MAP

ಡೊಮಿನಿಕನ್ನರಿಗೆ ಪೋಪ್: ಪವಿತ್ರಾತ್ಮರಿಗೆ ಕಿವಿಗೊಡಿರಿ

ಡೊಮಿನಿಕ್ ಸಭೆಯ ಗುರುಗಳು ರೋಮ್ ನಗರದಲ್ಲಿ ತಮ್ಮ ಧಾರ್ಮಿಕ ಸಭೆಯ ಸಮ್ಮೇಳನವನ್ನು ನಡೆಸುತ್ತಿರುವ ಹೊತ್ತಿನಲ್ಲಿ ಪೋಪ್ ಹದಿನಾಲ್ಕನೇ ಲಿಯೋ ಅವರು ಅವರನ್ನುದ್ಧೇಶಿಸಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಪವಿತ್ರಾತ್ಮರಿಗೆ ಕಿವಿಗೊಡಿರಿ ಎಂದು ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಡೊಮಿನಿಕ್ ಸಭೆಯ ಗುರುಗಳು ರೋಮ್ ನಗರದಲ್ಲಿ ತಮ್ಮ ಧಾರ್ಮಿಕ ಸಭೆಯ ಸಮ್ಮೇಳನವನ್ನು ನಡೆಸುತ್ತಿರುವ ಹೊತ್ತಿನಲ್ಲಿ ಪೋಪ್ ಹದಿನಾಲ್ಕನೇ ಲಿಯೋ ಅವರು ಅವರನ್ನುದ್ಧೇಶಿಸಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಪವಿತ್ರಾತ್ಮರಿಗೆ ಕಿವಿಗೊಡಿರಿ ಎಂದು ಹೇಳಿದ್ದಾರೆ.

ಪ್ರಸ್ತುತ ಕ್ರಾಕೋವ್ ನಗರದಲ್ಲಿ ನಡೆಯುತ್ತಿರುವ ಡೊಮಿನಿಕನ್ ಸಭೆಯ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ ಗುರುಗಳಿಗೆ ಪೋಪ್ ಲಿಯೋ ಅವರು ಸಂದೇಶವನ್ನು ನೀಡಿದ್ದಾರೆ.

ಡೊಮಿನಿಕ್ ಸಭೆಯ ಮಾಸ್ಟರ್ ಜನರಲ್ ಆದ ಫಾದರ್ ಜೆರಾರ್ಡ್ ತಿಮೋನೆರ್ ಅವರಿಗೆ ಪೋಪ್ ಲಿಯೋ ಅವರು ಪತ್ರವನ್ನು ಬರೆದಿದ್ದಾರೆ. ಈ ಪತ್ರದಲ್ಲಿ "ವರದಾನದ ಈ ಸಂದರ್ಭದಲ್ಲಿ ಆಧ್ಯಾತ್ಮಿಕವಾಗಿ ಭರವಸೆಯಿಂದ ನವೀಕೃತರಾಗಲು ಪವಿತ್ರಾತ್ಮರಿಗೆ ಕಿವಿಗೊಡಿರಿ" ಎಂದು ಪೋಪ್ ಲಿಯೋ ಅವರು ಹೇಳಿದ್ದಾರೆ.

"ನಿಮ್ಮ ಸಹೋದರತ್ವ ಮತ್ತು ಪ್ರಾರ್ಥನೆಯ ಹಂಚಿಕೆಯ ಅನುಭವವು ಡೊಮಿನಿಕನ್ನರಾಗಿ ನಿಮ್ಮನ್ನು ಒಂದುಗೂಡಿಸುವ ಸಹಭಾಗಿತ್ವದ ಬಂಧಗಳನ್ನು ಬಲಪಡಿಸಲಿ ಮತ್ತು ಚಿಂತನಶೀಲ ಬೋಧಕರಾಗಿ ನಿಮ್ಮ ವೃತ್ತಿಯನ್ನು ಹೆಚ್ಚು ಸಂಪೂರ್ಣವಾಗಿ ಬದುಕಲು ನಿಮ್ಮನ್ನು ಪ್ರೇರೇಪಿಸಲಿ" ಎಂದು ಅವರು ಪತ್ರದಲ್ಲಿ ಬರೆಯುತ್ತಾರೆ.

ಅಂತಿಮವಾಗಿ ಡೊಮಿನಿಕನ್ ಸಭೆಯ ಸಮ್ಮೇಳನವನ್ನು ಮಾತೆ ಮರಿಯಮ್ಮನವರ ಮಧ್ಯಸ್ಥಿಕೆಗೆ ಪೋಪ್ ಲಿಯೋ ಅವರು ಅರ್ಪಿಸಿದ್ದಾರೆ.

24 ಜುಲೈ 2025, 17:08