MAP

ಆಗಸ್ಟ್ 14: ಉಪವಾಸ ಮತ್ತು ಪ್ರಾರ್ಥನೆಯ ದಿನ

ಅಂತರಾಷ್ಟ್ರೀಯ ಸುಪೀರಿಯರ್ ಜನರಲ್'ಗಳ ಯೂನಿಯನ್ ಆಗಸ್ಟ್ 14 ರಂದು ಅಂದರೆ ಸ್ವರ್ಗಸ್ವೀಕೃತ ಮಾತೆಯ ಹಬ್ಬದ ಹಿಂದಿನ ದಿನದಂದು ವಿಶ್ವದಾದ್ಯಂತ ಉಪವಾಸ ಹಾಗೂ ಪ್ರಾರ್ಥನೆಯ ದಿನವನ್ನಾಗಿ ಆಚರಿಸಲು ಕರೆ ನೀಡಿದೆ.

ವರದಿ: ವ್ಯಾಟಿಕನ್ ನ್ಯೂಸ್

ಅಂತರಾಷ್ಟ್ರೀಯ ಸುಪೀರಿಯರ್ ಜನರಲ್'ಗಳ ಯೂನಿಯನ್ ಆಗಸ್ಟ್ 14 ರಂದು ಅಂದರೆ ಸ್ವರ್ಗಸ್ವೀಕೃತ ಮಾತೆಯ ಹಬ್ಬದ ಹಿಂದಿನ ದಿನದಂದು ವಿಶ್ವದಾದ್ಯಂತ ಉಪವಾಸ ಹಾಗೂ ಪ್ರಾರ್ಥನೆಯ ದಿನವನ್ನಾಗಿ ಆಚರಿಸಲು ಕರೆ ನೀಡಿದೆ.

ಗಾಜಾದಿಂದ ಸುಡಾನ್‌ವರೆಗೆ, ಉಕ್ರೇನ್‌ನಿಂದ ಮ್ಯಾನ್ಮಾರ್‌ವರೆಗೆ, ಹೈಟಿಯಿಂದ ಡಿಆರ್‌ಸಿವರೆಗೆ, ಸಿರಿಯಾದವರೆಗೆ - ಯುದ್ಧವು ಪ್ರಪಂಚದಾದ್ಯಂತ ಹಲವಾರು ಜನರನ್ನು ಬಾಧಿಸುತ್ತಿರುವಾಗ, ಅಂತರಾಷ್ಟ್ರೀಯ ಸುಪೀರಿಯರ್ ಜನರಲ್'ಗಳ ಯೂನಿಯನ್ ಆಗಸ್ಟ್ 14 ರಂದು ಅಂದರೆ ಸ್ವರ್ಗಸ್ವೀಕೃತ ಮಾತೆಯ ಹಬ್ಬದ ಹಿಂದಿನ ದಿನದಂದು ವಿಶ್ವದಾದ್ಯಂತ ಉಪವಾಸ ಹಾಗೂ ಪ್ರಾರ್ಥನೆಯ ದಿನವನ್ನಾಗಿ ಆಚರಿಸಲು ಕರೆ ನೀಡಿದೆ.

"ಪ್ರಪಂಚದ ಅಂಚಿನಲ್ಲಿರುವ ಮತ್ತು ಮಾನವೀಯತೆಯ ದುಃಖದಲ್ಲಿ ಮುಳುಗಿರುವ ಶಾಂತಿಯ ಮಹಿಳೆಯರಾಗಿ ನಮ್ಮ ಧ್ವನಿಯನ್ನು ಎತ್ತುವ, ನಮ್ಮ ಹೃದಯಗಳನ್ನು ಒಂದುಗೂಡಿಸುವ, ಪ್ರಾರ್ಥಿಸುವ ಮತ್ತು ಕ್ರಮ ತೆಗೆದುಕೊಳ್ಳುವ ತುರ್ತು ಅಗತ್ಯವನ್ನು ನಾವು ಅನುಭವಿಸುತ್ತೇವೆ." ಎಂದು ಭಗಿನಿಯರು ಹೇಳಿದ್ದಾರೆ.

ಯುದ್ಧ, ಸ್ಥಳಾಂತರ ಮತ್ತು ಅನ್ಯಾಯದಿಂದ ಉಂಟಾಗುವ ಜಾಗತಿಕ ದುಃಖಗಳಿಗೆ ಪ್ರಾರ್ಥನೆ ಮತ್ತು ಒಗ್ಗಟ್ಟು ಪ್ರಬಲ ಪ್ರತಿಕ್ರಿಯೆಗಳಾಗಿವೆ ಎಂಬ ದೃಢನಿಶ್ಚಯದಿಂದ ಬೇರೂರಿರುವ ಹೇಳಿಕೆಯಲ್ಲಿ, ಧಾರ್ಮಿಕ ಸಮುದಾಯಗಳು ಮತ್ತು ಎಲ್ಲಾ ಸದ್ಭಾವನೆಯ ಜನರನ್ನು ಇದರಲ್ಲಿ ಸೇರಲು ಆಹ್ವಾನಿಸಲಾಗಿದೆ.

ಈ ದಿನವನ್ನು ಪ್ರಾರ್ಥನೆ ಹಾಗೂ ಉಪವಾಸದ ಮೂಲಕ ಆಚರಿಸುವಂತೆ ಈ ಸಂಸ್ಥೆಯು ಎಲ್ಲರಿಗೂ ಕರೆ ನೀಡಿದೆ.

07 ಆಗಸ್ಟ್ 2025, 11:01