MAP

ಸೆಪ್ಟೆಂಬರ್ 1 ರಂದು ಆಗಸ್ಟೀನಿಯನ್ ಸಭೆಯ ಸಮ್ಮೇಳನವನ್ನು ಉದ್ಘಾಟಿಸಲಿರುವ ಪೋಪ್ ಲಿಯೋ XIV

ಸಂತ ಆಗಸ್ಟೀನಿಯನ್ ಧಾರ್ಮಿಕ ಸಭೆಯ ಮಹಾಸಮ್ಮೇಳನದ ಉದ್ಘಾಟನಾ ಬಲಿಪೂಜೆಯನ್ನು ಪೋಪ್ ಲಿಯೋ XIV ಅವರು ಅರ್ಪಿಸಲಿದ್ದಾರೆ. ಸೆಪ್ಟೆಂಬರ್ 01, 2025 ರಂದು ಈ ಸಮ್ಮೇಳನವು ಆರಂಭವಾಗುತ್ತಿದ್ದು, ಇದೇ ಆಗಸ್ಟೀನಿಯನ್ ಧಾರ್ಮಿಕ ಸಭೆಗೆ ಪೋಪ್ ಲಿಯೋ ಅವರೂ ಸಹ ಸೇರಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಸಂತ ಆಗಸ್ಟೀನಿಯನ್ ಧಾರ್ಮಿಕ ಸಭೆಯ ಮಹಾಸಮ್ಮೇಳನದ ಉದ್ಘಾಟನಾ ಬಲಿಪೂಜೆಯನ್ನು ಪೋಪ್ ಲಿಯೋ XIV ಅವರು ಅರ್ಪಿಸಲಿದ್ದಾರೆ. ಸೆಪ್ಟೆಂಬರ್ 01, 2025 ರಂದು ಈ ಸಮ್ಮೇಳನವು ಆರಂಭವಾಗುತ್ತಿದ್ದು, ಇದೇ ಆಗಸ್ಟೀನಿಯನ್ ಧಾರ್ಮಿಕ ಸಭೆಗೆ ಪೋಪ್ ಲಿಯೋ ಅವರೂ ಸಹ ಸೇರಿದ್ದಾರೆ.

ಇದು ಅಗಸ್ಟೀನಿಯನ್ ಸಭೆಯ 188ನೇ ಜನರಲ್ ಚಾಪ್ಟರ್ ಅಥವಾ ಮಹಾಸಮ್ಮೇಳನವಾಗಿದ್ದು, ಇದೇ ದಿನ ಪೋಪ್ ಲಿಯೋ ಅವರು ನೊವಿಶಿಯೇಟ್'ಗೆ ದಾಖಲಾದ ವಾರ್ಷಿಕೋತ್ಸವವಾಗಿದೆ. ಸೆಪ್ಟೆಂಬರ್ 18 ರವರೆಗೆ ಈ ಮಹಾಸಮ್ಮೇಳನವು ರೋಮ್ ನಗರದ ಅಗಸ್ಟೀನಿಯನ್ ಇನ್ಸ್ಟಿಟ್ಯೂಟ್'ನಲ್ಲಿ ನಡೆಯಲಿದೆ.

ಈ ಬಲಿಪೂಜೆ ಆಚರಣೆಯನ್ನು ವ್ಯಾಟಿಕನ್ ಮಾಧ್ಯಮ, ಫೇಸ್ಬುಕ್, ಇನ್ಸ್ಟಗ್ರಾಂ, ಯೂಟ್ಯೂಬ್ ಸೇರಿದಂತೆ ಎಲ್ಲಾ ಮಾಧ್ಯಮಗಳಲ್ಲಿ ನೇರಪ್ರಸಾರವನ್ನು ಮಾಡಲಾಗುವುದು. ಪ್ರತಿ ಆರು ವರ್ಷಗಳಿಗೊಮ್ಮೆ ನಡೆಯುವ ಈ ಸಮ್ಮೇಳನವು ವಿಶ್ವದಾದ್ಯಂತ ಸುಮಾರು 100 ಅಗಸ್ಟೀನಿಯನ್ನರು ಇದರಲ್ಲಿ ಭಾಗವಹಿಸುತ್ತಾರೆ. ವಿಶ್ವದ ಸುಮಾರು 46 ದೇಶಗಳಿಂದ ಬರುವ ಸುಮಾರು 73 ಜನರು ಈ ಮಹಾಸಮ್ಮೇಳನದಲ್ಲಿ ಮತದಾನದ ಹಕ್ಕನ್ನು ಹೊಂದಿರುತ್ತಾರೆ. 

ಈ ಸಮ್ಮೇಳನದಲ್ಲಿ ಅಗಸ್ಟೀನ್ ಸಭೆಯ 98ನೇ ಪ್ರಯರ್ ಜನರಲ್ (ಮುಖ್ಯಾಧಿಕಾರಿ) ಯನ್ನು ಮತದಾನದ ಮೂಲಕ ಆರಿಸಲಾಗುತ್ತದೆ.

31 ಆಗಸ್ಟ್ 2025, 13:05