MAP

ಪೋಪ್ ಲಿಯೋ: ಗಾಝಾ, ಉಕ್ರೇನ್ ಸೇರಿದಂತೆ ಯುದ್ಧಪ್ರದೇಶಗಳ ಯುವಜನತೆಯ ಜೊತೆ ನಾವಿದ್ದೇವೆ

ಯುವಜನತೆಯ ಜ್ಯೂಬಿಲಿಯ ಬಲಿಪೂಜೆಯನ್ನು ಮುಕ್ತಾಯಗೊಳಿಸಿದ ನಂತರ ಮಾತನಾಡಿರುವ ಪೋಪ್ ಹದಿನಾಲ್ಕನೇ ಲಿಯೋ ಅವರು ಇಂದು ಯುವಜನತೆ ಇತರೆ ಮನುಷ್ಯರು ಮಾಡುವ ಅನೇಕ ತಪ್ಪುಗಳಿಂದ ಬಳಲಿ, ಯಾತನೆಯನ್ನ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಜಗತ್ತಿನಲ್ಲಿ ನಡೆಯುತ್ತಿರುವ ಎಲ್ಲಾ ಯುದ್ಧಗಳು ಯುವಜನರ ವಿರೋಧಿಯಾಗಿವೆ ಎಂದು ಅವರು ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ರೋಮ್ ನಗರಕ್ಕೆ ಯಾತ್ರಿಕರಾಗಿ ಆಗಮಿಸಿದ್ದ ಸಂದರ್ಭದಲ್ಲಿ ಅಚಾನಕ್ ಆರೋಗ್ಯ ಸಮಸ್ಯೆಗಳಿಂದ ಅಸುನೀಗಿದ ಮರಿಯ ಹಾಗು ಪಾಸ್ಕಲ್ ಎಂಬ ಇಬ್ಬರು ಯುವಜನತೆಯನ್ನು ಫೋಪ್ ಹದಿನಾಲ್ಕನೇ ಲಿಯೋ ಅವರು ನೆನಪಿಸಿಕೊಂಡು ಅವರಿಗಾಗಿ ಸಂತಾಪವನ್ನು ಸೂಚಿಸಿದರು.

ತ್ರಿಕಾಲ ಪ್ರಾರ್ಥನೆಗೂ ಮುಂಚಿತವಾಗಿ ವಿಶ್ವಗುರುಗಳು ಭಾನುವಾರ ಬಲಿ ಪೂಜೆಯಲ್ಲಿ ಭಾಗವಹಿಸಿದ್ದ ಸುಮಾರು 10 ಲಕ್ಷಕ್ಕೂ ಹೆಚ್ಚಿನ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ದೇವರು ನಮಗೆ ನೀಡಿರುವ ಈ ವಿಶೇಷ ಸಮಯಕ್ಕಾಗಿ ಧನ್ಯವಾದಗಳು ತಿಳಿಸುವಂತೆ ಜನತೆಗೆ ಕರೆ ನೀಡಿದರು. ಯುವ ಜನತೆಯ ಜೊತೆಗೆ ಬಂದಿದ್ದ ಸಾವಿರಾರು ಧರ್ಮಾಧ್ಯಕ್ಷರುಗಳು, ಗುರುಗಳು, ಧಾರ್ಮಿಕ ಸಹೋದರ ಸಹೋದರಿಯರನ್ನು ಉದ್ದೇಶಿಸಿ ವಿಶ್ವಗುರು ಲಿಯೋ ಅವರು ಮಾತನಾಡಿದರು ಹಾಗೂ ಆಧ್ಯಾತ್ಮಿಕ ಪ್ರಯಾಣದ ಕುರಿತು ತಮ್ಮ ಚಿಂತನೆಯನ್ನು ವ್ಯಕ್ತಪಡಿಸಿದ್ದಾರೆ..

ಮುಂದಿನ ವಿಶ್ವ ಯುವದಿನವನ್ನು ದಕ್ಷಿಣ ಕೊರಿಯಾ ದೇಶದ ಸಿಯೋಲ್ ನಗರದಲ್ಲಿ ಆಯೋಜಿಸಲಾಗಿದೆ ಎಂದು ಪೋಪ್ ಲಿಯೋ ಅವರು ಮಾಹಿತಿಯನ್ನು ನೀಡಿದರು.

03 ಆಗಸ್ಟ್ 2025, 15:54