MAP

ಜಡ್ಜ್ ಅಬ್ದೆಲ್ಸಲಾಂ ಅವರನ್ನು ಬರಮಾಡಿಕೊಂಡ ಪೋಪ್ ಲಿಯೋ

ಮಾನವ ಭ್ರಾತೃತ್ವಕ್ಕಾಗಿ ಜಾಯೆದ್ ಪ್ರಶಸ್ತಿ ಹಾಗೂ ಮುಸ್ಲಿಂ ಹಿರಿಯರ ಮಂಡಳಿಯ ಪ್ರಧಾನ ಕಾರ್ಯದರ್ಶಿ ನ್ಯಾಯಾಧೀಶ ಮೊಹಮ್ಮದ್ ಅಬ್ದೆಲ್ಸಲಾಮ್ ಅವರನ್ನು ಪೋಪ್ ಲಿಯೋ ಅವರು ವ್ಯಾಟಿಕನ್ನಿಗೆ ಬರಮಾಡಿಕೊಂಡಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಮಾನವ ಭ್ರಾತೃತ್ವಕ್ಕಾಗಿ ಜಾಯೆದ್ ಪ್ರಶಸ್ತಿ ಹಾಗೂ ಮುಸ್ಲಿಂ ಹಿರಿಯರ ಮಂಡಳಿಯ ಪ್ರಧಾನ ಕಾರ್ಯದರ್ಶಿ ನ್ಯಾಯಾಧೀಶ ಮೊಹಮ್ಮದ್ ಅಬ್ದೆಲ್ಸಲಾಮ್ ಅವರನ್ನು ಪೋಪ್ ಲಿಯೋ ಅವರು ವ್ಯಾಟಿಕನ್ನಿಗೆ ಬರಮಾಡಿಕೊಂಡಿದ್ದಾರೆ.

ಸೋಮವಾರ, ಪೋಪ್ ಲಿಯೋ XIV ಅವರು ನ್ಯಾಯಾಧೀಶ ಮೊಹಮ್ಮದ್ ಅಬ್ದೆಲ್ಸಲಾಮ್ ಅವರನ್ನು ವ್ಯಾಟಿಕನ್ ಪ್ರೇಷಿತ ಅರಮನೆಯಲ್ಲಿ ಖಾಸಗಿಯಾಗಿ ಭೇಟಿಯಾದರು.

ಸಭೆಯ ನಂತರ, ನ್ಯಾಯಾಧೀಶ ಅಬ್ದೆಲ್ಸಲಾಮ್, ಈ ಭೇಟಿ ಶಾಂತಿ ಮತ್ತು ಮಾನವ ಭ್ರಾತೃತ್ವವನ್ನು ಉತ್ತೇಜಿಸುವ ಒಂದು ಸಾಧನವಾಗಿ ಅಂತರ್-ಧರ್ಮೀಯ ಸಂವಾದದ ಮಹತ್ವವನ್ನು ಎತ್ತಿ ತೋರಿಸಿದೆ ಎಂದು ಹೇಳಿದರು.

ಸಂಘರ್ಷಗಳನ್ನು ಕೊನೆಗೊಳಿಸಲು ಮತ್ತು ಶಾಂತಿಯನ್ನು ಬೆಳೆಸುವಲ್ಲಿ ಧಾರ್ಮಿಕ ನಾಯಕರ ಪ್ರಯತ್ನಗಳನ್ನು ಬೆಳೆಸಲು ಈ ಸಭೆಯನ್ನು ಒಂದು ಅವಕಾಶ ಎಂದು ಅವರು ಬಣ್ಣಿಸಿದರು.

26 ಆಗಸ್ಟ್ 2025, 16:29