ಶಾಂತಿ ನಿಮ್ಮೆಲ್ಲರೊಡನೆ ಇರಲಿ: ವಿಶ್ವ ಶಾಂತಿ ದಿನಕ್ಕೆ ಪೋಪ್ ಅವರ ಶೀರ್ಷಿಕೆ
ವರದಿ: ವ್ಯಾಟಿಕನ್ ನ್ಯೂಸ್
2026 ರ ವಿಶ್ವ ಶಾಂತಿ ದಿನಕ್ಕೆ ಪೋಪ್ ಲಿಯೋ XIV ಅವರು ಶೀರ್ಷಿಕೆಯನ್ನು ಬಿಡುಗಡೆ ಮಾಡಿದ್ದು, "ಶಾಂತಿ ನಿಮ್ಮೆಲ್ಲರೊಡನೆ ಇರಲಿ:ನಿಶಸ್ತ್ರ ಹಾಗೂ ಸಶಸ್ತ್ರವಲ್ಲದ ಶಾಂತಿಯೆಡೆಗೆ" ಎಂಬುದೇ ಶೀರ್ಷಿಕೆಯ ಹೆಸರಾಗಿದೆ. ಇದೇ ವೇಳೆ ವ್ಯಾಟಿಕನ್ ಪಬ್ಲಿಷಿಂಗ್ ಹೌಸ್ "ಲೆಟ್ ದೇರ್ ಬಿ ಪೀಸ್" (ಶಾಂತಿಯಿರಲಿ) ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಲಿದೆ.
"ಶಾಂತಿ ನಿಮ್ಮೆಲ್ಲರೊಡನೆ ಇರಲಿ:ನಿಶಸ್ತ್ರ ಹಾಗೂ ಸಶಸ್ತ್ರವಲ್ಲದ ಶಾಂತಿಯೆಡೆಗೆ" ಎಂಬುದು ವಿಶ್ವ ಶಾಂತಿ ದಿನದ ಶೀರ್ಷಿಕೆಯಾಗಿದ್ದು, ಅದನ್ನು ಜನವರಿ 1, 2026 ರಂದು ದೇವರ ತಾಯಿ ಮಾತೆ ಮರಿಯಮ್ಮನವರ ಹಬ್ಬದಂದು ಆಚರಿಸಲಾಗುತ್ತದೆ.
"ಹಿಂಸೆ ಮತ್ತು ಯುದ್ಧದ ತರ್ಕವನ್ನು ತಿರಸ್ಕರಿಸಲು ಮತ್ತು ಪ್ರೀತಿ ಮತ್ತು ನ್ಯಾಯವನ್ನು ಆಧರಿಸಿದ ನಿಜವಾದ ಶಾಂತಿಯನ್ನು ಅಳವಡಿಸಿಕೊಳ್ಳಲು ಮಾನವೀಯತೆಯನ್ನು ಆಹ್ವಾನಿಸುತ್ತದೆ" ಎಂದು ಪತ್ರಿಕಾ ಪ್ರಕಟಣೆಯು ತಿಳಿಸಿದೆ.
"ಈ ಶಾಂತಿ ನಿರಾಯುಧವಾಗಿರಬೇಕು, ಅಂದರೆ ಭಯ, ಬೆದರಿಕೆಗಳು ಅಥವಾ ಆಯುಧಗಳನ್ನು ಆಧರಿಸಿರಬಾರದು" ಎಂದು ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
"ಶಾಂತಿಗಾಗಿ ಕರೆ ನೀಡುವುದು ಸಾಕಾಗುವುದಿಲ್ಲ. ನಾವು ಅದನ್ನು ಜೀವನ ವಿಧಾನದಲ್ಲಿ ಸಾಕಾರಗೊಳಿಸಬೇಕು, ಅದು ಗೋಚರಿಸಲಿ ಅಥವಾ ವ್ಯವಸ್ಥಿತವಾಗಿರಲಿ, ಪ್ರತಿಯೊಂದು ರೀತಿಯ ಹಿಂಸೆಯನ್ನು ತಿರಸ್ಕರಿಸಬೇಕು." ಎಂದು ಅದು ಹೇಳಿದೆ
ಇದೇ ವೇಳೆ ಪೋಪ್ ಅವರ ಮೊದಲ ಭಾಷಣಗಳ ಪುಸ್ತಕವನ್ನು ಬಿಡುಗಡೆ ಮಾಡಲಾಗುತ್ತದೆ.