ಪ್ಯಾರೀಸಿನ ಕಾರ್ಡಿನಲ್ ವಿಂಗ್ಟ್-ಟ್ರಾಯ್ ಅವರನ್ನು ನೆನಪಿಸಿಕೊಂಡ ಪೋಪ್ ಲಿಯೋ
ವರದಿ: ವ್ಯಾಟಿಕನ್ ನ್ಯೂಸ್
"ಒಳ್ಳೆಯ ಹಾಗೂ ವಿಶ್ವಾಸದ ಕುರುಬ" ಹೀಗೆಂದು ಹೇಳುತ್ತಾ ಪೋಪ್ ಲಿಯೋ ಅವರು ಪ್ಯಾರೀಸ್ ಮಹಾಧರ್ಮಕ್ಷೇತ್ರದ ನಿವೃತ್ತ ಮಹಾಧರ್ಮಾಧ್ಯಕ್ಷ ಕಾರ್ಡಿನಲ್ ಆಂದ್ರೆ ವಿಂಗ್ಟ್-ಟ್ರಾಯ್ ಅವರನ್ನು ನೆನಪಿಸಿಕೊಂಡಿದ್ದಾರೆ.
ಇದೇ ತಿಂಗಳು 18ನೇ ತಾರೀಖು ನಿಧನ ಹೊಂದಿದ ಪ್ಯಾರೀಸ್ ಮಹಾಧರ್ಮಕ್ಷೇತ್ರದ ನಿವೃತ್ತ ಮಹಾಧರ್ಮಾಧ್ಯಕ್ಷ ಕಾರ್ಡಿನಲ್ ಆಂದ್ರೆ ವಿಂಗ್ಟ್-ಟ್ರಾಯ್ ಅವರನ್ನು ಪ್ರಸ್ತುತ ಮಹಾಧರ್ಮಾಧ್ಯಕ್ಷ ಲಾರೆಂಟ್ ಉಲ್ರಿಚ್ ಅವರಿಗೆ ನೀಡಿದ ಟೆಲಿಗ್ರಾಂ ಸಂದೇಶದಲ್ಲಿ ಪೋಪ್ ಲಿಯೋ ಅವರು ನೆನಪಿಸಿಕೊಂಡಿದ್ದಾರೆ.
ಪ್ಯಾರೀಸ್ ಮಹಾಧರ್ಮಕ್ಷೇತ್ರದ ನಿವೃತ್ತ ಮಹಾಧರ್ಮಾಧ್ಯಕ್ಷ ಕಾರ್ಡಿನಲ್ ಆಂದ್ರೆ ವಿಂಗ್ಟ್-ಟ್ರಾಯ್ ಅವರ ನಿಧನಕ್ಕೆ ಮರುಗುತ್ತಿರುವ ಎಲ್ಲರಿಗೂ ಆಧ್ಯಾತ್ಮಿಕ ನಿಕಟತೆಯನ್ನು ಈ ಸಂದೇಶದಲ್ಲಿ ಪೋಪ್ ಲಿಯೋ ವ್ಯಕ್ತಪಡಿಸಿದ್ದಾರೆ. "ಒಳ್ಳೆಯ ಹಾಗೂ ವಿಶ್ವಾಸದ ಕುರುಬ" ಎಂದು ಹೇಳುವ ಮೂಲಕ ಕಾರ್ಡಿನಲ್ ವಿಂಗ್ಟ್-ಟ್ರಾಯ್ ಅವರನ್ನು ಪೋಪ್ ಹೊಗಳಿದ್ದಾರೆ.
ಪ್ಯಾರೀಸ್ ಮಹಾಧರ್ಮಕ್ಷೇತ್ರದ ನಿವೃತ್ತ ಮಹಾಧರ್ಮಾಧ್ಯಕ್ಷ ಕಾರ್ಡಿನಲ್ ಆಂದ್ರೆ ವಿಂಗ್ಟ್-ಟ್ರಾಯ್ ಅವರ ಅಂತಿಮ ಸಂಸ್ಕಾರವನ್ನು ನಾಳೆ ಜುಲೈ 23 ರಂದು ಪ್ಯಾರೀಸಿನ ನೊಟ್ರೆ ಡೇಮ್ ಪ್ರಧಾನಾಲಯದಲ್ಲಿ ಬಲಿಪೂಜೆಯ ನಂತರ ನೆರವೇರಿಸಲಾಗುವುದು.