ಯುವಜನತೆಯ ಬಲಿಪೂಜೆಯಲ್ಲಿ ಪೋಪ್: ಪ್ರಭು ನಿಧಾನವಾಗಿ ನಿಮ್ಮ ಆತ್ಮದ ಕಿಟಕಿಯ ಬಾಗಿಲುಗಳನ್ನು ತಟ್ಟುತ್ತಿದ್ದಾರೆ
ವರದಿ: ವ್ಯಾಟಿಕನ್ ನ್ಯೂಸ್
ಯುವ ಜನತೆಯ ಜ್ಯೂಬಿಲಿಯ ಅಂಗವಾಗಿ ಇಂದು ಪೋಪ್ ಹದಿನಾಲ್ಕನೇ ಲಿಯೋ ಅವರು ಇಂದು ಬಲಿಪೂಜೆಯನ್ನು ಅರ್ಪಿಸಿದ್ದಾರೆ. ಈ ವೇಳೆ ಬಲಿಪೂಜೆಯಲ್ಲಿ ಮಾತನಾಡಿರುವ ಅವರು ಯುವಕರನ್ನು ಉದ್ದೇಶಿಸಿ ಕ್ರಿಸ್ತರೇ ನಮ್ಮ ಭರವಸೆ ಎಂದು ಹೇಳುತ್ತಾ, ಯುದ್ಧಗ್ರಸ್ಥ ಜಗತ್ತಿನಲ್ಲಿ ನಾವು ಅವರನ್ನು ಹಿಂಬಾಲಿಸಬೇಕಿದೆ ಎಂದು ಹೇಳಿದರು.
"ನಾವು ಎಲ್ಲವನ್ನೂ ಲಘುವಾಗಿ ಮತ್ತು ಸ್ಥಿರವಾಗಿ ತೆಗೆದುಕೊಳ್ಳುವ ಜೀವನಕ್ಕಾಗಿ ಮಾಡಲ್ಪಟ್ಟಿಲ್ಲ, ಬದಲಿಗೆ ಪ್ರೀತಿಯಲ್ಲಿ ಸ್ವಯಂ ಉಡುಗೊರೆಯ ಮೂಲಕ ನಿರಂತರವಾಗಿ ನವೀಕರಿಸಲ್ಪಡುವ ಅಸ್ತಿತ್ವಕ್ಕಾಗಿ ಮಾಡಲ್ಪಟ್ಟಿದ್ದೇವೆ. ಈ ಜಗತ್ತಿನಲ್ಲಿ ಯಾವುದೇ ಪಾನೀಯವು ಪೂರೈಸಲಾಗದ ಆಳವಾದ ಮತ್ತು ಸುಡುವ ಬಾಯಾರಿಕೆಯನ್ನು ನಾವು ಅನುಭವಿಸುತ್ತೇವೆ" ಎಂದು ಪೋಪ್ ಹದಿನಾಲ್ಕನೇ ಲಿಯೋ ಅವರು ಹೇಳಿದರು.
"ಆದುದರಿಂದ ಉಚಿತವಾಗಿ ದೊರಕುವ ವಸ್ತುಗಳಿಂದ ನಮ್ಮ ಆತ್ಮವನ್ನು ತೃಪ್ತಿಪಡಿಸಲು ನಾವು ಯತ್ನಿಸಬಾರದು" ಎಂದು ಪೋಪ್ ಹೇಳುತ್ತಾರೆ.
"ವಿಶೇಷವಾಗಿ ಚಿಕ್ಕ ವಯಸ್ಸಿನಲ್ಲಿ ನಿಮ್ಮ ಹೃದಯಗಳನ್ನು ವಿಶಾಲವಾಗಿ ತೆರೆಯುವುದು, ಪ್ರಭುವಿಗೆ ಪ್ರವೇಶಿಸಲು ಅವಕಾಶ ನೀಡುವುದು ಮತ್ತುಆತನೊಂದಿಗೆ ಶಾಶ್ವತತೆಯ ಕಡೆಗೆ ಈ ಸಾಹಸವನ್ನು ಪ್ರಾರಂಭಿಸುವುದು ನಿಜವಾಗಿಯೂ ಸುಂದರವಾಗಿದೆ" ಎಂದು ಪವಿತ್ರ ತಂದೆ ಲಿಯೋ ಹೇಳಿದರು.
ಯುವಜನತೆ ಸಂತ ಅಗಸ್ಟೀನರಂತೆ ಪ್ರಭುವನ್ನು ತಮ್ನ ಆತ್ಮಗಳಲ್ಲಿ ಹುಡುಕಬೇಕು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ, ಯುವಜನರು ಅನೇಕ ಸುಂದರ ಅನುಭವಗಳನ್ನು ಹೊಂದಿದ್ದಾರೆಂದು ಪೋಪ್ ಲಿಯೋ ನೆನಪಿಸಿಕೊಂಡರು, ಇದೆಲ್ಲದರ ಮೂಲಕ ನೀವು "ಒಂದು ಪ್ರಮುಖ ಅಂಶವನ್ನು ಗ್ರಹಿಸಬಹುದು", ಅಂದರೆ ನಮ್ಮ ಅಸ್ತಿತ್ವದ ಪೂರ್ಣತೆಯು ನಾವು ಏನನ್ನು ಸಂಗ್ರಹಿಸುತ್ತೇವೆ ಅಥವಾ ನಾವು ಸುವಾರ್ತೆಯಲ್ಲಿ ಕೇಳಿದಂತೆ, ನಾವು ಏನನ್ನು ಹೊಂದಿದ್ದೇವೆ ಎಂಬುದರ ಮೇಲೆ ಅವಲಂಬಿತವಾಗಿಲ್ಲ ಎಂದು ಹೇಳಿದರು.
ಬದಲಾಗಿ, ಪೂರ್ಣತೆ ಎಂದರೆ ನಾವು ಸಂತೋಷದಿಂದ ಸ್ವಾಗತಿಸುವ ಮತ್ತು ಹಂಚಿಕೊಳ್ಳುವ ವಿಷಯಗಳಿಗೆ ಸಂಬಂಧಿಸಿದೆ ಎಂದು ಅವರು ನೆನಪಿಸಿದರು. "ಖರೀದಿಸುವುದು, ಸಂಗ್ರಹಿಸುವುದು ಮತ್ತು ಸೇವಿಸುವುದು ಸಾಕಾಗುವುದಿಲ್ಲ. ನಾವು ನಮ್ಮ ಕಣ್ಣುಗಳನ್ನು ಮೇಲಕ್ಕೆತ್ತಬೇಕು, ಮೇಲಿರುವ ವಸ್ತುಗಳ ಕಡೆಗೆ ನೋಡಬೇಕು..." ಎಂದು ಹೇಳಿದ ಅವರು ಯೇಸುಕ್ರಿಸ್ತರೇ ನಮ್ಮ ಭರವಸೆಯಾಗಿದ್ದಾರೆ ಎಂದು ಹೇಳಿದರು.