಂದ ನೆರೆದಿದ್ದರು. ನೆರೆದಿದ್ದ ಜನಕ್ಕೆ ಸಭಾಂಗಣವು ಸಾಕಾಗದೇ ಹೋಯಿತು.
"ಯೇಸುಕ್ರಿಸ್ತರಿಗೆ ಸಮಯದ ಕುರಿತು ಗೊತ್ತಿದೆ. ಆದರೆ, ಕಾಲಕ್ಕೆ ಅವರು ತಲೆಬಾಗುವುದಿಲ್ಲ. ಬದಲಿಗೆ ಅದನ್ನು ತಮ್ಮ ಕಾರ್ಯಗಳಿಗೆ ಉಪಯೋಗಿಸಿಕೊಳ್ಳುತ್ತಾರೆ. ಅವರು ಎಲ್ಲರದರ ಹೊರತಾಗಿಯೂ ನಮ್ಮನ್ನು ಪ್ರೀತಿಸುವುದನ್ನು ಮುಂದುವರೆಸುತ್ತಾರೆ" ಎಂದು ಪೋಪ್ ಹೇಳಿದ್ದಾರೆ.
ನಾವು ಕ್ಷಮಿಸುವ ಗುಣಕ್ಕಾಗಿ ಹಾಗೂ ವರದಾನಕ್ಕಾಗಿ ಪ್ರಾರ್ಥಿಸಬೇಕು. ಆಗ ಮಾತ್ರ ನಾವು ಭರವಸೆಯ ಯಾತ್ರಿಕರಾಗುತ್ತೇವೆ ಎಂದು ಅವರು ಹೇಳಿದರು. ಯೇಸುವಿನ ಪ್ರೀತಿಯ ಎಂಬುದು ಎಂತಹ ಕರಾಳ ಸಂದರ್ಭದಲ್ಲಿಯೂ ಸಹ ಪ್ರೀತಿಸುವುದನ್ನು ನಮಗೆ ಕಲಿಸುತ್ತದೆ ಎಂದು ಅವರು ಹೇಳಿದರು.
ಯೇಸುವೇ ನಮ್ಮ ರಕ್ಷಣೆಯ ಹಾಗೂ ಉದ್ಧಾರದ ಹಾದಿಯಾಗಿದ್ದಾರೆ ಎಂದು ಹೇಳುವ ಮೂಲಕ ಅವರು ತಮ್ಮ ಮಾತುಗಳನ್ನು ಮುಗಿಸಿದರು.