MAP

ವ್ಯಾಟಿಕನ್'ಗೆ ಮರಳುವ ಹೊತ್ತಿನಲ್ಲಿ ಶಸ್ತ್ರಾಸ್ತ್ರ ವ್ಯಾಪಾರವನ್ನು ಖಂಡಿಸಿದ ಪೋಪ್ ಲಿಯೋ

ಕ್ಯಾಸ್ಟೆಲ್ ಗಂಡೋಲ್ಫೋ ನಿವಾಸವನ್ನು ತೊರೆಯುವುದಕ್ಕೂ ಮುಂಚಿತವಾಗಿ ಪೋಪ್ ಲಿಯೋ ಅವರು ಪತ್ರಕರ್ತರೊಂದಿಗೆ ಮಾತಾಡಲು ಕೆಲವು ಕ್ಷಣಗಳನ್ನು ಮೀಸಲಿಟ್ಟರು. ಈ ವೇಳೆ ಅವರು ಪತ್ರಕರ್ತರ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಕ್ಯಾಸ್ಟೆಲ್ ಗಂಡೋಲ್ಫೋ ನಿವಾಸವನ್ನು ತೊರೆಯುವುದಕ್ಕೂ ಮುಂಚಿತವಾಗಿ ಪೋಪ್ ಲಿಯೋ ಅವರು ಪತ್ರಕರ್ತರೊಂದಿಗೆ ಮಾತಾಡಲು ಕೆಲವು ಕ್ಷಣಗಳನ್ನು ಮೀಸಲಿಟ್ಟರು. ಈ ವೇಳೆ ಅವರು ಪತ್ರಕರ್ತರ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

"ಎಲ್ಲರೂ ಸಹ ಶಸ್ತ್ರಾಸ್ತ್ರಗಳನ್ನು ತೊರೆಯಲು ನಾವು ಪ್ರೋತ್ಸಾಹಿಸಬೇಕು. ಎಲ್ಲಾ ಯುದ್ಧಗಳ ಹಿಂದೆ ಇರುವ ಹಣದ ವ್ಯಾಪಾರವನ್ನು ನಾವು ನಿಲ್ಲಿಸಬೇಕು" ಎಂದು ಪೋಪ್ ಹದಿನಾಲ್ಕನೇ ಲಿಯೋ ಅವರು ಹೇಳಿದ್ದಾರೆ.

16 ದಿನಗಳ ನಂತರ ಪೋಪ್ ಲಿಯೋ ಅವರು ತಮ್ಮ ಬೇಸಿಗೆ ನಿವಾಸ ಕ್ಯಾಸ್ಟೆಲ್ ಗಂಡೋಲ್ಫೋದಿಂದ ವ್ಯಾಟಿಕನ್ ನಗರಕ್ಕೆ ಮರಳುವ ಸಂಧರ್ಭದಲ್ಲಿ ಈ ಮಾತುಗಳನ್ನು ಹೇಳಿದ್ದಾರೆ. "ಗಾಝಾದಂತಹ ಯುದ್ಧಪೀಡಿತ ಪ್ರದೇಶಗಳಿಗೆ ವೈಯಕ್ತಿಕವಾಗಿ ಭೇಟಿ ನೀಡುವುದು ನನ್ನ ಆಯ್ಕೆಯಾಗಿದೆ. ಆದರೆ, ಇದು ಸಮಸ್ಯೆಯನ್ನು ಸಂಪೂರ್ಣ ಬಗೆಹರಿಸುವುದಿಲ್ಲ. ಏಕೆಂದರೆ, ಮೊದಲು ಶಸ್ತ್ರಾಸ್ತ್ರಗಳ ಖರೀಧಿ ಹಾಗೂ ವ್ಯಾಪಾರವು ಸಂಪೂರ್ಣವಾಗಿ ನಿಲ್ಲಬೇಕು" ಎಂದು ಪೋಪ್ ಲಿಯೋ ಅವರು ಹೇಳಿದರು.

"ಅನೇಕ ಬಾರಿ, ಯುದ್ಧ ಸಾಧನಗಳೊಂದಿಗೆ ಮನುಷ್ಯರು ಮೌಲ್ಯವಿಲ್ಲದವರಾಗುತ್ತಾರೆ" ಎಂದು ಹೇಳಿರುವ ಪೋಪ್ ಲಿಯೋ ಅವರು ಕ್ರೈಸ್ತ, ಮುಸ್ಲಿಂ ಸೇರಿದಂತೆ ಯಾವುದೇ ಧರ್ಮಕ್ಕೆ ಸೇರಿದ ಮನುಷ್ಯರನ್ನು ಘನತೆಯಿಂದ ನಡೆಸಿಕೊಳ್ಳಬೇಕು" ಎಂದು ಹೇಳಿದ್ದಾರೆ. 

ತಮ್ಮ ರಜಾ ದಿನಗಳ ಕುರಿತು ಮಾತನಾಡಿದ ಅವರು ನಾನು ಕೊಂಚ ವಿಶ್ರಾಂತಿ ಪಡೆದೆ. ಆದರೆ, ನನ್ನ ಕೆಲಸವನ್ನು ಮುಂದುವರೆಸಿದ್ದೆ ಎಂದು ಹೇಳಿದರು.

23 ಜುಲೈ 2025, 16:18