ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್: ನಾವು ಸಾವನ್ನು ಮೋಸ ಮಾಡಲಾಗುವುದಿಲ್ಲ; ಆದರೆ ನಿತ್ಯಜೀವಕ್ಕಾಗಿ ಪ್ರಸ್ತುತ ಜೀವನವನ್ನು ಜೀವಿಸಬೇಕು
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಹದಿನಾಲ್ಕನೇ ಲಿಯೋ ಅವರು ಪ್ರಸ್ತುತ ತಮ್ಮ ರಜೆ ದಿನಗಳನ್ನು ಕಾಸ್ಟೆಲ್ ಗಂಡೋಲ್ಫೋದಲ್ಲಿ ಕಳೆಯುತ್ತಿರುವ ಹಿನ್ನೆಲೆ, ಈ ದಿನದ ತ್ರಿಕಾಲ ಪ್ರಾರ್ಥನೆಯಲ್ಲಿ ಅಲ್ಲಿಂದಲೇ ನೆರವೇರಿಸಿದ್ಧಾರೆ. ಈ ವೇಳೆ ಅವರು ನಾವು ಸಾವನ್ನು ಮೋಸ ಮಾಡಲಾಗುವುದಿಲ್ಲ; ಆದರೆ ನಿತ್ಯಜೀವಕ್ಕಾಗಿ ಪ್ರಸ್ತುತ ಜೀವನವನ್ನು ಜೀವಿಸಬೇಕು ಎಂದು ಹೇಳಿದ್ದಾರೆ.
ಪೋಪ್ ಹದಿನಾಲ್ಕನೇ ಲಿಯೋ ಅವರು ಇಲ್ಲಿನ ಸ್ವಾತಂತ್ರ್ಯ ಚೌಕದಲ್ಲಿ ನೆರೆದಿದ್ದ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದರು. ಇಂದಿನ ಶುಭಸಂದೇಶದಲ್ಲಿ ವ್ಯಕ್ತಿಯೊಬ್ಬನು ಕ್ರಿಸ್ತರಿಗೆ ಕೇಳುವ "ಬೋಧಕರೇ, ಅಮರ ಜೀವವನ್ನು ಪಡೆಯಬೇಕೆಂದರೆ ನಾನೇನು ಮಾಡಬೇಕು" ಎಂದು ಕೇಳಿದಾಗ ಕ್ರಿಸ್ತರು ನಿನ್ನೆಲ್ಲಾ ಆಸ್ತಿಯನ್ನು ಮಾರಿ, ನನ್ನನ್ನು ಹಿಂಬಾಲಿಸು ಎಂದು ಹೇಳುತ್ತಾರೆ.
ನಾವು ನಿತ್ಯಜೀವವನ್ನು ಖರೀದಿಸಲು ಅಥವಾ ಮಾತುಕತೆಯ ಮೂಲಕ ಪಡೆದುಕೊಳ್ಳಲು ಸಾಧ್ಯವಿಲ್ಲ. ಬದಲಿಗೆ ಅದನ್ನು ನಾವು ಪಡೆದುಕೊಳ್ಳುವತ್ತ ನಮ್ಮ ಪ್ರಸ್ತುತ ಬದುಕಿನಲ್ಲಿ ಆಧ್ಯಾತ್ಮಿಕವಾಗಿ ಪ್ರಯತ್ನಿಸಬೇಕು ಎಂದು ಪೋಪ್ ಹದಿನಾಲ್ಕನೇ ಲಿಯೋ ಅವರು ಚಿಂತನೆಯನ್ನು ವ್ಯಕ್ತಪಡಿಸಿದರು.
"ದೇವರನ್ನು ಮತ್ತು ನಮ್ಮ ನೆರೆಯವರನ್ನು ಪ್ರೀತಿಸುವ ಸರ್ವೋಚ್ಚ ಆಜ್ಞೆಯು ಎಲ್ಲಾ ಮಾನವ ಕಾನೂನುಗಳನ್ನು ಮೀರಿಸುತ್ತದೆ ಮತ್ತು ಅವುಗಳಿಗೆ ಅವುಗಳ ನಿಜವಾದ ಅರ್ಥವನ್ನು ನೀಡುತ್ತದೆ ಎಂದು ಪೋಪ್ ಲಿಯೋ ಅವರು ನೆನಪಿಸಿಕೊಳ್ಳುತ್ತಾರೆ.
"ಶಾಶ್ವತವಾಗಿ ಬದುಕಲು, ನಾವು ಸಾವಿಗೆ ಮೋಸ ಮಾಡಬೇಕಾಗಿಲ್ಲ, ಬದಲಿಗೆ ಈ ಸಮಯದಲ್ಲಿ ಇತರರನ್ನು ನೋಡಿಕೊಳ್ಳುವ ಮೂಲಕ ಜೀವನಕ್ಕೆ ಸೇವೆ ಸಲ್ಲಿಸಬೇಕು" ಎಂದು ಅವರು ಹೇಳಿದರು.