MAP

ಶಾಂತಿ ಮೂಲಭೂತ ಹಕ್ಕು ಎಂದ ತಾಯಿಗೆ ಪ್ರತಿಕ್ರಿಯಿಸಿದ ಪೋಪ್ ಲಿಯೋ

ಪಿಯಾಜ್ಜೋ ಸ್ಯಾನ್ ಪಿಯೆತ್ರೋ ಎಂಬ ಇಟಾಲಿಯನ್ ಭಾಷೆಯ ನಿಯತಕಾಲಿಕೆಯಲ್ಲಿ ಪ್ರಕಟಿಸಿದಂತೆ, ತಾಯಿಯೊಬ್ಬಳು ತನ್ನ ಮಕ್ಕಳ ಭವಿಷ್ಯದ ಕುರಿತು ಪ್ರಶ್ನಿಸುತ್ತಾ ಪೋಪ್ ಅವರಿಗೆ ಪತ್ರವನ್ನು ಬರೆದಿದ್ದಾಳೆ. ಅದಕ್ಕೆ ಪೋಪ್ ಲಿಯೋ ಅವರು ಭರವಸೆಯ ಸಂದೇಶದ ಉತ್ತರವನ್ನು ನೀಡಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪಿಯಾಜ್ಜೋ ಸ್ಯಾನ್ ಪಿಯೆತ್ರೋ ಎಂಬ ಇಟಾಲಿಯನ್ ಭಾಷೆಯ ನಿಯತಕಾಲಿಕೆಯಲ್ಲಿ ಪ್ರಕಟಿಸಿದಂತೆ, ತಾಯಿಯೊಬ್ಬಳು ತನ್ನ ಮಕ್ಕಳ ಭವಿಷ್ಯದ ಕುರಿತು ಪ್ರಶ್ನಿಸುತ್ತಾ ಪೋಪ್ ಅವರಿಗೆ ಪತ್ರವನ್ನು ಬರೆದಿದ್ದಾಳೆ. ಅದಕ್ಕೆ ಪೋಪ್ ಲಿಯೋ ಅವರು ಭರವಸೆಯ ಸಂದೇಶದ ಉತ್ತರವನ್ನು ನೀಡಿದ್ದಾರೆ.

ಇಟಾಲಿಯನ್ ನಿಯತಕಾಲಿಕೆ ಪಿಯಾಝಾ ಸ್ಯಾನ್ ಪಿಯೆಟ್ರೊದ ಜುಲೈ ಸಂಚಿಕೆಯನ್ನು  ಯುವಕರ ಮಹೋತ್ಸವಕ್ಕೆ ಸಮರ್ಪಿಸಲಾಗಿತ್ತು ಮತ್ತು ಅದರಲ್ಲಿ, ಪೋಪ್ ಲಿಯೋ XIV ಅವರು ಶಾಂತಿಯ ಹಕ್ಕಿನ ಬಗ್ಗೆ ಕಳವಳ ವ್ಯಕ್ತಪಡಿಸಿ ಪತ್ರ ಬರೆದ ಮೂರು ಮಕ್ಕಳ ಯುವ ತಾಯಿ ಜೈರಾ ಅವರಿಗೆ ಭರವಸೆಯ ಸಂದೇಶವನ್ನು ಮರುತ್ತರವಾಗಿ ನೀಡಿದ್ದಾರೆ.

ಈ ಪತ್ರದಲ್ಲಿ, ಜೈರಾ "ಶಾಂತಿಯ ಆಳವಾದ ಅಗತ್ಯ" ವನ್ನು ಪ್ರತಿಬಿಂಬಿಸುತ್ತಾ, "ಒಂದು ವೇಳೆ ವಿಶ್ವ ಯುದ್ಧ ಭುಗಿಲೆದ್ದರೆ ಮಕ್ಕಳ ಕನಸುಗಳು ಏನಾಗುತ್ತವೆ? ಅವರ ಪೋಷಕರು ಮಾಡಿದ ತ್ಯಾಗಗಳಿಗೆ ಏನಾಗುತ್ತದೆ - ಮನೆ ಖರೀದಿಸುವುದು, ಅವರನ್ನು ಶಾಲೆಗೆ ಕಳುಹಿಸುವುದು, ಅವರ ಭವಿಷ್ಯಕ್ಕಾಗಿ ಉಳಿಸುವುದು?" ಎಂಬ ಪ್ರಶ್ನೆಗಳನ್ನು ಎತ್ತುತ್ತಾರೆ.

ಈ ಪ್ರಶ್ನೆಗಳಿಗೆ ಉತ್ತರಿಸುವ ಪೋಪ್ ಹದಿನಾಲ್ಕನೇ ಲಿಯೋ ಅವರು "ನಮ್ಮ ಪ್ರಾರ್ಥನೆ ಹಾಗೂ ಕಾಳಜಿ ದೇವರ ಹೃದಯವನ್ನು ತಲುಪುವ ಕೂಗು" ಎಂದು ಕರೆದಿದ್ದಾರೆ. ನಾವು ಕಷ್ಟಕರ ಮತ್ತು ದಿಗ್ಭ್ರಮೆಗೊಳಿಸುವ ಕ್ಷಣಗಳಲ್ಲಿ ಇರುವಲ್ಲಿ ದೇವರು ನಮ್ಮನ್ನು ಭೇಟಿಯಾಗುತ್ತಾನೆ ಎಂದು ಅವರು ಒತ್ತಿ ಹೇಳಿದ್ದಾರೆ.

ಆದರೂ, ಈ ಸಮಯದಲ್ಲಿ ನಾವು ನಿಷ್ಕ್ರಿಯರಾಗಿ ಉಳಿಯಬಾರದು ಎಂದು ಪೋಪ್ ಒತ್ತಿ ಹೇಳುತ್ತಾರೆ. ಬದಲಾಗಿ, ದೇವರ ಪ್ರೀತಿ "ಮಾನವ ಕುಟುಂಬದ ಒಳಿತಿಗಾಗಿ ಮತ್ತು ಏಕತೆಗಾಗಿ ಕಾರ್ಯನಿರ್ವಹಿಸಲು ನಮ್ಮನ್ನು ನಿರಂತರವಾಗಿ ಕರೆಯುತ್ತದೆ" ಎಂದು ಪೋಪ್ ಲಿಯೋ ಅವರು ಹೇಳಿದ್ದಾರೆ.

09 ಜುಲೈ 2025, 18:21