ತಮ್ಮ ವಿಶ್ವಾಸದ ಸಾಕ್ಷಿಗೆ ವೃದ್ಧಾಶ್ರಮದ ಹಿರಿಯರಿಗೆ ಧನ್ಯವಾದ ತಿಳಿಸಿದ ಪೋಪ್ ಲಿಯೋ
ವರದಿ: ವ್ಯಾಟಿಕನ್ ನ್ಯೂಸ್
ಅಲ್ಬಾನ್ ಬೆಟ್ಟಗಳಲ್ಲಿರುವ ಸಂತ ಮರಿಯ ವೃದ್ಧಾಶ್ರಮಕ್ಕೆ ಭೇಟಿ ನೀಡಿದ ಪೋಪ್ ಹದಿನಾಲ್ಕನೇ ಲಿಯೋ ಅವರು ಅವರಿಗೆ ಭರವಸೆ, ಪ್ರೀತಿ ಹಾಗೂ ವಿಶ್ವಾಸದ ಮಾತುಗಳನ್ನಾಡಿದ್ದಾರೆ ಹಾಗೂ ವಿಶ್ವಾಸದ ಸಾಕ್ಷಿಗಳಾಗಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಟೆಲಿಗ್ರಾಂನಲ್ಲಿ ಹಾಕಿರುವ ಸಂದೇಶವನ್ನು ಉಲ್ಲೇಖಿಸುತ್ತಾ ವ್ಯಾಟಿಕನ್ ಮಾಧ್ಯಮ ಕಚೇರಿಯು "ಪೋಪ್ ಲಿಯೋ ಅವರು ಇಲ್ಲಿಗೆ ಭೇಟಿ ನೀಡಿದಾಗ ಅವರನ್ನು ಈ ಆಶ್ರಮವನ್ನು ನಡೆಸುತ್ತಿರುವ ಭಗಿನಿಯರು ಹಾಗೂ ಅಲ್ಲಿನ ಹಿರಿಯರು ಸ್ವಾಗತಿಸಿದರು" ಎಂದು ಹೇಳಿದೆ. ಪೋಪ್ ಲಿಯೋ ಅವರು ತಮ್ಮ ರಜಾ ದಿನಗಳನ್ನು ಕಳೆದ ವಿಲ್ಲಾ ಬರ್ಬೇರಿನಿಗೆ ಬಹು ಹತ್ತಿರದಲ್ಲಿದೆ ಈ ಆಶ್ರಮ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯ ಹೇಳಿಕೆಯು ಹೇಳಿದೆ.
ಈ ಆಶ್ರಮದಲ್ಲಿರುವ ಎಲ್ಲಾ ಹಿರಿಯರನ್ನು ಪೋಪ್ ಲಿಯೋ ಅವರು ವೈಯಕ್ತಿಕವಾಗಿ ಮಾತನಾಡಿಸಲು ಸಮಯವನ್ನು ತೆಗೆದುಕೊಂಡರು.
"ನಮ್ಮ ಪ್ರತಿಯೊಬ್ಬರಲ್ಲೂ ಸ್ವಲ್ಪ ಮಾರ್ಥ ಹಾಗೂ ಮರಿಯಳ ಗುಣಗಳಿವೆ" ಎಂದು ಹೇಳುತ್ತಾ ಪೋಪ್ ಲಿಯೋ ಅವರು ನಿನ್ನೆಯ ಶುಭಸಂದೇಶಕ್ಕೆ ಉಲ್ಲೇಖವನ್ನು ಕಲ್ಪಿಸಿದರು. ನಮ್ಮ ಬದುಕಿನ ಈ ಹಂತವು ಮರಿಯಳಂತೆ ಯೇಸುವಿನ ಪಾದದಲ್ಲಿ ಕುಳಿತುಕೊಂಡು, ಅವರ ಮಾತುಗಳನ್ನು ಕೇಳುವುದಾಗಿದೆ" ಎಂದು ಪೋಪ್ ಲಿಯೋ ಅವರು ಹೇಳಿದರು.
ಇದೇ ವೇಳೆ ಅವರು ಪ್ರಾರ್ಥನೆಯ ಪ್ರಾಮುಖ್ಯತೆಯ ಕುರಿತೂ ಸಹ ಹೇಳಿದರು.