MAP

2025.08.03 Plenaria SECAM Kigali (Ruanda) 2025

ಪೋಪ್ ಲಿಯೋ: ದೇವರ ಪ್ರೀತಿಯ ಅನುಭವವನ್ನು ಉತ್ತೇಜಿಸುವ ಕಾರ್ಯಗಳನ್ನು ಮುಂದುವರೆಸಿರಿ

ಆಫ್ರಿಕಾ ಹಾಗೂ ಮಡಗಾಸ್ಕರ್ ಧರ್ಮಾಧ್ಯಕ್ಷೀಯ ಮಂಡಳಿಗಳು ಸಮಾಲೋಚನೆ ಹಾಗೂ ಸಾರ್ವತ್ರಿಕ ಸಭೆಗಳನ್ನು ಹಮ್ಮಿಕೊಂಡಿರುವ ಹಿನ್ನೆಲೆ, ಪೋಪ್ ಲಿಯೋ ಅವರು ಈ ಸಭೆಗಳಿಗೆ ಟೆಲಿಗ್ರಾಂ ಸಂದೇಶವನ್ನು ಕಳುಹಿಸಿದ್ದು ದೇವರ ಪ್ರೀತಿಯ ಅನುಭವವನ್ನು ಉತ್ತೇಜಿಸುವ ಕಾರ್ಯಗಳನ್ನು ಮುಂದುವರೆಸಿರಿ ಎಂದು ಹೇಳಿದ್ದಾರೆ. "ಕ್ರಿಸ್ತರು ಭರವಸೆ, ಸಂಧಾನ ಹಾಗೂ ಶಾಂತಿಯ ಮೂಲವಾಗಿದ್ದಾರೆ' ಎಂಬುದನ್ನು ನಾವೆಲ್ಲರೂ ಮರೆಯಬಾರದು ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

"ಸ್ಥಳೀಯ ಧರ್ಮಸಭೆಗಳು ಇಲ್ಲಿನ ಜನತೆಗೆ ಭರವಸೆಯ ಕೇಂದ್ರಗಳಾಗಿ ಪರಿಣಮಿಸುತ್ತವೆ" ಎಂಬ ನಂಬಿಕೆ ಇದೆ ಎಂದು ಪೋಪ್ ಲಿಯೋ ಅವರು ಹೇಳಿದರು.

ಆಫ್ರಿಕಾ ಹಾಗೂ ಮಡಗಾಸ್ಕರ್ ಧರ್ಮಾಧ್ಯಕ್ಷೀಯ ಮಂಡಳಿಗಳು 20ನೇ ಸಾರ್ವತ್ರಿಕ ಸಭೆಯನ್ನು ಹಮ್ಮಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅವರು ಕಿನ್ಷಾಸ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಕಾರ್ಡಿನಲ್ ಫ್ರಿಡೋಲಿನ್ ಅಂಬೊಂಘೋ ಬೆಸುಂಗು ಅವರಿಗೆ ಟೆಲಿಗ್ರಾಂ ಸಂದೇಶವನ್ನು ಕಳುಹಿಸಿ, ತಮ್ಮ ಮಾತುಗಳನ್ನು ಅಲ್ಲಿ ಉಲ್ಲೇಖಿಸಿದರು. ಪೋಪರ ಈ ಸಂದೇಶಕ್ಕೆ ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೋ ಪರೋಲಿನ್ ಅವರು ಸಹಿಯನ್ನು ಹಾಕಿದ್ದಾರೆ.

"ಕ್ರಿಸ್ತರು ಭರವಸೆ, ಸಂಧಾನ ಹಾಗೂ ಶಾಂತಿಯ ಮೂಲವಾಗಿದ್ದಾರೆ' ಎಂಬುದನ್ನು ನಾವೆಲ್ಲರೂ ಮರೆಯಬಾರದು ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.

ಅಂತಿಮವಾಗಿ ಈ ಸಭೆಯನ್ನು ಹಾಗೂ ಆಫ್ರಿಕಾ ಧರ್ಮಸಭೆಯನ್ನು ಮಾತೆ ಮರಿಯಮ್ಮನವರ ಮಧ್ಯಸ್ಥಿಕೆಗೆ ವಹಿಸಿ ಪ್ರಾರ್ಥಿಸಲಾಗುವುದು ಎಂದು ಪೋಪ್ ಲಿಯೋ ಸಂದೇಶದಲ್ಲಿ ಹೇಳಿದ್ದಾರೆ.

03 ಆಗಸ್ಟ್ 2025, 16:56