ಪ್ಯಾಲೆಸ್ತೀನ್ ಅಧ್ಯಕ್ಷರೊಂದಿಗೆ ಮಾತನಾಡಿದ ಪೋಪ್; ಮಾನವೀಯ ಕಾನೂನನ್ನು ಗೌರವಿಸಬೇಕು ಎಂದು ಕರೆ
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಹದಿನಾಲ್ಕನೇ ಲಿಯೋ ಅವರು ಪ್ಯಾಲೆಸ್ತೀನ್ ಅಧ್ಯಕ್ಷ ಮಹಮದ್ ಅಬ್ಬಾಸ್ ಅವರೊಂದಿಗೆ ಪೋನ್ ಕರೆಯಲ್ಲಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ನಾಗರೀಕರನ್ನು ಹಾಗೂ ಪವಿತ್ರ ಸ್ಥಳಗಳನ್ನು ಸಂರಕ್ಷಿಸುವ ಕುರಿತು ಮಾತನಾಡಿದ್ದಾರೆ. ಅಂತರಾಷ್ಟ್ರೀಯ ಕಾನೂನನ್ನು ಗೌರವಿಸುವ ಮೂಲಕ, ಪ್ರಸ್ತುತ ನಡೆಯುತ್ತಿರುವ ಯುದ್ಧದ ನಡುವೆ ನಾಗರೀಕರನ್ನು ಬಲವಂತವಾಗಿ ಬೇರೆಡೆಗೆ ವರ್ಗಾಯಿಸಬಾರದು ಎಂದು ಪೋಪ್ ಲಿಯೋ ಅವರು ಹೇಳಿದ್ದಾರೆ.
ವ್ಯಾಟಿಕನ್ ಮಾಧ್ಯಮ ಕಚೇರಿಯ ಹೇಳಿಕೆಯ ಪ್ರಕಾರ ಪ್ಯಾಲೆಸ್ತೀನ್ ಅಧ್ಯಕ್ಷ ಮಹಮದ್ ಅಬ್ಬಾಸ್ ಪೋಪ್ ಹದಿನಾಲ್ಕನೇ ಲಿಯೋ ಅವರಿಗೆ ಕರೆ ಮಾಡಿದರು. ಪೋಪ್ ಲಿಯೋ ಅವರು ಈ ಕರೆಯಲ್ಲಿ ಮಾತನಾಡುತ್ತಾ ಪ್ರಸ್ತುತ ಗಾಝಾ ಪ್ರದೇಶದಲ್ಲಿ ನಡೆಯಿತ್ತಿರುವ ಪರಿಸ್ಥತಿಗಳ ಕುರಿತು ಅವಲೋಕಿಸಿದ್ದಾರೆ.
"ದೂರವಾಣಿ ಕರೆಯ ಸಮಯದಲ್ಲಿ, ಪವಿತ್ರ ತಂದೆಯು ಅಂತರರಾಷ್ಟ್ರೀಯ ಮಾನವೀಯ ಕಾನೂನನ್ನು ಸಂಪೂರ್ಣವಾಗಿ ಗೌರವಿಸಬೇಕೆಂದು ತಮ್ಮ ಮನವಿಯನ್ನು ಪುನರಾವರ್ತಿಸಿದರು, ನಿರ್ದಿಷ್ಟವಾಗಿ ನಾಗರಿಕರು ಮತ್ತು ಪವಿತ್ರ ಸ್ಥಳಗಳನ್ನು ರಕ್ಷಿಸುವ ಬಾಧ್ಯತೆ, ಬಲವಂತದ ವಿವೇಚನೆಯಿಲ್ಲದ ಬಳಕೆ ಮತ್ತು ಜನಸಂಖ್ಯೆಯ ಬಲವಂತದ ವರ್ಗಾವಣೆಯನ್ನು ನಿಷೇಧಿಸುವುದನ್ನು ಒತ್ತಿ ಹೇಳಿದರು" ಎಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಲಾಗಿದೆ.
"ದುರಂತ ಮಾನವೀಯ ಪರಿಸ್ಥಿತಿಯನ್ನು ಗಮನಿಸಿದರೆ, ಸಂಘರ್ಷದ ಪರಿಣಾಮಗಳಿಗೆ ಹೆಚ್ಚು ದುರ್ಬಲರಾದವರಿಗೆ ನೆರವು ನೀಡುವ ಮತ್ತು ಮಾನವೀಯ ನೆರವಿನ ಸಮರ್ಪಕ ಪ್ರವೇಶಕ್ಕೆ ಅವಕಾಶ ನೀಡುವ ತುರ್ತು ಅಗತ್ಯಕ್ಕೆ ಒತ್ತು ನೀಡಲಾಯಿತು" ಎಂದು ವ್ಯಾಟಿಕನ್ ಮಾಧ್ಯಮ ಪ್ರಕಟಣೆಯು ತಿಳಿಸಿದೆ.