ಅಗಸ್ಟೀನ್ ಸಭೆಯ ಕನ್ಯಾಸ್ತ್ರೀಯರಿಗೆ ಪೋಪ್: ಸತ್ಯವಿಲ್ಲದ ಸಂಸ್ಕೃತಿ ಬಲಾಡ್ಯರ ಉಪಕರಣವಾಗುತ್ತದೆ
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಹದಿನಾಲ್ಕನೇ ಲಿಯೋ ಅವರು ಇಂದು ವ್ಯಾಟಿಕನ್ ನಗರದಲ್ಲಿ ಅಗಸ್ಟೀನಿಯನ್ ಸಿಸ್ಟರ್ಸ್ ಸರ್ವೆಂಟ್ಸ್ ಆಫ್ ಜೀಸಸ್ ಆ್ಯಂಡ್ ಮೇರಿ ಧಾರ್ಮಿಕ ಸಭೆಯ ಕನ್ಯಾಸ್ತ್ರೀಯರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಸಂಕಷ್ಟಗಳ ಸಂದರ್ಭದಲ್ಲಿ ತಾಳ್ಮೆಯಿಂದಿರುವಂತೆ, ತಮ್ಮ ಶೈಕ್ಷಣಿಕ ಸೇವಾಕಾರ್ಯದಲ್ಲಿ ಧೈರ್ಯದಿಂದಿರುವಂತೆ ಹಾಗೂ ಕ್ರಿಸ್ತರನ್ನು ಹಿಂಬಾಲಿಸುವಲ್ಲಿ ಸದಾ ಪರಿಶ್ರಮಿಸುವಂತೆ ಕರೆ ನೀಡಿದ್ದಾರೆ.
"ಸತ್ಯವಿಲ್ಲದ ಸಂಸ್ಕೃತಿಯು ಬಲಾಡ್ಯರ ಕೈಯಲ್ಲಿ ಉಪಕರಣವಾಗುತ್ತದೆ" ಎಂದು ಹೇಳುವ ಮೂಲಕ ಪೋಪ್ ಹದಿನಾಲ್ಕನೇ ಲಿಯೋ ಅವರು ಶನಿವಾರ ಬೆಳಿಗ್ಗೆ ಅಗಸ್ಟೀನಿಯನ್ ಸಿಸ್ಟರ್ಸ್ ಸರ್ವೆಂಟ್ಸ್ ಆಫ್ ಜೀಸಸ್ ಆ್ಯಂಡ್ ಮೇರಿ ಧಾರ್ಮಿಕ ಸಭೆಯ ಕನ್ಯಾಸ್ತ್ರೀಯರನ್ನು ವ್ಯಾಟಿಕನ್ ನಗರಕ್ಕೆ ಬರಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ತಾಳ್ಮೆಯಿಂದ ವಿಶ್ವಾಸದಲ್ಲಿ ಸದಾ ಮುಂದುವರೆಯುವಂತೆ ಹೇಳಿದ್ದಾರೆ.
"ಮಾರ್ಗ, ಸತ್ಯ, ಜೀವ ಹಾಗೂ ಬೆಳಕಾದ ಕ್ರಿಸ್ತರನ್ನು ಹಿಂಬಾಲಿಸುವಲ್ಲಿ ನೀವು ಸದಾ ಪರಿಶ್ರಮಿಸುತ್ತಿರಬೇಕು" ಎಂದು ಕನ್ಯಾಸ್ತ್ರೀಯರಿಗೆ ಹೇಳಿರುವ ಪೋಪ್ ಹದಿನಾಲ್ಕನೇ ಲಿಯೋ ಅವರು ಅದೇ ನಮ್ಮ ಧಾರ್ಮಿಕ ಬದುಕಿನ ಸಂಸ್ಕೃತಿ ಎಂದು ಹೇಳಿದ್ದಾರೆ. ಸಂಕಷ್ಟಗಳ ಸಂದರ್ಭದಲ್ಲಿ ತಾಳ್ಮೆಯಿಂದಿರುವಂತೆ, ತಮ್ಮ ಶೈಕ್ಷಣಿಕ ಸೇವಾಕಾರ್ಯದಲ್ಲಿ ಧೈರ್ಯದಿಂದಿರುವಂತೆ ಹಾಗೂ ಕ್ರಿಸ್ತರನ್ನು ಹಿಂಬಾಲಿಸುವಲ್ಲಿ ಸದಾ ಪರಿಶ್ರಮಿಸುವಂತೆ ಪೋಪರು ಈ ಧಾರ್ಮಿಕ ಸಭೆಯ ಭಗಿನಿಯರಿಗೆ ಸ್ಪೂರ್ತಿಯನ್ನು ತುಂಬಿದ್ದಾರೆ.
ಪೋಪ್ ಹದಿನಾಲ್ಕನೇ ಲಿಯೋ ಅವರೂ ಸಹ ಸಂತ ಅಗಸ್ಟೀನ್ ಸಭೆಗೆ ಸೇರಿದ ಯಾಜಕರಾಗಿದ್ದಾರೆ ಎಂಬುದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು.
"ನಿಮ್ಮ ಸೇವಾಕಾರ್ಯದಲ್ಲಿ ಸದಾ ಧೈರ್ಯದಿಂದ ಇರಬೇಕು" ಎಂದು ಹೇಳಿರುವ ಪೋಪ್ ಲಿಯೋ ಅವರು ಸಂಕಷ್ಟಗಳಲ್ಲಿ ತಾಳ್ಮೆಯನ್ನು ವಹಿಸಬೇಕು ಏಕೆಂದರೆ ಆಗಲೇ ಕ್ರಿಸ್ತರು ನಮ್ಮ ಸಂಕಷ್ಟಗಳಲ್ಲಿ ನಮ್ಮ ವಿಶ್ವಾಸಪರತೆಯನ್ನು ದೃಢೀಕರಿಸುತ್ತಾರೆ" ಎಂದು ಹೇಳಿದ್ದಾರೆ.
ಅಂತಿಮವಾಗಿ ಪೋಪ್ ಲಿಯೋ ಅವರು ಸಂಪೂರ್ಣವಾಗಿ ನಿಮ್ಮನ್ನೇ ನೀವು ದೇವರ ಕರುಣಾಶ್ರಯಕ್ಕೆ ಸಮರ್ಪಿಸಿಕೊಳ್ಳಿ ಎಂದು ಹೇಳಿದ ನಂತರ ಅವರಿಗಾಗಿ ಪ್ರಾರ್ಥಿಸಿದ್ದಾರೆ.