ಸಾರ್ವಜನಿಕ ಭೇಟಿಯಲ್ಲಿ ಪೋಪ್: ಕ್ರೈಸ್ತ ಪ್ರೀತಿ ದೂರ ನಿಲುಕದ್ದಲ್ಲ, ಬದಲಿಗೆ ನಿರ್ಧರಿಸುವಂಥದ್ದು
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಲಿಯೋ ಅವರು ಇಂದಿನ ತಮ್ಮ ವಾರದ ಸಾರ್ವಜನಿಕ ಭೇಟಿಯಲ್ಲಿ ಭಾಗವಹಿಸಿ ಭಕ್ತಾಧಿಗಳನ್ನುದ್ದೇಶಿಸಿ ಮಾತನಾಡಿದ್ದಾರೆ. ಹೀಗೆ ಮಾತನಾಡಿರುವ ಅವರು ಇಂದಿನ ಶುಭಸಂದೇಶದಲ್ಲಿ ಯೇಸು ಕ್ರಿಸ್ತರನ್ನು ಜೆತ್ಸೆಮನಿ ತೋಟದಲ್ಲಿ ಬಂಧಿಸುವ ಕುರಿತಾಗಿ ಚಿಂತನೆಯನ್ನು ವ್ಯಕ್ತಪಡಿಸಿದ್ದು, ಭಯ, ಅನ್ಯಾಯ ಹಾಗೂ ನಿರಾಶೆಯ ಕುರಿತು ಮಾತನಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿರುವ ಅವರು ಸಂತ ಯೊವ್ವಾನರು ಈ ಸಂದರ್ಭದಲ್ಲಿ ಯೇಸುಕ್ರಿಸ್ತರನ್ನು ಭಯಬಿದ್ದಿರುವ ಅಥವಾ ಅಲ್ಲಿಂದ ಪಲಾಯನ ಮಾಡಲು ಸಿದ್ಧವಾಗಿರುವ ವ್ಯಕ್ತಿಯಂತೆ ಬಿಂಬಿಸುವುದಿಲ್ಲ; ಬದಲಿಗೆ ಕ್ರಿಸ್ತರು ಸ್ವತಂತ್ರ ವ್ಯಕ್ತಿಯಾಗಿ, ಅವರೇ ಸಂವಾದಿಸಲು ಮುಂದೆ ಬರುತ್ತಾರೆ" ಎಂದು ಹೇಳಿದರು.
ರಾತ್ರಿಯ ಕತ್ತಲೆಯಲ್ಲಿ, ಎಲ್ಲವೂ ಕುಸಿಯುತ್ತಿರುವಂತೆ ತೋರುತ್ತಿರುವಾಗ, ಕ್ರೈಸ್ತ ಭರವಸೆ ತಪ್ಪಿಸಿಕೊಳ್ಳುವಿಕೆ ಅಲ್ಲ, ನಿರ್ಧಾರ ಎಂದು ಯೇಸು ತೋರಿಸುತ್ತಾರೆ. ಈ ಮನೋಭಾವವು ಜೀವನದಲ್ಲಿನ ಆಳವಾದ ಪ್ರಾರ್ಥನೆಯಿಂದ ಬಂದಿದೆ ಎಂದು ಪೋಪ್ ಒತ್ತಿಹೇಳುತ್ತಾರೆ.
ಆದಾಗ್ಯೂ, ಶಿಲುಬೆಗೆ ಹೋಗುವ ತನ್ನ ಹಾದಿಯನ್ನು ಪ್ರಾರಂಭಿಸಿದ ಆ ಕ್ಷಣದಲ್ಲಿ ಯೇಸು ತೊಂದರೆಗೊಳಗಾಗಲಿಲ್ಲ ಎಂದು ಇದರ ಅರ್ಥವಲ್ಲ. ಆದರೆ ಪ್ರೀತಿಯಿಂದ ತನ್ನ ಜೀವವನ್ನು ಅರ್ಪಿಸುತ್ತಿದ್ದೇನೆಂದು ಅವರಿಗೆ ತಿಳಿದಿದ್ದರಿಂದ ಅವರು ಮುಂದುವರಿಯಲು ಸಾಧ್ಯವಾಯಿತು ಎಂದು ಪೋಪ್ ಲಿಯೋ ಅವರು ಹೇಳುತ್ತಾರೆ.
ತಮ್ಮ ಜೀವಿತದ ಈ ಘಳಿಗೆಗೆ ಯೇಸು ಮೊದಲಿನಿಂದಲೂ ಸಿದ್ಧತೆಯನ್ನು ಮಾಡಿಕೊಂಡಿದ್ದರು ಎಂದು ಅವರು ಹೇಳುತ್ತಾರೆ.