MAP

ಪೋಪ್ ಲಿಯೋ: ನಮ್ಮ ಹೃದಯದ ಬಾಗಿಲನ್ನು ತಟ್ಟುತ್ತಿರುವ ಪ್ರಭುವನ್ನು ಬರಮಾಡಿಕೊಳ್ಳೋಣ

ವಿಶ್ವಗುರು 14ನೇ ಲಿಯೋ ಅವರು ತಮ್ಮ ಭಾನುವಾರದ ತ್ರಿಕಾಲ ಪ್ರಾರ್ಥನೆಯಲ್ಲಿ ಮಾತನಾಡಿದ್ದಾರೆ. ಪ್ರಸ್ತುತ ಪೋಪ್ ಲಿಯೋ ಅವರು ಕಾಸ್ಟೆಲ್ ಗಂಡೋಲ್ಫೋ ಅರಮನೆಯಲ್ಲಿ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ಇತರರಿಗೆ ಕಿವಿಗೊಡುವುದು ಹಾಗೂ ಅವರನ್ನು ಅರ್ಥ ಮಾಡಿಕೊಳ್ಳುವುದರ ಕುರಿತು ಸಂದೇಶವನ್ನು ನೀಡಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ವಿಶ್ವಗುರು ಲಿಯೋ ಅವರು ಇಂದಿನ ಶುಭ ಸಂದೇಶದ ಅತಿಥಿ ಸತ್ಕಾರದ ಕುರಿತ ಸಾಲುಗಳನ್ನು ನೆನಪಿಸಿಕೊಳ್ಳುತ್ತಾ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದರು. ಇಂದಿನ ಶುಭ ಸಂದೇಶದಲ್ಲಿ ಮಾರುತ್ತಳು ಪ್ರಭುವಿಗೆ ಹಾಗೂ ಪ್ರಭುವಿನ ಜೊತೆ ಬಂದಿದ್ದ ಎಲ್ಲರಿಗೂ ಅತಿಥಿ ಸತ್ಕಾರವನ್ನು ಮಾಡುವುದರಲ್ಲಿ ತೊಡಗಿಸಿಕೊಂಡಿದ್ದಳು. ತನ್ನ ಮನೆಗೆ ಬಂದ ಪ್ರಭುವಿಗೆ ಅತ್ಯುತ್ತಮ ಸತ್ಕಾರವನ್ನು ನೀಡಬೇಕೆಂಬುದು ಮಾರ್ತಳ ಮನದಾಳದ ಬಯಕೆಯಾಗಿತ್ತು. ಆದರೆ ಮರಿಯ ಪ್ರಭುವಿನ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಅವರ ಬಳಿ ಕುಳಿತುಕೊಂಡಿದ್ದಳು.

"ಹೌದು ಅತಿಥಿಸತ್ಕಾರವೆಂಬುದು ಅಗತ್ಯವಾಗಿದೆ ಆದರೆ ಪ್ರಭುವಿನ ಮಾತುಗಳನ್ನು ಕೇಳುವ ಮರೆಯಲ ಆಯ್ಕೆಯೇ ಉತ್ತಮ ಎಂದು ಇಂದಿನ ಶುಭ ಸಂದೇಶದಲ್ಲಿ ಕ್ರಿಸ್ತರು ಹೇಳುತ್ತಾರೆ ಎಂದು ವಿಶ್ವಗುರು ಲಿಯೋ ಅವರು ಹೇಳುತ್ತಾರೆ.

ಕೊನೆಯಲ್ಲಿ, "ಉತ್ತಮ ಭಾಗವನ್ನು ಆಯ್ಕೆ ಮಾಡಲು ವಿಫಲರಾಗದಂತೆ" ನಿಧಾನವಾಗಿ ಮತ್ತು ಆಲಿಸುವ ಮೂಲಕ ಮೇರಿಯ ಮಾದರಿಯನ್ನು ಅನುಸರಿಸಲು ಪೋಪ್ ನಮ್ಮನ್ನು ಪ್ರೋತ್ಸಾಹಿಸಿದರು. ಮತ್ತು ಆತಿಥ್ಯದ ಕಲೆಯನ್ನು ಕಲಿಯುವಲ್ಲಿ ನಾವು ಯಾವಾಗಲೂ ಸುಧಾರಿಸಬಹುದು ಎಂದು ಅವರು ಸಲಹೆ ನೀಡಿದರು ಮತ್ತು ಇದು "ಇತರರನ್ನು ಸ್ವಾಗತಿಸುವುದು ಮತ್ತು ನಮ್ಮನ್ನು ಸ್ವಾಗತಿಸಲು ಅವಕಾಶ ನೀಡುವುದು ಎರಡನ್ನೂ ಒಳಗೊಂಡಿದೆ", ಏಕೆಂದರೆ "ನಮಗೆ ನೀಡಲು ಮಾತ್ರವಲ್ಲ, ಸ್ವೀಕರಿಸಲು ಬಹಳಷ್ಟು ಇದೆ." ಎಂದು ಪೋಪ್ ಅವರು ಹೇಳಿದರು.

20 ಜುಲೈ 2025, 18:07