MAP

ಮೊಂತೆನೀಗ್ರೋ ಪ್ರಧಾನಮಂತ್ರಿಯನ್ನು ಸ್ವಾಗತಿಸಿದ ಪೋಪ್ ಲಿಯೋ

ಪೋಪ್ ಹದಿನಾಲ್ಕನೇ ಲಿಯೋ ಅವರು ಮೊಂತೆನೀಗ್ರೋ ದೇಶದ ಪ್ರಧಾನಮಂತ್ರಿ ಮಿಲೋಯ್ಕೋ ಸ್ಪಾಯಿಕ್ ಅವರನ್ನು ಶುಕ್ರವಾರ ವ್ಯಾಟಿಕನ್ ನಗರದಲ್ಲಿ ಸ್ವಾಗತಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಹದಿನಾಲ್ಕನೇ ಲಿಯೋ ಅವರು ಮೊಂತೆನೀಗ್ರೋ ದೇಶದ ಪ್ರಧಾನಮಂತ್ರಿ ಮಿಲೋಯ್ಕೋ ಸ್ಪಾಯಿಕ್ ಅವರನ್ನು ಶುಕ್ರವಾರ ವ್ಯಾಟಿಕನ್ ನಗರದಲ್ಲಿ ಸ್ವಾಗತಿಸಿದ್ದಾರೆ.

ವ್ಯಾಟಿಕನ್ ಮಾಧ್ಯಮ ಕಚೇರಿಯ ಪತ್ರಿಕಾ ಹೇಳಿಕೆಯ ಪ್ರಕಾರ ಪ್ರಧಾನಮಂತ್ರಿ ಮಿಲೋಯ್ಕೋ ಸ್ಪಾಯಿಕ್ ಅವರು ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೋ ಪರೋಲಿನ್ ಹಾಗೂ ವ್ಯಾಟಿಕನ್ ವಿದೇಶಾಂಗ ಸಂಪರ್ಕಗಳ ಕಾರ್ಯದರ್ಶಿ ಆರ್ಚ್'ಬಿಷಪ್ ಪೌಲ್ ರಿಚರ್ಡ್ ಗ್ಯಾಲಘರ್ ಅವರನ್ನು ಭೇಟಿ ಮಾಡಿ ಮಾತುಕತೆಯನ್ನು ನಡೆಸಿದ್ದಾರೆ.

ವ್ಯಾಟಿಕನ್ ಪತ್ರಿಕಾ ಹೇಳಿಕೆಯ ಪ್ರಕಾರ ಉಭಯ ಪಕ್ಷಗಳ ಮಾತುಕತೆಗಳು ಸೌಹಾರ್ದಯುತವಾಗಿದ್ದು, ಫಲಪ್ರದಾಯಕವಾಗಿದ್ದವು. ವ್ಯಾಟಿಕನ್ ಹಾಗೂ ಮೊಂತೆನೀಗ್ರೋ ದೇಶದ ನಡುವಿನ ಉತ್ತಮ ಸಂಬಂಧದ ಕುರಿತು ಚರ್ಚೆಗಳು ನಡೆದು, ಆ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು ಎಂಬ ಅನಿಸಿಕೆ ಉಭಯ ನಾಯಕರು ವ್ಯಕ್ತಪಡಿಸಿದರು. ಈ ಚರ್ಚೆಯಲ್ಲಿ ಅಂತರಾಷ್ಟ್ರೀಯ ವಿಷಯಗಳ ಕುರಿತೂ ಸಹ ಚರ್ಚಿಸಲಾಯಿತು.

04 ಜುಲೈ 2025, 16:09