ಯುವ ಜನತೆಗೆ ಪೋಪ್: ನಾವು ಯಾತ್ರಿಕರು; ನಾವೆಲ್ಲರೂ ಯಾತ್ರಿಕರಾಗಿರಲಿದ್ದೇವೆ
ವರದಿ: ವ್ಯಾಟಿಕನ್ ನ್ಯೂಸ್
ಉತ್ತರ ಯೂರೋಪ್'ನಿಂದ ಪೋಪ್ ಲಿಯೋ ಅವರು ಯುವ ಜನತೆ ಹಾಗೂ ಶಿಕ್ಷಕರನ್ನು ವ್ಯಾಟಿಕನ್ನಿಗೆ ಸ್ವಾಗತಿಸಿದ್ದು, ಅವರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಶನಿವಾರ ಪೋಪ್ ಲಿಯೋ ಅವರು ಡೆನ್ಮಾರ್ಕ್, ಐರ್ಲೆಂಡ್, ಇಂಗ್ಲೆಂಡ್ ಮತ್ತು ವೇಲ್ಸ್ ಮತ್ತು ಸ್ಕಾಟ್’ಲ್ಯಾಂಡ್ ದೇಶಗಳಿಂದ ಭಕ್ತಾಧಿಗಳನ್ನು ವ್ಯಾಟಿಕನ್ ನಗರಕ್ಕೆ ಬರಮಾಡಿಕೊಂಡರು. ಈ ಭಕ್ತಾಧಿಗಳಲ್ಲಿ ಹೆಚ್ಚಿನವರು ಯುವ ಜನತೆ ಹಾಗೂ ಶಿಕ್ಷಕರಾಗಿದ್ದರು. “ನೀವು ವಿವಿಧ ದೇಶಗಳಿಂದ ಬಂದಿರುವ ಲಕ್ಷಾಂತರ ಭಕ್ತಾಧಿಗಳು ಹಾಗೂ ಯಾತ್ರಿಕರ ಹೆಜ್ಜೆಗಳಲ್ಲಿ ಹೆಜ್ಜೆಗಳನ್ನು ಹಾಕುತ್ತಿದ್ದೀರಿ. ಅವರು ಶತಶತಮಾನಗಳಿಂದ ಇಲ್ಲಿಗೆ ಯಾತ್ರೆಯನ್ನು ಕೈಗೊಳ್ಳುತ್ತಿದ್ದರು” ಎಂದು ಪೋಪ್ ಲಿಯೋ ಅವರು ಹೇಳಿದರು.
ಯಾತ್ರಿಕರಾಗಿ ರೋಮ್ ನಗರಕ್ಕೆ ಆಗಮಿಸಿದ್ದ ಯುವ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಲಿಯೋ ಅವರು ಪ್ರತಿಯೊಬ್ಬರ ಬದುಕಿಗೂ ದೇವರು ಯೋಜನೆಯನ್ನು ಸಿದ್ಧಪಡಿಸಿದ್ಧಾರೆ. ದೇವರು ನಮ್ಮೆಲ್ಲರನ್ನು ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಹಾಗೂ ಸೇವಾಕಾರ್ಯಕ್ಕಾಗಿ ಸೃಷ್ಠಿಸಿದ್ದಾರೆ” ಎಂದು ಪೋಪ್ ಹದಿನಾಲ್ಕನೇ ಲಿಯೋ ಅವರು ಹೇಳಿದರು.
ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಲಿಯೋ ಅವರು "ನೀವು ಭವಿಷ್ಯದ ಪೀಳಿಗೆಯನ್ನು ರೂಪಿಸುವ ಕಾರ್ಯವನ್ನು ಮಾಡುತ್ತಿದ್ದೀರಿ" ಎಂದು ಹೇಳಿದರು. "ಮಕ್ಕಳು ಹಾಗೂ ಯುವ ಜನತೆ ವಿಶ್ವಾಸ ಸೇರಿದಂತೆ ಅನೇಕ ಅಂಶಗಳಲ್ಲಿ ನಿಮ್ಮ ಮಾದರಿಯನ್ನು ಎದುರುನೋಡುತ್ತಾರೆ. ನೀವು ಅವರಿಗೆ ಮಾದರಿಯಾಗಿ ಜೀವಿಸಬೇಕು" ಎಂದು ಪೋಪ್ ಲಿಯೋ ಅವರು ಶಿಕ್ಷಕರಿಗೆ ಕಿವಿಮಾತನ್ನು ಹೇಳಿದ್ದಾರೆ.
ಅಂತಿಮವಾಗಿ ಮಾತನಾಡಿದ ಅವರು "ಪವಿತ್ರ ಯಾತ್ರೆ ಎಂಬುದು ಇಲ್ಲಿಗೆ ಕೊನೆಗೊಳ್ಳುವುದಿಲ್ಲ; ಬದಲಿಗೆ ಪ್ರತಿದಿನ ನಾವು ಪ್ರಭುವಿನ ಪ್ರೇಷಿತತ್ವಕ್ಕೆ ಎದುರುನೋಡುವಲ್ಲಿ ಮುಂದುವರೆಯುತ್ತದೆ" ಎಂದು ಹೇಳಿದರು.