ಇರಾಕ್ ಬೆಂಕಿ ಅವಘಡದ ಮೃತರಿಗೆ ಸಂತಾಪವನ್ನು ಸೂಚಿಸಿದ ಪೋಪ್
ವರದಿ: ವ್ಯಾಟಿಕನ್ ನ್ಯೂಸ್
ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೋ ಪರೋಲಿನ್ ಅವರು ಸಹಿ ಮಾಡಿರುವ ಟೆಲಿಗ್ರಾಂ ಸಂದೇಶದಲ್ಲಿ ಪೋಪ್ ಲಿಯೋ XIV ಅವರು ಇರಾಕಿನ ಶಾಪಿಂಗ್ ಸೆಂಟರ್‌ನಲ್ಲಿ ಸಂಭವಿಸಿದ ಬೆಂಕಿಯ ಪರಿಣಾಮಗಳಿಂದ ಬಳಲುತ್ತಿರುವವರಿಗೆ ತಮ್ಮ ಆಧ್ಯಾತ್ಮಿಕ ಐಕ್ಯತೆಯ ಭರವಸೆ ನೀಡುತ್ತಾರೆ ಮತ್ತು ದುರಂತದಲ್ಲಿ ಮಡಿದವರಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ.
ಇರಾಕ್‌ನಲ್ಲಿ ಶಾಪಿಂಗ್ ಸೆಂಟರ್‌ನಲ್ಲಿ ಸಂಭವಿಸಿದ ಬೆಂಕಿಯ ಬಲಿಪಶುಗಳಿಗೆ ಪೋಪ್ ಲಿಯೋ XIV ಅವರು ತಮ್ಮ "ಆಧ್ಯಾತ್ಮಿಕ ಒಗ್ಗಟ್ಟಿನ" ಭರವಸೆ ನೀಡಿದ್ದಾರೆ, ವಿಶೇಷವಾಗಿ ದುರಂತದಲ್ಲಿ ಗಾಯಗೊಂಡವರಿಗೆ ಮತ್ತು ಪ್ರೀತಿಪಾತ್ರರನ್ನು ಕಳೆದುಕೊಂಡವರ ಕುಟುಂಬಗಳಿಗೆ ತಮ್ಮ ನಿಕಟತೆಯನ್ನು ವ್ಯಕ್ತಪಡಿಸಿದ್ದಾರೆ.
ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೋ ಪರೋಲಿನ್ ಅವರು ಸಹಿ ಮಾಡಿರುವ ಟೆಲಿಗ್ರಾಂ ಸಂದೇಶದಲ್ಲಿ ಪೋಪ್ ಲಿಯೋ XIV ಅವರು ಬೆಂಕಿ ಅವಘಡದ ಸಂತ್ರಸ್ಥರಿಗೆ ತಮ್ಮ ಆಧ್ಯಾತ್ಮಿಕ ಸಾಮೀಪ್ಯವನ್ನು ವ್ಯಕ್ತಪಡಿಸಿದ್ದಾರೆ.
ಪೂರ್ವ ಇರಾಕ್‌ನ ವಾಸಿತ್ ಪ್ರಾಂತ್ಯದ ಇರಾಕಿನ ಕುಟ್ ನಗರದ ಹೊಸ ಶಾಪಿಂಗ್ ಸೆಂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಕನಿಷ್ಠ 69 ಜನರು ಸಾವನ್ನಪ್ಪಿದ್ದಾರೆ. ಇತರ ಹನ್ನೊಂದು ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಕೇವಲ ಐದು ದಿನಗಳ ಹಿಂದೆ ತೆರೆಯಲಾದ ಮಾಲ್‌ನಲ್ಲಿ ಹೈಪರ್‌ಮಾರ್ಕೆಟ್ ಮತ್ತು ರೆಸ್ಟೋರೆಂಟ್ ಸೇರಿದ್ದು, ಬೆಂಕಿ ಕಾಣಿಸಿಕೊಂಡಾಗ ಜನರು ಶಾಪಿಂಗ್ ಮತ್ತು ಊಟ ಮಾಡುತ್ತಿದ್ದರು. ನಾಗರಿಕ ರಕ್ಷಣಾ ತಂಡಗಳು ಕಟ್ಟಡದ ಒಳಗಿನಿಂದ 45 ಜನರನ್ನು ರಕ್ಷಿಸಿವೆ.
"ನಮ್ಮ ಮೇಲೆ ಒಂದು ದುರಂತ ಮತ್ತು ವಿಪತ್ತು ಸಂಭವಿಸಿದೆ" ಎಂದು ವಾಸಿತ್ ರಾಜ್ಯಪಾಲರು ಹೇಳಿಕೆಯಲ್ಲಿ ತಿಳಿಸಿದ್ದಾರೆ ಮತ್ತು ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿದ್ದಾರೆ.