ಬಾಂಗ್ಲಾದೇಶ ವಿಮಾನ ಅಪಘಾತಕ್ಕೆ ಮರುಗಿದ ಪೋಪ್ ಲಿಯೋ
ವರದಿ: ವ್ಯಾಟಿಕನ್ ನ್ಯೂಸ್
ಬಾಂಗ್ಲಾದೇಶಿ ಪೈಟರ್ ಜೆಟ್ ಒಂದು ಶಾಲೆಗೆ ಡಿಕ್ಕಿ ಹೊಡೆದ ಪರಿಣಾಮ ಸುಮಾರು 31 ಜನರು ಹತರಾಗಿದ್ದಾರೆ. ಈ ಹಿನ್ನೆಲೆ ಪೋಪ್ ಹದಿನಾಲ್ಕನೇ ಲಿಯೋ ಅವರು ಘಟನೆಗೆ ತಮ್ಮ ಶೋಕವನ್ನು ವ್ಯಕ್ತಪಡಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ನಡೆದ ವಿಮಾನ ಅಪಘಾತದಲ್ಲಿ ಸಂಭವಿಸಿದ ಜೀವಹಾನಿಯಿಂದ ಪೋಪ್ ಲಿಯೋ ಅವರು "ತೀವ್ರ ದುಃಖಿತರಾಗಿದ್ದಾರೆ" ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ಹೇಳಿದೆ.
ಬಾಂಗ್ಲಾದೇಶದ ವಾಯುಪಡೆಗೆ ಸೇರಿದ ಫೈಟರ್ ಜೆಟ್ ರಾಜಧಾನಿ ಢಾಕಾದಲ್ಲಿರುವ ಮೈಲ್‌ಸ್ಟೋನ್ ಶಾಲೆ ಮತ್ತು ಕಾಲೇಜಿಗೆ ಅಪ್ಪಳಿಸಿದ ಪರಿಣಾಮ ಕನಿಷ್ಠ 31 ಜನರು ಸಾವನ್ನಪ್ಪಿದ್ದಾರೆ.
ಮಂಗಳವಾರ ಕಳುಹಿಸಲಾದ ಟೆಲಿಗ್ರಾಮ್‌ನಲ್ಲಿ, ಪೋಪ್ ಲಿಯೋ ಅವರು "ಮೃತರನ್ನು ಸರ್ವಶಕ್ತನ ಕರುಣಾಮಯಿ ಪ್ರೀತಿಗೆ ಒಪ್ಪಿಸುತ್ತೇನೆ" ಎಂದು ಹೇಳಿದರು.
ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪರೋಲಿನ್ ಅವರು ಸಹಿ ಮಾಡಿದ ಸಂದೇಶದಲ್ಲಿ, ಪೋಪ್ "ಅವರ ಕುಟುಂಬಗಳು ಮತ್ತು ಸ್ನೇಹಿತರು ಅವರ ದುಃಖದಲ್ಲಿ ಸಾಂತ್ವನ ಪಡೆಯಲಿ ಮತ್ತು ಗಾಯಗೊಂಡವರ ಗುಣಪಡಿಸುವಿಕೆ ಮತ್ತು ಸಾಂತ್ವನಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ" ಎಂದು ಸೇರಿಸುತ್ತದೆ.
"ಪೋಪ್ ಇಡೀ ಶಾಲಾ ಸಮುದಾಯ ಮತ್ತು ಈ ದುರಂತದಿಂದ ಪ್ರಭಾವಿತರಾದ ಎಲ್ಲರಿಗೂ, ಶಾಂತಿ ಮತ್ತು ಶಕ್ತಿಯ ದೈವಿಕ ಆಶೀರ್ವಾದಗಳನ್ನು ಬೇಡುತ್ತಾರೆ" ಎಂದು ಟೆಲಿಗ್ರಾಮ್ ಮುಕ್ತಾಯವಾಗುತ್ತದೆ.