MAP

 a a  

ಪ್ಯಾನ್-ಆಫ್ರಿಕನ್ ಕಥೋಲಿಕ ಗುಂಪಿಗೆ ಪೋಪ್: ಭೂಮಿಯ ಮೇಲಿನ ಪಯಣದಲ್ಲಿ ಭರವಸೆ ಮುಖ್ಯವಾಗಿದೆ

ಪ್ಯಾನ್-ಆಫ್ರಿಕನ್ ಕ್ಯಾಥೋಲಿಕ ಥಿಯಾಲಜಿ ಪ್ಯಾಸ್ಟೋರಲ್ ನೆಟ್ವರ್ಕ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿರುವ ಪೋಪ್ ಹದಿನಾಲ್ಕನೇ ಲಿಯೋ, ಆಫ್ರಿಕಾ ಖಂಡದ ಭವಿಷ್ಯವನ್ನು ಭರವಸೆಯಿಂದ ನೋಡುವಂತೆ ಅವರಿಗೆ ಕರೆ ನೀಡಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪ್ಯಾನ್-ಆಫ್ರಿಕನ್ ಕ್ಯಾಥೋಲಿಕ ಥಿಯಾಲಜಿ ಪ್ಯಾಸ್ಟೋರಲ್ ನೆಟ್ವರ್ಕ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿರುವ ಪೋಪ್ ಹದಿನಾಲ್ಕನೇ ಲಿಯೋ, ಆಫ್ರಿಕಾ ಖಂಡದ ಭವಿಷ್ಯವನ್ನು ಭರವಸೆಯಿಂದ ನೋಡುವಂತೆ ಅವರಿಗೆ ಕರೆ ನೀಡಿದ್ದಾರೆ.

ಎರಡನೇ ಮಹಾಧಿವೇಶನದ ಸಮಯದಲ್ಲಿ ನಂಬಿಕೆಯ ಮಹತ್ವದ ಕುರಿತು ಪೋಪ್ ಫ್ರಾನ್ಸಿಸ್ ಅವರ ಮಾತುಗಳನ್ನು ನೆನಪಿಸಿಕೊಂಡ ಪೋಪ್ ಲಿಯೋ, ಜುಬಿಲಿ ವರ್ಷದ ಬೆಳಕಿನಲ್ಲಿ ಮತ್ತೊಂದು ದೈವಶಾಸ್ತ್ರದ ಸದ್ಗುಣದತ್ತ ಗಮನ ಹರಿಸಿದರು: ಅದೇ ಭರವಸೆ. "ಬಹುಶಃ ಕೆಲವೊಮ್ಮೆ ನಂಬಿಕೆ ಮತ್ತು ದಾನದ ಸದ್ಗುಣಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ; ಆದರೂ, ನಮ್ಮ ಐಹಿಕ ತೀರ್ಥಯಾತ್ರೆಯಲ್ಲಿ ಭರವಸೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ" ಎಂದು ಅವರು ಒತ್ತಿ ಹೇಳಿದರು.

ಭರವಸೆ, ನಂಬಿಕೆ ಮತ್ತು ಪ್ರೀತಿ ಎಂಬ ಇತರ ಎರಡು ಸದ್ಗುಣಗಳನ್ನು ಸಂಪರ್ಕಿಸುತ್ತದೆ ಎಂದು ಪೋಪ್ ವಿವರಿಸಿದರು. ಭರವಸೆಯೇ ಸ್ವರ್ಗದಲ್ಲಿ ಸಂತೋಷವನ್ನು ಬಯಸುವಂತೆ ನಮ್ಮನ್ನು ಕರೆದೊಯ್ಯುವ ಸದ್ಗುಣವಾಗಿದೆ, ಇದು "ಜೀವನದ ಕಷ್ಟಗಳನ್ನು ಎದುರಿಸಿದಾಗಲೂ ದೇವರಿಗೆ ಹತ್ತಿರವಾಗಲು ನಮ್ಮನ್ನು ಪ್ರೇರೇಪಿಸುತ್ತದೆ ಮತ್ತು ಉಳಿಸಿಕೊಳ್ಳುತ್ತದೆ." ಎಂದು ಪೋಪ್ ಲಿಯೋ ಅವರು ಹೇಳಿದರು.

07 ಆಗಸ್ಟ್ 2025, 11:14